More

    VIDEO: ಆಸೀಸ್ ವಿರುದ್ಧ ಗೆದ್ದು ಬೀಗಿದ ಇಂಗ್ಲೆಂಡ್ ತಂಡದ ಸಂಭ್ರಮ ಹೇಗಿತ್ತು ಗೊತ್ತಾ.?

    ಸೌಥಾಂಪ್ಟನ್: ಕರೊನಾ ಕಾಲದಲ್ಲಿ ತವರಿನಲ್ಲಿ ನಡೆಯುತ್ತಿರುವ ಕ್ರಿಕೆಟ್ ಸರಣಿಗಳನ್ನು ಏಕದಿನ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ ಗೆದ್ದು ಬೀಗುತ್ತಿದೆ. ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಮಣಿಸಿದ ಇಂಗ್ಲೆಂಡ್, 4ನೇ ಸರಣಿ ಗೆದ್ದುಕೊಂಡಿತ್ತು. ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಯಿಂದ ಸರಣಿ ಗೆದ್ದ ಇಂಗ್ಲೆಂಡ್ ತಂಡದ ಸಂಭ್ರಮ ಮುಗಿಲು ಮುಟ್ಟಿತು. ಇದಕ್ಕೂ ಮೊದಲು ತವರಿನಲ್ಲೇ 3 ಸರಣಿ ಗೆದ್ದರೂ ಹೆಚ್ಚು ಸಂಭ್ರಮಿಸದ ಇಂಗ್ಲೆಂಡ್ ಆಟಗಾರರು, ಆಸೀಸ್ ವಿರುದ್ಧದ ಗೆಲುವನ್ನು ವಿಶೇಷವಾಗಿ ಆಚರಿಸಿದರು. ಡ್ರೆಸಿಂಗ್ ರೂಮ್‌ನಲ್ಲಿ ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮ ಹಂಚಿಕೊಂಡರು.

    ಇದನ್ನೂ ಓದಿ: PHOTOS: ತಮಿಳು ನಟ ವಿಷ್ಣು ವಿಶಾಲ್ ಜತೆ ಷಟ್ಲರ್ ಜ್ವಾಲಾ ಗುಟ್ಟಾ ನಿಶ್ಚಿತಾರ್ಥ…!

    ಡ್ರೆಸ್ಸಿಂಗ್ ರೂಮ್‌ನಲ್ಲಿ ನಡೆದ ಸಂಭ್ರಮದ ವಿಡಿಯೋ ಇದೀಗ ವೈರಲ್ ಆಗಿದೆ. ವೇಗಿ ಜೋಫ್ರಾ ಆರ್ಚರ್ ಈ ವಿಡಿಯೋ ಶೇರ್ ಮಾಡಿದ್ದಾರೆ. ಜೋಸ್ ಬಟ್ಲರ್, ಜೇಸನ್ ರಾಯ್, ಮಾರ್ಕ್ ವುಡ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಡ್ಯಾನ್ಸ್‌ಗೆ ‘ಡಕ್ ಡ್ಯಾನ್ಸ್’ ಹಾಗೂ ‘ಪೆನ್‌ಗಿನ್ ಡ್ಯಾನ್ಸ್’ ಎಂದು ಕರೆಯಲಾಗುತ್ತದೆ. ಸತತ ಗೆಲುವಿನ ನಾಗಾಲೋಟದಲ್ಲಿರುವ ಇಂಗ್ಲೆಂಡ್ ತಂಡ, ಆಸೀಸ್ ವಿರುದ್ಧ ಸರಣಿ ಕ್ಲೀನ್‌ಸ್ವೀಪ್ ಮಾಡುವ ಕನಸಿನಲ್ಲಿದೆ. 3ನೇ ಹಾಗೂ ಅಂತಿಮ ಟಿ20 ಪಂದ್ಯ ಮಂಗಳವಾರ ನಡೆಯಲಿದೆ.

    ಇದನ್ನೂ ಓದಿ:ಎಸ್​ಪಿಬಿ ಕರೊನಾ ವರದಿ ನೆಗೆಟಿವ್​; ಐಪಿಎಲ್​ಗಾಗಿ ಕಾಯುತ್ತಿದ್ದಾರಂತೆ ಲೆಜೆಂಡರಿ ಗಾಯಕ

    ಕಳೆದ ಎರಡು ತಿಂಗಳಿಂದ ಬಯೋ-ಬಬಲ್ ವಾತಾವರಣದಲ್ಲಿರುವ ಇಂಗ್ಲೆಂಡ್‌ನ ವಿಕೆಟ್ ಕೀಪರ್ ಜೋಸ್ ಬಟ್ಲರ್ ಕುಟುಂಬ ಸದಸ್ಯರನ್ನು ಭೇಟಿಯಾಗುವ ಸಲುವಾಗಿ ಅಂತಿಮ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇಂಗ್ಲೆಂಡ್ ತಂಡ ಇದಕ್ಕೂ ಮೊದಲು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ, ಐರ್ಲೆಂಡ್ ವಿರುದ್ಧ ಏಕದಿನ ಸರಣಿ, ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿಯಲ್ಲಿ ಗೆಲುವು ದಾಖಲಿಸಿತ್ತು. ಪಾಕಿಸ್ತಾನ ವಿರುದ್ಧದ ಟಿ20 ಸರಣಿ 1-1 ರಿಂದ ಸಮಬಲಗೊಂಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts