More

    ಬುಮ್ರಾ ಮಾರಕ ದಾಳಿ, ರೋಹಿತ್ ಸ್ಫೋಟಕ ಬ್ಯಾಟಿಂಗ್; ಇಂಗ್ಲೆಂಡ್ ಎದುರು ಭಾರತಕ್ಕೆ 10 ವಿಕೆಟ್ ಜಯ

    ಲಂಡನ್: ವೇಗಿ ಜಸ್‌ಪ್ರೀತ್ ಬುಮ್ರಾ (19ಕ್ಕೆ 6) ಮಾರಕ ದಾಳಿಯ ಜತೆಗೆ ನಾಯಕ ರೋಹಿತ್ ಶರ್ಮ (76*ರನ್, 58 ಎಸೆತ, 7 ಬೌಂಡರಿ, 5 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿತು. 3 ಪಂದ್ಯಗಳ ಸರಣಿಯಲ್ಲಿ ಶುಭಾರಂಭ ಕಂಡ ಭಾರತ 1-0ಯಿಂದ ಮುನ್ನಡೆ ಸಾಧಿಸಿದೆ. ಬುಮ್ರಾ ಹಾಗೂ ಮತ್ತೋರ್ವ ವೇಗಿ ಮೊಹಮದ್ ಶಮಿ (31ಕ್ಕೆ 3) ಬಿಗಿ ದಾಳಿ ಎದುರು ಸಂಪೂರ್ಣ ನೆಲಕಚ್ಚಿದ ಏಕದಿನ ವಿಶ್ವ ಚಾಂಪಿಯನ್ ತಂಡ ಭಾರತದ ಎದುರು ತನ್ನ ಕನಿಷ್ಠ ಮೊತ್ತಕ್ಕೆ ಕುಸಿತ ಕಂಡಿತು.

    ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ರೋಹಿತ್ ಶರ್ಮ ಫೀಲ್ಡಿಂಗ್ ಆಯ್ದುಕೊಂಡರು. ಭಾರತ ವೇಗಿಗಳ ದಾಳಿಗೆ ಸಂಪೂರ್ಣ ಧೂಳೀಪಟವಾದ ಇಂಗ್ಲೆಂಡ್ 25.2 ಓವರ್‌ಗಳಲ್ಲಿ 110 ರನ್‌ಗಳಿಗೆ ಸರ್ವಪತನ ಕಂಡಿತು. ಈ ಅಲ್ಪಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ, ರೋಹಿತ್ ಶರ್ಮ (76*ರನ್, 57 ಎಸೆತ, 6 ಬೌಂಡರಿ, 5 ಸಿಕ್ಸರ್) ಹಾಗೂ ಶಿಖರ್ ಧವನ್ (31*ರನ್, 54 ಎಸೆತ, 4 ಬೌಂಡರಿ) ಜೋಡಿಯ ಅಜೇಯ ಬ್ಯಾಟಿಂಗ್ ಫಲವಾಗಿ 18.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 114 ರನ್‌ಗಳಿಸಿತು. ಪಂದ್ಯ ಒಟ್ಟು 44 ಓವರ್‌ಗಳಲ್ಲಿ ಮುಕ್ತಾಯಗೊಂಡಿತು.

    ಇಂಗ್ಲೆಂಡ್: 25.2 ಓವರ್‌ಗಳಲ್ಲಿ 110 (ಜೋಸ್ ಬಟ್ಲರ್ 30, ಡೇವಿಡ್ ವಿಲ್ಲಿ 21, ಜಸ್‌ಪ್ರೀತ್ ಬುಮ್ರಾ 19ಕ್ಕೆ 6, ಮೊಹಮದ್ ಶಮಿ 31ಕ್ಕೆ3, ಪ್ರಸಿದ್ಧ ಕೃಷ್ಣ 26ಕ್ಕೆ 1), ಭಾರತ: 18.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 114 (ರೋಹಿತ್ ಶರ್ಮ 76*, ಶಿಖರ್ ಧವನ್ 31*).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts