More

    2000 ರೂ. ಯಾವ ಮೂಲೆಗೆ? ಹೆಸರಾಂತ ಹೋಟೆಲ್​ನ ಹಿಗ್ಗಾಮುಗ್ಗಾ ಜಾಡಿಸಿದ ಉದ್ಯಮಿ!

    ಗುರುಗ್ರಾಮ್: ಹರಿಯಾಣದ ಗುರುಗ್ರಾಮ್​ನ ಹೋಟೆಲ್​ ತನ್ನ ಇಂಟರ್ನ್​ಗಳಿಗೆ ಕೊಡುತ್ತಿರುವ ಸ್ಟೇ-ಫಂಡ್​ ಬಗ್ಗೆ ಮಾಹಿತಿ ಪಡೆದ ಜಿಎಸ್​ಎಫ್​ ವೇಗವರ್ಧಕ ಸಂಸ್ಥಾಪಕ, ಉದ್ಯಮಿ ರಾಜೇಶ್ ಸಾಹ್ನಿ ಒಂದು ನಿಮಿಷ ಭಾರೀ ಅಚ್ಚರಿಗೆ ಒಳಗಾಗಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅವರು, ರೆಸ್ಟೋರೆಂಟ್​ನವರಿಗೆ ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್ ಒಳಬೇಗುದಿಗೆ ಬ್ರೇಕ್ ಹಾಕಲು ಮುಂದಾದ ಸಚಿವ ತಿಮ್ಮಾಪುರ

    ಒಬ್ಬ ಇಂಟರ್ನ್‌ಗೆ ಮಾಸಿಕ ಸ್ಟೈಫಂಡ್ ಎಂದು ಕೇವಲ 2,000 ರೂ. ನೀಡುವುದು ಎಷ್ಟು ಸರಿ? ಈ ಬಗ್ಗೆ ನಿಮಗೆ ನಾಚಿಕೆ ಆಗುವುದಿಲ್ಲವೇ, ಇದೆಂಥಾ ದುರಾದೃಷ್ಟಕರ! ಆ ಹಣ ಯಾವುದಕ್ಕೆ ಸಾಕಾಗುತ್ತದೆ? ಎಂದು ಐಷಾರಾಮಿ ಹೋಟೆಲ್​ನವರನ್ನು ಎಕ್ಸ್‌ನಲ್ಲಿ (ಈ ಹಿಂದಿನ ಟ್ವಿಟರ್) ಪ್ರಶ್ನಿಸಿದ್ದಾರೆ.

    ಇಂಟರ್ನ್ ವೇತನದ ಬಗ್ಗೆ ತಿಳಿದುಕೊಂಡ ನಂತರ ಟ್ವಿಟರ್​ನಲ್ಲಿ ಬರೆದುಕೊಂಡ ಸಾಹ್ನಿ, “ಹೋಟೆಲ್‌ನಲ್ಲಿ ಸ್ಟಾರ್ಟ್‌ಅಪ್ ಸಭೆಯಲ್ಲಿ ಭಾಗವಹಿಸಿದೆ. ಆಗ ಯುವ ಲಾಬಿ ಮ್ಯಾನೇಜರ್‌ವೊಬ್ಬರು ನನ್ನನ್ನು ಸಂಪರ್ಕಿಸಿ ಮಾತುಕತೆ ನಡೆಸಿದರು. ಇದೇ ಹೋಟೆಲ್​ನಲ್ಲಿ ಮೂರು ತಿಂಗಳಿಂದ ಇಂಟರ್ನ್​ಶಿಪ್​ ಮಾಡುತ್ತಿರುವ ಪದವೀಧರ, ಮಾಸಿಕ ಸ್ಟೈಫಂಡ್ ಎಂದು ಪಡೆಯುತ್ತಿದದ್ದು ಕೇವಲ 2,000 ರೂ. ಮಾತ್ರ ಎಂಬುದನ್ನು ಕೇಳಿ ಶಾಕ್ ಆಯಿತು” ಎಂದರು.

    ಇದನ್ನೂ ಓದಿ: 85 ವರ್ಷ ಮೇಲ್ಪಟ್ಟರು, ಅಂಗವಿಕಲರಿಗೆ ಮನೆಯಿಂದಲೇ ಮತದಾನದ ವ್ಯವಸ್ಥೆ

    “ಇದು ಅಸಹ್ಯಕರ! ತಿಂಗಳಿಗೆ 2,000 ರೂ. ಸ್ಟೈಫಂಡ್ ನೀಡಿದರೆ ಗುರುಗ್ರಾಮ್‌ನಲ್ಲಿ ಬದುಕಲು ಹೇಗೆ ಸಾಧ್ಯ?” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಸಾಹ್ನಿ ಅವರ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ತಮ್ಮ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ. ಒಬ್ಬರು, “ಹೌದು ಸರ್​. ಅನೇಕರು ಚಿಲ್ಲರೆ ವ್ಯಾಪಾರದಂತಹ ಉದ್ಯಮಗಳಲ್ಲಿ ಉಚಿತವಾಗಿ ಇಂಟರ್‌ನಿಂಗ್ ಮಾಡುತ್ತಿದ್ದಾರೆ. ಅನೇಕ ಸ್ಟಾರ್ಟ್‌ಅಪ್‌ಗಳು ಕೇವಲ ಪ್ರಯಾಣ ವೆಚ್ಚವನ್ನು ಮಾತ್ರ ಪಾವತಿಸುತ್ತಿವೆ. ಭಾರತದಲ್ಲಿನ ಇಂಟರ್ನ್‌ಶಿಪ್ ರಿಯಾಲಿಟಿಗೆ ಸ್ವಾಗತ” ಎಂದು ಹೇಳಿದ್ದಾರೆ,(ಏಜೆನ್ಸೀಸ್). 

    ಶಾರುಖ್, ಕಾಜೋಲ್ ತಿರಸ್ಕರಿಸಿದ ಈ ಸಿನಿಮಾ ಗಳಿಸಿದ್ದು 460 ಕೋಟಿ ರೂ., 3 ರಾಷ್ಟ್ರೀಯ ಪ್ರಶಸ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts