More

    ಹೊಸದಾಗಿ 835 ಶಾಲೇಲಿ ಆಂಗ್ಲ ಮಾಧ್ಯಮ; ಶಿಕ್ಷಣ ಸಚಿವ ಸುರೇಶ್​ಕುಮಾರ್ ಮಾಹಿತಿ

    ಬೆಂಗಳೂರು: 2020-21ನೇ ಸಾಲಿಗೆ 835 ಹೆಚ್ಚುವರಿಯಾಗಿ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯ ಆಂಗ್ಲ ಮಾಧ್ಯಮ (ದ್ವಿಭಾಷಾ) ವಿಭಾಗಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ನಿಯಮಾನುಸಾರ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಶಾಸಕ ವೇದವ್ಯಾಸ್ ಕಾಮತ್ ಪ್ರಶ್ನೆಗೆ ಉತ್ತರ ನೀಡಿರುವ ಶಿಕ್ಷಣ ಸಚಿವ ಸುರೇಶ್​ಕುಮಾರ್, 2019-20ನೇ ಸಾಲಿನಲ್ಲಿ 276 ಕರ್ನಾಟಕ ಪಬ್ಲಿಕ್ ಶಾಲೆಗಳು ಒಳಗೊಂಡಂತೆ ಸಾವಿರದೊಂದು ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯ ಆಂಗ್ಲ ಮಾಧ್ಯಮ ವಿಭಾಗ ಆರಂಭಿಸಲು ಅನುಮತಿ ನೀಡಲಾಗಿತ್ತು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 4 ಶಾಲೆಗಳಂತೆ ಆಂಗ್ಲ ಮಾಧ್ಯಮ ವಿಭಾಗಗಳನ್ನು ಆಯ್ಕೆ ಮಾಡಲಾಗುವುದು, ದಾಖಲಾತಿ ಪ್ರಮಾಣ ಹೆಚ್ಚಿರುವ ಹಾಗೂ 1ರಿಂದ 10ನೇ ತರಗತಿ ಹೊಂದಿರುವ ಶಾಲೆಗಳಿಗೆ, ಜತೆಗೆ ಕೊಠಡಿ ಲಭ್ಯವಿರುವ ಕಡೆ ಆದ್ಯತೆ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.

    ಒಂದು ಭಾಷೆಯಾಗಷ್ಟೇ ಉರ್ದು ಕಲಿಸಿ

    ಮದರಸಾಗಳಲ್ಲಿ ಉರ್ದುವನ್ನು ಒಂದು ಭಾಷೆಯಾಗಿ ಕಲಿಸಿದರೆ ಸಾಕು, ಉಳಿದ ವಿಷಯವನ್ನು ಕನ್ನಡ ಅಥವಾ ಇಂಗ್ಲಿಷ್​ನಲ್ಲಿ ಕಲಿಸಬೇಕು ಎಂದು ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಗುರುವಾರ ಕುಮಾರ ಬಂಗಾರಪ್ಪ ನೇತೃತ್ವದ ಸಮಿತಿ ವಿಧಾನಸಭೆಯಲ್ಲಿ ವರದಿ ಮಂಡಿಸಿತು. ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಹಣ ಬಿಡುಗಡೆ ಮಾಡಿದರೆ ಮಾತ್ರ ಹಿಂದುಳಿದವರ ಅಭಿವೃದ್ಧಿಯಾಗುತ್ತದೆ, ಈ ಕಾರಣಕ್ಕೆ ಜನಗಣತಿ ನಡೆಸಬೇಕು ಎಂದು ಹೇಳಿದೆ. ಮದರಸಾ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳು 7ನೇ ತರಗತಿ ನಂತರ ಶಿಕ್ಷಣವನ್ನು ಮುಂದುವರಿಸುವುದಿಲ್ಲ. ಅಲ್ಲಿ ಕೇವಲ ಉರ್ದು ಭಾಷೆಯಲ್ಲಿಯೇ ಎಲ್ಲ ವಿಷಯ ಕಲಿಸುತ್ತಾರೆ, ಇದರಿಂದ ಮುಂದೆ ಕನ್ನಡ ಅಥವಾ ಇಂಗ್ಲಿಷ್ ವ್ಯಾಸಂಗ ಮಾಡಲು ಸಾಧ್ಯವಾಗದೆ ಶಿಕ್ಷಣ ಮುಂದುವರಿಸುವುದಿಲ್ಲ. ಆದ್ದರಿಂದ ಮದರಸಾಗಳಲ್ಲಿ ಉರ್ದು ಭಾಷೆಯನ್ನು ಒಂದು ವಿಷಯವನ್ನಾಗಿ ಮಾತ್ರ ಬೋಧನೆ ಮಾಡಿ, ಬೇರೆ ವಿಷಯಗಳ ಶಿಕ್ಷಣವನ್ನು ಕನ್ನಡ/ ಆಂಗ್ಲ ಭಾಷೆಯಲ್ಲಿ ನೀಡಲು ಕ್ರಮಕೈಗೊಳ್ಳಬೇಕೆಂದು ಶಿಫಾರಸು ಮಾಡಲಾಗಿದೆ.

    ದೂರಶಿಕ್ಷಣ ಕೋರ್ಸ್​ಗಿಲ್ಲ ಅನುಮತಿ; 6 ವಿವಿಗಳಿಗಷ್ಟೇ ಒಪ್ಪಿಗೆ ನೀಡಿದ ಉನ್ನತ ಶಿಕ್ಷಣ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts