More

    ಫಾಲೋ ಆನ್ ತಪ್ಪಿಸಿಕೊಳ್ಳಲು ವೆಸ್ಟ್ ಇಂಡೀಸ್ ಹೋರಾಟ

    ಮ್ಯಾಂಚೆಸ್ಟರ್: ಆತಿಥೇಯ ಇಂಗ್ಲೆಂಡ್ ದಾಳಿಗೆ ತತ್ತರಿಸಿರುವ ಪ್ರವಾಸಿ ವೆಸ್ಟ್ ಇಂಡೀಸ್ ತಂಡ, ಕ್ರೇಗ್ ಬ್ರಾಥ್‌ವೇಟ್ (75ರನ್, 165 ಎಸೆತ, 8 ಬೌಂಡರಿ) ಹಾಗೂ ಶಮರಾಹ್ ಬ್ರೂಕ್ಸ್ (60*, 115 ಎಸೆತ, 10 ಬೌಂಡರಿ) ಪ್ರತಿಹೋರಾಟದ ನಡುವೆಯೂ 2ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ಫಾಲೋ ಆನ್ ತಪ್ಪಿಸಿಕೊಳ್ಳಲು ಹೋರಾಡುತ್ತಿದೆ. ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯ ಮಳೆಯಿಂದಾಗಿ ಶನಿವಾರದ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. 1 ವಿಕೆಟ್‌ಗೆ 32 ರನ್‌ಗಳಿಂದ ದಿನದಾಟ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ, ನಾಲ್ಕನೇ ದಿನದಾಟದ ಚಹಾ ವಿರಾಮದ ವೇಳೆಗೆ 76 ಓವರ್ ಗಳಲ್ಲಿ 4 ವಿಕೆಟ್‌ಗೆ 227 ರನ್ ರನ್ ಪೇರಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 242 ರನ್ ಗಳಿಸಬೇಕಿದೆ.ಫಾಲೋಆನ್ ತಪ್ಪಿಸಿಕೊಳ್ಳಲು ಇನ್ನು 42 ರನ್ ಗಳಿಸಬೇಕಿದೆ. ಏಕದಿನ ವಿಶ್ವ ಚಾಂಪಿಯನ್ ಇಂಗ್ಲೆಂಡ್ 9 ವಿಕೆಟ್‌ಗೆ 469 ರನ್‌ಗಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
    ಫಾಲೋ ಆನ್ ತಪ್ಪಿಸಿಕೊಳ್ಳಲು ವೆಸ್ಟ್ ಇಂಡೀಸ್ ಹೋರಾಟಕ್ರಮವಾಗಿ 6 ಹಾಗೂ 14 ರನ್‌ಗಳಿಂದ ಇನಿಂಗ್ಸ್ ಆರಂಭಿಸಿದ ಕ್ರೇಗ್ ಬ್ರಾಥ್‌ವೇಟ್ ಹಾಗೂ ಅಲ್ಜಾರಿ ಜೋಸೆಫ್ ಜೋಡಿಗೆ ಡಾಮ್ ಬೆಸ್ (27ಕ್ಕೆ 1) ಆಘಾತ ನೀಡಿದರು. ಆತ್ಮವಿಶ್ವಾಸದಿಂದ ಇಂಗ್ಲೆಂಡ್ ದಾಳಿ ಎದುರಿಸುತ್ತಿದ್ದ ಅಲ್ಜಾರಿ ಜೋಸೆಫ್, ಬೆಸ್ ಎಸೆತದಲ್ಲಿ ಶಾರ್ಟ್ ಲೆಗ್‌ನಲ್ಲಿದ್ದ ಪೋಪ್‌ಗೆ ಕ್ಯಾಚ್ ನೀಡಿದರು. ಈ ಜೋಡಿ ದಿನದಾಟದಲ್ಲಿ 38, ಒಟ್ಟಾರೆ 2ನೇ ವಿಕೆಟ್‌ಗೆ 54 ರನ್ ಪೇರಿಸಿತು. ಬಳಿಕ ಜತೆಯಾದ ಬ್ರಾಥ್‌ವೇಟ್ ಹಾಗೂ ಹೋಪ್ ಜೋಡಿ 3ನೇ ವಿಕೆಟ್‌ಗೆ 53 ರನ್ ಪೇರಿಸಿದರೆ, ಬಳಿಕ ಬ್ರಾಥ್ ವೇಟ್ ಜತೆಯಾದ ಬ್ರೂಕ್ಸ್ 4ನೇ ವಿಕೆಟ್ ಗೆ ಉಪಯುಕ್ತ 76 ರನ್ ಕೆಲಹಾಕಿ ಬೇರ್ಪಟ್ಟಿತು. ಅರ್ಧಶತಕ ಸಾಧಕ ಬ್ರೂಕ್ಸ್ ಹಾಗೂ ರೋಸ್ಟನ್ ಚೇಸ್ (8) ಕ್ರೀಸ್ ನಲ್ಲಿದ್ದಾರೆ. 

    ಇಂಗ್ಲೆಂಡ್: 162 ಓವರ್‌ಗಳಲ್ಲಿ 9 ವಿಕೆಟ್‌ಗೆ 469 ಡಿಕ್ಲೇರ್, ವೆಸ್ಟ್ ಇಂಡೀಸ್: ನಾಲ್ಕನೇ ದಿನದಾಟದ ಚಹಾ ವಿರಾಮದ ವೇಳೆಗೆ 76 ಓವರ್‌ಗಳಲ್ಲಿ 4 ವಿಕೆಟ್‌ಗೆ 227 (ಬ್ರಾಥ್ ವೇಟ್ 75, ಹೋಪ್ 25, ಅಲ್ಜಾರಿ ಜೋಸೆಫ್ 32, ಬ್ರೂಕ್ಸ್ 60*, ಕರ್ರನ್  35ಕ್ಕೆ 2, ಬೆಸ್ 59ಕ್ಕೆ 1, ಸ್ಟೋಕ್ಸ್ 22ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts