More

    ಟೆಸ್ಟ್ ಪಂದ್ಯ ವೀಕ್ಷಿಸಲು ಶ್ರೀಲಂಕಾದಲ್ಲೇ 10 ತಿಂಗಳಿಂದ ಕಾದಿದ್ದ ಇಂಗ್ಲೆಂಡ್ ಅಭಿಮಾನಿಗೆ ನಿರಾಸೆ

    ಗಾಲೆ: ಕೆಲಮಂದಿಗೆ ಕ್ರಿಕೆಟ್ ಅಂದರೆ ಎಲ್ಲವೂ ಆಗಿರುತ್ತದೆ. ಹುಚ್ಚು ಕ್ರಿಕೆಟ್ ಅಭಿಮಾನಿಗಳನ್ನು ನಾವು ನೋಡಿದ್ದೇವೆ. ನೆಚ್ಚಿನ ತಂಡ ಆಡುವುದನ್ನೂ ನೋಡಲು ದೇಶ, ವಿದೇಶಗಳಿಗೆ ಹೋಗುತ್ತಾರೆ. ಇಂಗ್ಲೆಂಡ್‌ನ ಅಭಿಮಾನಿಯೊಬ್ಬ ನೆಚ್ಚಿನ ತಂಡ ಆಡುವುದನ್ನು ನೋಡಲು ಶ್ರೀಲಂಕಾದಲ್ಲೇ ಕಳೆದ 10 ತಿಂಗಳಿಂದ ಕಾದು ಕುಳಿದಿದ್ದ ಪ್ರಸಂಗ ನಡೆದಿದೆ. ಕಳೆದ ಮಾರ್ಚ್‌ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ತಂಡದ ಜತೆ ಅಭಿಮಾನಿ ರೋಬ್ ಲೆವಿಸ್ ಆಗಮಿಸಿದ್ದರು. ಆದರೆ, ಕರೊನಾ ವೈರಸ್ ಭೀತಿಯಿಂದಾಗಿ ಇಂಗ್ಲೆಂಡ್ ತಂಡ ವಾಪಸಾಯಿತು. ಆದರೆ, ಈ ಅಭಿಮಾನಿ ಮಾತ್ರ ಶ್ರೀಲಂಕಾ ಬಿಟ್ಟು ಕದಲಲಿಲ್ಲ. ಇಂಗ್ಲೆಂಡ್ ತಂಡ ವಾಪಸ್ ಬರುವವರೆಗೂ ಕಾಯುತ್ತೇನೆ ಎಂದು ಶ್ರೀಲಂಕಾದಲ್ಲೇ ಬಿಡುಬಿಟ್ಟಿದ್ದರು. ಆದರೆ, ಗುರುವಾರದಿಂದ ಆರಂಭಗೊಂಡ ಉಭಯ ತಂಡಗಳ ಟೆಸ್ಟ್ ಪಂದ್ಯ ವೀಕ್ಷಕಣೆಗೆ ಅಭಿಮಾನಿಗೆ ಬಿಟ್ಟಿಲ್ಲ.

    ಇದನ್ನೂ ಓದಿ: ದೇವದತ್ ಪಡಿಕಲ್ ಅಜೇಯ 99ರನ್, ಕರ್ನಾಟಕ ತಂಡಕ್ಕೆ 2ನೇ ಜಯ

    10 ತಿಂಗಳ ಬಳಿಕ ಶ್ರೀಲಂಕಾ ಹಾಗೂ ಇಂಗ್ಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಂಡಿದೆ. ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಗುರುವಾರದಿಂದ ಗಾಲೆಯಲ್ಲಿ ಆರಂಭಗೊಂಡಿದೆ. ಈ ವೇಳೆ ಪಂದ್ಯ ವೀಕ್ಷಿಸಲು ಗಾಲೆಗೆ ಆಗಮಿಸಿದ ರೋಬ್ ಲೆವಿಸ್ ನಿರಾಸೆ ಅನುಭವಿಸಿದ್ದಾರೆ. ಸ್ಥಳೀಯ ಸರ್ಕಾರದ ನಿಯಮದಂತೆ ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಅನುಮತಿ ನೀಡಿಲ್ಲ. ಕಳೆದ 10 ತಿಂಗಳಿಂದ ಲಂಕಾದಲ್ಲೇ ಕಾದು ಕುಳಿದಿದ್ದ ರೋಬ್ ಲೆವಿಸ್ ಮೈದಾನಕ್ಕೆ ಆಗಮಿಸಿದರೂ ವಾಪಸಾಗಿದ್ದಾರೆ. ಗಾಲೆ ಮೈದಾನದಲ್ಲಿ ಹೋಗಲು ಯತ್ನಿಸಿದರೂ ಪೊಲೀಸರು ಅವಕಾಶ ನೀಡಲಿಲ್ಲ. ಮೈದಾನದಲ್ಲಿ ರೋಬ್ ಹಾಕಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಾರೆ. ಅಭಿಮಾನಿಗೆ ಪ್ರವೇಶ ನಿರಾಕರಿಸಿದರೂ ಕೆಲ ಪತ್ರಕರ್ತರಿಗೆ ಅವಕಾಶ ನೀಡಲಾಗಿದೆ.

    ಇದನ್ನೂ ಓದಿ: ಭಾರತದ ಷಟ್ಲರ್ ಸೈನಾ ನೆಹ್ವಾಲ್‌ಗೆ ನಿರಾಸೆ

    ಶ್ರೀಲಂಕಾದಲ್ಲಿ ತಂಗಿದ್ದ ವೇಳೆ ವೆಬ್‌ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಲೆವಿಸ್, ನೈಟ್‌ಕ್ಲಬ್‌ಗಳಲ್ಲಿ ಡಿಜೆಯಾಗಿಯೂ ಕೆಲಸ ಮಾಡುತ್ತಿದ್ದರು. ಮೊದಲ ದಿನದಾಟ ವೀಕ್ಷಿಸಲು ಅನುಮತಿ ನೀಡದ್ದಕ್ಕೆ ಬೇಸರವಾಗಿರುವ ಲೆವಿಸ್, ಎರಡನೇ ದಿನದಾಟ ನೋಡಲು ಅವಕಾಶ ನೀಡುವ ವಿಶ್ವಾಸವಿದೆ ಎಂದು ಹೇಳಿಕೊಂಡಿದ್ದಾರೆ.

    ‘ಏಕ್​ ಲವ್​ ಯಾ’ ಕುರಿತು ಹೊಸ ಅಪ್​ಡೇಟ್​ ಕೊಟ್ಟ ಪ್ರೇಮ್​ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts