More

    ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಬಾಬರ್-ಮಸೂದ್ ಆಸರೆ

    ಮ್ಯಾಂಚೆಸ್ಟರ್: ಆರಂಭಿಕ ಶಾನ್ ಮಸೂದ್ (46*ರನ್, 152 ಎಸೆತ, 7 ಬೌಂಡರಿ) ಮತ್ತು ಬಾಬರ್ ಅಜಮ್ (69* ರನ್, 100 ಎಸೆತ, 11 ಬೌಂಡರಿ) ಜತೆಯಾಟದ ಆಸರೆಯಿಂದ ಪಾಕಿಸ್ತಾನ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ದೃಷ್ಟಿ ನೆಟ್ಟಿದೆ.

    ಓಲ್ಡ್ ಟ್ರಾಫೋರ್ಡ್​ ಮೈದಾನದಲ್ಲಿ ಬುಧವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ ತಂಡ ದಿನದಂತ್ಯಕ್ಕೆ 49 ಓವರ್‌ಗಳಲ್ಲಿ 2 ವಿಕೆಟ್‌ಗೆ 139 ರನ್ ಪೇರಿಸಿದೆ. ಮಳೆಯಿಂದಾಗಿ ಭೋಜನ ವಿರಾಮಕ್ಕೆ ಮುನ್ನ ಸ್ವಲ್ಪ ಓವರ್ ನಷ್ಟವಾಯಿತು. ಬಳಿಕ ಮತ್ತೆ ಮಳೆ ಕಾಡಿದ ಕಾರಣ ಚಹಾ ವಿರಾಮವನ್ನೂ ಬೇಗನೆ ತೆಗೆದುಕೊಳ್ಳಲಾಯಿತು. ನಂತರ ಕೊನೇ ಅವಧಿಯಲ್ಲಿ ಸುಮಾರು 8 ಓವರ್‌ಗಳ ಆಟವಷ್ಟೇ ನಡೆಯಿತು. ಮಸೂದ್ ಮತ್ತು ಅಜಮ್ ಮುರಿಯದ 3ನೇ ವಿಕೆಟ್‌ಗೆ 96 ರನ್ ಪೇರಿಸಿ ಕ್ರೀಸ್‌ನಲ್ಲಿದ್ದಾರೆ.

    ಇದನ್ನೂ ಓದಿ: ರಾಮಮಂದಿರ ಶಿಲಾನ್ಯಾಸಕ್ಕೆ ಖುಷಿಪಟ್ಟ ಕ್ರಿಕೆಟಿಗ ಕೈಫ್​, ಧರ್ಮದ್ವೇಷಿಗಳ ವಿರುದ್ಧ ಕಿಡಿ

    ಇಂಗ್ಲೆಂಡ್ ಆರಂಭಿಕ ಮೇಲುಗೈ
    ವೆಸ್ಟ್ ಇಂಡೀಸ್ ವಿರುದ್ಧದ ಕಳೆದ ಟೆಸ್ಟ್ ಸರಣಿಯಲ್ಲಿ ಜಯಿಸಿದ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ಇಂಗ್ಲೆಂಡ್ ತಂಡ ಪಂದ್ಯದಲ್ಲಿ ಆರಂಭಿಕ ಮೇಲುಗೈ ಸಾಧಿಸಿತು. ಆರಂಭಿಕ ಅಬಿದ್ ಅಲಿಗೆ (16) ವೇಗಿ ಜೋಫ್ರಾ ಆರ್ಚರ್ ಪೆವಿಲಿಯನ್ ದಾರಿ ತೋರಿಸುವ ಮೂಲಕ ಆಂಗ್ಲರಿಗೆ ಮೊದಲ ಯಶಸ್ಸು ತಂದುಕೊಟ್ಟರು. ಅದರ ಬೆನ್ನಲ್ಲೇ ನಾಯಕ ಅಜರ್ ಅಲಿ (0) ಖಾತೆ ತೆರೆಯದೆ ವೇಗಿ ಕ್ರಿಸ್ ವೋಕ್ಸ್‌ಗೆ ವಿಕೆಟ್ ಒಪ್ಪಿಸಿದರು. ಇದರಿಂದ ಪಾಕ್ 43 ರನ್‌ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

    ಇಂಗ್ಲೆಂಡ್ ತಂಡ ವಿಂಡೀಸ್ ವಿರುದ್ಧ ಕೊನೇ ಟೆಸ್ಟ್ ಜಯಿಸಿದ ತಂಡವನ್ನೇ ಉಳಿಸಿಕೊಂಡಿದೆ. ಆದರೆ ಆಲ್ರೌಂಡರ್ ಬೆನ್ ಸ್ಟೋಕ್ಸ್ ಗಾಯದಿಂದ ಸಂಪೂರ್ಣ ಫಿಟ್ ಆಗದ ಕಾರಣ, ಕೇವಲ ಬ್ಯಾಟ್ಸ್‌ಮನ್ ಆಗಿ ಆಡುತ್ತಿದ್ದಾರೆ. ಪಾಕಿಸ್ತಾನ ತಂಡ ೆಬ್ರವರಿ ಬಳಿಕ ಮೊದಲ ಟೆಸ್ಟ್ ಪಂದ್ಯ ಆಡುತ್ತಿದೆ.

    ಪಾಕಿಸ್ತಾನ: 49 ಓವರ್‌ಗಳಲ್ಲಿ 2 ವಿಕೆಟ್‌ಗೆ 139 (ಶಾನ್ ಮಸೂದ್ 46*, ಅಬಿದ್ ಅಲಿ 16, ಅಜರ್ ಅಲಿ 0, ಬಾಬರ್ ಅಜಮ್ 69*, ವೋಕ್ಸ್ 14ಕ್ಕೆ 1, ಆರ್ಚರ್ 23ಕ್ಕೆ 1).

    ನೋಬಾಲ್‌ಗೆ ತೃತೀಯ ಅಂಪೈರ್
    ಫ್ರಂಟ್​-ಫುಟ್​ ನೋಬಾಲ್‌ಗಳನ್ನು ಮೈದಾನದಲ್ಲಿನ ಅಂಪೈರ್‌ಗಳಿಗೆ ಬದಲಾಗಿ ತೃತೀಯ ಅಂಪೈರ್‌ಗಳು ನಿರ್ಧರಿಸುವ ನಿಯಮ ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಸರಣಿಯೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲೂ ಜಾರಿಗೆ ಬಂದಿದೆ ಎಂದು ಐಸಿಸಿ ಬುಧವಾರ ತಿಳಿಸಿದೆ. ಭವಿಷ್ಯದಲ್ಲಿ ಪ್ರತಿ ಪಂದ್ಯದಲ್ಲೂ ಯಾವುದೇ ನಿರ್ಧಾರಕ್ಕೆ ಮುನ್ನ ತೃತೀಯ ಅಂಪೈರ್‌ರಿಂದ ನೋಬಾಲ್ ಪರಿಶೀಲನೆ ನಡೆಯಲಿದೆ. ಇಂಗ್ಲೆಂಡ್-ಐರ್ಲೆಂಡ್ ಏಕದಿನ ಸರಣಿಯಲ್ಲೂ ಇದರ ಪ್ರಯೋಗ ನಡೆದಿತ್ತು.

    ಐಸಿಸಿ ಏಕದಿನ ರ‌್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ ನಂ. 1, ರೋಹಿತ್ ಶರ್ಮ ನಂ. 2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts