More

    ವೆಸ್ಟ್ ಇಂಡೀಸ್‌ಗೆ ತಿರುಗೇಟು ನೀಡಿದ ಇಂಗ್ಲೆಂಡ್

    ಸೌಥಾಂಪ್ಟನ್: ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭದ ಬಳಿಕ ಮೊದಲ 3 ದಿನ ಸಾಧಾರಣ ಆಟವಾಡಿದ್ದ ಇಂಗ್ಲೆಂಡ್, 4ನೇ ದಿನದಾಟದಲ್ಲಿ ಕೊನೆಗೂ ಲಯ ಕಂಡುಕೊಂಡಿದೆ. ಈ ಮೂಲಕ, ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ದಿಟ್ಟ ತಿರುಗೇಟು ನೀಡಿದೆ.

    ರೋಸ್ ಬೌಲ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 15 ರನ್‌ಗಳಿಂದ ಶನಿವಾರ 2ನೇ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ತಂಡ, ದಿನದಂತ್ಯಕ್ಕೆ 8 ವಿಕೆಟ್‌ಗೆ 284 ರನ್ ಪೇರಿಸಿದೆ. ಮಾರ್ಕ್ ವುಡ್ (1) ಮತ್ತು ಜ್ರೋಾ ಆರ್ಚರ್ (5) ಕ್ರೀಸ್‌ನಲ್ಲಿದ್ದಾರೆ. 170 ರನ್ ಮುನ್ನಡೆ ಸಂಪಾದಿಸಿರುವ ಇಂಗ್ಲೆಂಡ್ ತಂಡ, ಅಂತಿಮ ದಿನದಾಟದಲ್ಲಿ ಪ್ರವಾಸಿಗರಿಗೆ ಸ್ಪರ್ಧಾತ್ಮಕ ಸವಾಲು ನಿಗದಿಪಡಿಸುವ ಗುರಿಯಲ್ಲಿದೆ. ಜೈವಿಕ-ಸುರಕ್ಷಾ ವಾತಾವರಣದಲ್ಲಿ ಪಂದ್ಯ ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಜಾಕ್ ಕ್ರೌಲಿ (76) ಮತ್ತು ನಾಯಕ ಬೆನ್ ಸ್ಟೋಕ್ಸ್ (46) 4ನೇ ವಿಕೆಟ್‌ಗೆ 98 ರನ್ ಜತೆಯಾಟವಾಡಿ ವಿಂಡೀಸ್ ತಂಡವನ್ನು ಕಾಡಿದರು.

    ಇದನ್ನೂ ಓದಿ: PHOTOS | ಬದಲಾಗಿದೆ ಕ್ರಿಕೆಟ್, ಇಲ್ಲಿದೆ ನೋಡಿ ಸಾಕ್ಷಿ!

    ಆಂಗ್ಲರ ತಂಡಕ್ಕೆ ಬರ್ನ್ಸ್-ಸಿಬ್ಲೆ ಆಸರೆ
    ಕ್ರಮವಾಗಿ 10 ಮತ್ತು 5 ರನ್‌ಗಳಿಂದ ದಿನದಾಟ ಮುಂದುವರಿಸಿದ ಆರಂಭಿಕರಾದ ರೋರಿ ಬರ್ನ್ಸ್ ಮತ್ತು ಡೊಮಿನಕ್ ಸಿಬ್ಲೆ ಇಂಗ್ಲೆಂಡ್ ತಂಡವನ್ನು ಸುಸ್ಥಿತಿಗೆ ಕೊಂಡೊಯ್ದರು. ಇವರಿಬ್ಬರು ಮೊದಲ ವಿಕೆಟ್‌ಗೆ 72 ರನ್ ಕೂಡಿಹಾಕಿದರು. ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಯುವ ಬ್ಯಾಟ್ಸ್‌ಮನ್ ಸಿಬ್ಲೆ, ಅರ್ಧಶತಕ ಪೂರೈಸಿದರೆ, ಬರ್ನ್ಸ್ 42 ರನ್ ಗಳಿಸಿದರು. ಒನ್‌ಡೌನ್ ಬ್ಯಾಟ್ಸ್‌ಮನ್ ಜೋಯಿ ಡೆನ್ಲಿ 2ನೇ ವಿಕೆಟ್‌ಗೆ ಸಿಬ್ಲೆ ಜತೆಗೆ 41 ಮತ್ತು 3ನೇ ವಿಕೆಟ್‌ಗೆ ಕ್ರೌಲಿ ಜತೆಗೆ 38 ರನ್ ಸೇರಿಸಿದರು. ಈ ಬಾರಿ ವಿಂಡೀಸ್ ವೇಗಿಗಳು ಆರಂಭದಲ್ಲಿ ಹೆಚ್ಚಿನ ಪ್ರಭಾವ ಬೀರುವಲ್ಲಿ ಸಲರಾಗಲಿಲ್ಲ. ಸ್ಪಿನ್ನರ್ ರೋಸ್ಟನ್ ಚೇಸ್ 2 ವಿಕೆಟ್ ಒಲಿಸಿಕೊಂಡರು.

    ಇಂಗ್ಲೆಂಡ್: 204 ಮತ್ತು 104 ಓವರ್‌ಗಳಲ್ಲಿ 8 ವಿಕೆಟ್‌ಗೆ 284 (ಬರ್ನ್ಸ್ 42, ಸಿಬ್ಲೆ 50, ಡೆನ್ಲಿ 29, ಜಾಕ್ ಕ್ರೌಲಿ 76, ಬೆನ್ ಸ್ಟೋಕ್ಸ್ 46, ಬಟ್ಲರ್ 9, ಗ್ಯಾಬ್ರಿಯೆಲ್ 62ಕ್ಕೆ 3, ಚೇಸ್ 71ಕ್ಕೆ 2, ಅಲ್ಜಾರಿ ಜೋಸ್ೆ 40ಕ್ಕೆ 2), ವೆಸ್ಟ್ ಇಂಡೀಸ್: 318.

    ಅನುಷ್ಕಾ ಶರ್ಮ ಮಾದಕ ಪೋಸ್​ಗೆ ವಿರಾಟ್ ಕೊಹ್ಲಿ ಏನಂತಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts