ಎಜ್‌ಬಾಸ್ಟನ್ ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಂಡ ಭಾರತ; ಟಿ20 ಸರಣಿ ಗೆದ್ದ ರೋಹಿತ್ ಶರ್ಮ ಪಡೆ

blank

ಬರ್ಮಿಂಗ್‌ಹ್ಯಾಂ: ಬೌಲರ್‌ಗಳ ಮಾರಕ ದಾಳಿ ನೆರವಿನಿಂದ ಪ್ರವಾಸಿ ಭಾರತ ತಂಡ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 49 ರನ್‌ಗಳಿಂದ ಮಣಿಸಿತು. ಇದರಿಂದ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0ಯಿಂದ ಚುಟುಕು ಕ್ರಿಕೆಟ್ ಸರಣಿ ವಶಪಡಿಸಿಕೊಂಡಿತು. 4 ದಿನಗಳ ಹಿಂದಷ್ಟೇ ನಿರ್ಣಾಯಕ 5ನೇ ಟೆಸ್ಟ್ ಪಂದ್ಯ ಸೋತಿದ್ದ ರೋಸ್ ಬೌಲ್ ಸ್ಟೇಡಿಯಂನಲ್ಲೇ ಆತಿಥೇಯ ತಂಡದ ಎದುರು ಸರಣಿ ಗೆಲುವಿನೊಂದಿಗೆ ಸೇಡು ತೀರಿಸಿಕೊಂಡಿತು. ರೋಹಿತ್ ಶರ್ಮ ಸಾರಥ್ಯದಲ್ಲಿ ಭಾರತ ತಂಡಕ್ಕೆ ಸತತ 14ನೇ ಟಿ20 ಪಂದ್ಯ ಮತ್ತು ಟೆಸ್ಟ್-ಏಕದಿನ ಸೇರಿ ಒಟ್ಟಾರೆ ಸತತ 19 ಪಂದ್ಯ ಜಯ ಇದಾಗಿದೆ.

blank

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಉತ್ತಮ ಆರಂಭದ ನಡುವೆಯೂ ರಿಚರ್ಡ್ ಗ್ಲೀಸನ್ (15ಕ್ಕೆ 3) ಹಾಗೂ ಕ್ರಿಸ್ ಜೋರ್ಡನ್ (27ಕ್ಕೆ 4) ಮಾರಕ ದಾಳಿಯಿಂದ ದಿಢೀರ್ ಕುಸಿತ ಕಂಡಿತು. ರವೀಂದ್ರ ಜಡೇಜಾ (46*ರನ್, 29 ಎಸೆತ, 5 ಬೌಂಡರಿ) ಏಕಾಂಗಿ ಹೋರಾಟದ ನೆರವಿನಿಂದ 8 ವಿಕೆಟ್‌ಗೆ 170 ರನ್ ಪೇರಿಸಿತು. ಪ್ರತಿಯಾಗಿ ಭುವನೇಶ್ವರ್ ಕುಮಾರ್ (15ಕ್ಕೆ 3) ಮೊದಲ ಓವರ್‌ನಲ್ಲೇ ನೀಡಿದ ಆಘಾತದಿಂದ ತತ್ತರಿಸಿದ ಇಂಗ್ಲೆಂಡ್ 17 ಓವರ್‌ಗಳಲ್ಲಿ 121 ರನ್‌ಗಳಿಗೆ ಸರ್ವಪತನ ಕಂಡಿತು.

ಭಾರತ: 8 ವಿಕೆಟ್‌ಗೆ 170 (ರೋಹಿತ್ ಶರ್ಮ 31, ರಿಷಭ್ ಪಂತ್ 26, ರವೀಂದ್ರ ಜಡೇಜಾ 46*, ಕ್ರಿಸ್ ಜೋರ್ಡನ್ 27ಕ್ಕೆ 4, ರಿಚರ್ಡ್ ಗ್ಲೀಸನ್ 15ಕ್ಕೆ 3), ಇಂಗ್ಲೆಂಡ್: 17 ಓವರ್‌ಗಳಲ್ಲಿ 121 (ಮೊಯಿನ್ ಅಲಿ 35, ಡೇವಿಡ್ ವಿಲ್ಲಿ 33*, ಭುವನೇಶ್ವರ್ ಕುಮಾರ್ 15ಕ್ಕೆ 3, ಯಜುವೇಂದ್ರ ಚಾಹಲ್ 10ಕ್ಕೆ 2, ಜಸ್‌ಪ್ರೀತ್ ಬುಮ್ರಾ 10ಕ್ಕೆ 2).

Share This Article
blank

ಸೇಬು ತಿಂದ ನಂತರ ಈ ಆಹಾರಗಳನ್ನು ಸೇವಿಸಬೇಡಿ..ಹಾಗೇನಾದರೂ ಮಾಡಿದರೆ ಅಪಾಯ ಖಂಡಿತ!Apple

Apple: ಸೇಬುಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಆದರೆ ಸೇಬನ್ನು ತಿಂದ ನಂತರ ಜೀರ್ಣಿಸಿಕೊಳ್ಳಲು 30 ರಿಂದ 40…

ಬಾಯಲ್ಲಿ ನೀರೂರಿಸುವ ಉಪ್ಪಿನಕಾಯಿ ತಿಂದರೆ ನಿಮ್ಮ ಆರೋಗ್ಯಕ್ಕೆ ಏನಾಗುತ್ತದೆ ಗೊತ್ತಾ? Pickles

Pickles: ಬಿಸಿ ಅನ್ನದ ಜೊತೆ ಸ್ವಲ್ಪ ಉಪ್ಪಿಕಾಯಿ ಇದ್ದರೆ ಸಾಕು ಆ ಊಟದ ರುಚಿಯೇ ಬೇರೆ.…

blank