More

    ನ್ಯೂಜಿಲೆಂಡ್ ದಾಳಿಗೆ ಕುಸಿದ ಇಂಗ್ಲೆಂಡ್‌ಗೆ ರೋರಿ ಬರ್ನ್ಸ್, ಲಾರೆನ್ಸ್​ ಆಸರೆ

    ಬರ್ಮಿಂಗ್‌ಹ್ಯಾಂ: ಆರಂಭಿಕ ರೋರಿ ಬರ್ನ್ಸ್ (81 ರನ್, 187 ಎಸೆತ, 10 ಬೌಂಡರಿ) ಮತ್ತು ಡೇನ್​ ಲಾರೆನ್ಸ್ (67*ರನ್​, 100 ಎಸೆತ, 11 ಬೌಂಡರಿ) ಪ್ರವಾಸಿ ನ್ಯೂಜಿಲೆಂಡ್ ತಂಡದ ಬೌಲರ್‌ಗಳ ದಾಳಿಗೆ ಕುಸಿದ ಆತಿಥೇಯ ಇಂಗ್ಲೆಂಡ್ ತಂಡಕ್ಕೆ 2ನೇ ಹಾಗೂ ಅಂತಿಮ ಪಂದ್ಯದಲ್ಲಿ ಆಸರೆಯಾಗಿದ್ದಾರೆ.

    ಎಜ್‌ಬಾಸ್ಟನ್‌ನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ತಂಡ ದಿನದಂತ್ಯಕ್ಕೆ 7 ವಿಕೆಟ್‌ಗೆ 258 ರನ್ ಗಳಿಸಿದೆ. ಡೇನ್ ಲಾರೆನ್ಸ್ ಜತೆಗೆ ಮಾರ್ಕ್ ವುಡ್ (16*) ಕ್ರೀಸ್‌ನಲ್ಲಿದ್ದಾರೆ. ಡೊಮ್ ಸಿಬ್ಲೆ (35) ಜತೆಗೆ ಬರ್ನ್ಸ್ ಮೊದಲ ವಿಕೆಟ್‌ಗೆ 72 ರನ್ ಸೇರಿಸಿದ ಬಳಿಕ ಇಂಗ್ಲೆಂಡ್ ಕುಸಿತ ಕಂಡಿತು. ಜಾಕ್ ಕ್ರೌಲಿ (0), ನಾಯಕ ಜೋ ರೂಟ್ (4) ಮತ್ತು ಒಲಿ ಪೋಪ್ (19) ವೈಫಲ್ಯ ಕಂಡರು.

    ಇದನ್ನೂ ಓದಿ: ಒಲಿಂಪಿಕ್ಸ್​ ವೇಳೆ ಕ್ರೀಡಾಪಟುಗಳಿಗೆ 1.60 ಲಕ್ಷ ಕಾಂಡೋಮ್​ ವಿತರಣೆ, ಆದರೆ ಬಳಸುವಂತಿಲ್ಲ!

    ಆಂಡರ್‌ಸನ್ ದಾಖಲೆ
    ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್‌ಸನ್ 162ನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಮೂಲಕ ಇಂಗ್ಲೆಂಡ್ ಪರ ಗರಿಷ್ಠ ಟೆಸ್ಟ್ ಪಂದ್ಯ ಆಡಿದ ಅಲಸ್ಟೈರ್ ಕುಕ್ (161) ದಾಖಲೆ ಮುರಿದರು. ಮೊದಲ ದಿನದಾಟಕ್ಕೆ 17 ಸಾವಿರ ಪ್ರೇಕ್ಷಕರು ಹಾಜರಾದರು.

    ನ್ಯೂಜಿಲೆಂಡ್ ತಂಡದಲ್ಲಿ 6 ಬದಲಾವಣೆ
    ಭಾರತದೆದುರಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪ್ರಶಸ್ತಿ ಕಾದಾಟಕ್ಕೆ ಮುನ್ನ ಗಾಯದ ಸಮಸ್ಯೆ ಮತ್ತು ವಿಶ್ರಾಂತಿ ನೀಡುವ ಸಲುವಾಗಿ ನ್ಯೂಜಿಲೆಂಡ್, ಮೊದಲ ಟೆಸ್ಟ್‌ನಲ್ಲಿ ಆಡಿದ ತಂಡದಲ್ಲಿ 6 ಬದಲಾವಣೆ ಮಾಡಿಕೊಂಡಿದೆ. ನಾಯಕ ಕೇನ್ ವಿಲಿಯಮ್ಸನ್ ಜತೆಗೆ ವಿಕೆಟ್ ಕೀಪರ್ ಬಿಜೆ ವಾಟ್ಲಿಂಗ್ ಕೂಡ ಗಾಯದಿಂದಾಗಿ ಪಂದ್ಯದಿಂದ ಹೊರಗುಳಿದರು. ಅವರ ಬದಲು ವಿಲ್ ಯಂಗ್ ಮತ್ತು ಟಾಮ್ ಬ್ಲಂಡೆಲ್ ಕಣಕ್ಕಿಳಿದರು. ಟಿಮ್ ಸೌಥಿ, ಕೈಲ್ ಜೇಮಿಸನ್, ಮಿಚೆಲ್ ಸ್ಯಾಂಟ್ನರ್ ಮತ್ತು ಕಾಲಿನ್ ಡಿ ಗ್ರಾಂಡ್‌ಹೋಮ್ ಬದಲಿಗೆ ಟ್ರೆಂಟ್ ಬೌಲ್ಟ್, ಡೆರಿಲ್ ಮಿಚೆಲ್, ಮ್ಯಾಟ್ ಹ್ಯಾರಿ ಮತ್ತು ಅಜಾಜ್ ಪಟೇಲ್ ಕಣಕ್ಕಿಳಿದರು.

    ಇಂಗ್ಲೆಂಡ್: 90 ಓವರ್‌ಗಳಲ್ಲಿ 7 ವಿಕೆಟ್‌ಗೆ 258 (ಬರ್ನ್ಸ್ 81, ಸಿಬ್ಲೆ 35, ರೂಟ್ 4, ಪೋಪ್ 19, ಲಾರೆನ್ಸ್ 67*, ಸ್ಟೋನ್​ 20, ವುಡ್​ 16*, ಬೌಲ್ಟ್ 60ಕ್ಕೆ 2, ಮ್ಯಾಟ್ ಹೆನ್ರಿ 66ಕ್ಕೆ 2, ವ್ಯಾಗ್ನರ್ 2ಕ್ಕೆ 1, ಅಜಾಜ್ 34ಕ್ಕೆ 2).

    ಕೆಎಲ್​ ರಾಹುಲ್​ ಜತೆಗೆ ಗೆಳತಿ ಅಥಿಯಾ ಶೆಟ್ಟಿ ಕೂಡ ಸೌಥಾಂಪ್ಟನ್​ನಲ್ಲಿ ಕ್ವಾರಂಟೈನ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts