More

    VIDEO: ಇಂಗ್ಲೆಂಡ್ ತಂಡಕ್ಕೆ 269 ರನ್ ಜಯ, 2-1 ರಿಂದ ಸರಣಿ ವಶ

    ಮ್ಯಾಂಚೆಸ್ಟರ್: ಪದೆ ಪದೆ ಮಳೆ ಅಡಚಣೆ ನಡುವೆಯೂ ವೇಗಿಗಳಾದ ಕ್ರಿಸ್ ವೋಕ್ಸ್ (50ಕ್ಕೆ 5) ಹಾಗೂ ಸ್ಟುವರ್ಟ್ ಬ್ರಾಡ್ (36ಕ್ಕೆ 4) ಹಾಗೂ ಮಾರಕ ದಾಳಿ ನೆರವಿನಿಂದ ಆತಿಥೇಯ ಇಂಗ್ಲೆಂಡ್ ತಂಡ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 269 ರನ್‌ಗಳಿಂದ ಮಣಿಸಿತು. ಇದರಿಂದ ಏಕದಿನ ವಿಶ್ವಚಾಂಪಿಯನ್ ಇಂಗ್ಲೆಂಡ್ ತಂಡ 3 ಪಂದ್ಯಗಳ ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿತು. 117 ದಿನಗಳ ಬಳಿಕ ಪುನರಾರಂಭಗೊಂಡ ಕ್ರಿಕೆಟ್ ಸರಣಿ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಸೋಲನುಭವಿಸಿದರೂ ಸರಣಿ ವಶಪಡಿಸಿಕೊಳ್ಳುವಲ್ಲಿ ಯಶಕಂಡಿತು.

    ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಮಂಗಳವಾರ ಮುಕ್ತಾಯಗೊಂಡ ಪಂದ್ಯದಲ್ಲಿ 399 ರನ್ ಗೆಲುವಿನ ಗುರಿ ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್, 2 ವಿಕೆಟ್‌ಗೆ 10 ರನ್‌ಗಳಿಂದ ದಿನದಾಟ ಆರಂಭಿಸಿ 37.1 ಓವರ್‌ಗಳಲ್ಲಿ 129 ರನ್‌ಗಳಿಗೆ ಸರ್ವಪತನ ಕಂಡಿತು. ಮಳೆಯಿಂದಾಗಿ ನಾಲ್ಕನೇ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಇಂಗ್ಲೆಂಡ್ ಮೊದಲ ಇನಿಂಗ್ಸ್ 369 ರನ್‌ಗಳಿಸಿದರೆ, ವೆಸ್ಟ್ ಇಂಡೀಸ್ 197 ರನ್‌ಗಳಿಗೆ ಸರ್ವಪತನ ಕಂಡಿತ್ತು. 172 ರನ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 2 ವಿಕೆಟ್‌ಗೆ 226 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

    ಅಂತಿಮ ದಿನದಾಟದಲ್ಲಿ ಗೆಲುವು ಅಸಾಧ್ಯವಾದರೂ ಸೋಲು ತಪ್ಪಿಸಿಕೊಳ್ಳಲು ಉತ್ತಮ ಅವಕಾಶ ಹೊಂದಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭದಲ್ಲೇ ಸ್ಟುವರ್ಟ್ ಬ್ರಾಡ್ ಆಘಾತ ನೀಡಿದರು. 2 ರನ್‌ಗಳಿಂದ ಬ್ರಾಥ್‌ವೇಟ್ (19) ಹಾಗೂ 4 ರನ್‌ಗಳಿಂದ ಇನಿಂಗ್ಸ್ ಆರಂಭಿಸಿದ ಶೈ ಹೋಪ್ (31) ದಿನದಾಟದಲ್ಲಿ 35, ಒಟ್ಟಾರೆ 3ನೇ ವಿಕೆಟ್‌ಗೆ 39 ರನ್ ಪೇರಿಸಿ ಬೇರ್ಪಟ್ಟಿತು. ಬ್ರಾಥ್‌ವೇಟ್ ಅವರನ್ನುಎಲ್‌ಬಿ ಬಲೆಗೆ ಬೀಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಸಾಧನೆ ಮಾಡಿದರು. ಶೈ ಹೋಪ್ ಹಾಗೂ ಶಮರಾಹ್ ಬ್ರೂಕ್ಸ್ (22) ಜೋಡಿಗೆ ಕ್ರಿಸ್ ವೋಕ್ಸ್ ಪೆವಿಲಿಯನ್ ದಾರಿ ತೋರಿದರು. ಬಳಿಕ ಕ್ರಿಸ್ ವೋಕ್ಸ್ ಹಾಗೂ ಬ್ರಾಡ್ ಜೋಡಿಯ ದಾಳಿಗೆ ವಿಂಡೀಸ್ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು.

    ಇಂಗ್ಲೆಂಡ್: 369 ಮತ್ತು 2 ವಿಕೆಟ್‌ಗೆ 226 ಡಿಕ್ಲೇರ್, ವೆಸ್ಟ್ ಇಂಡೀಸ್: 197 ಮತ್ತು 37.1 ಓವರ್‌ಗಳಲ್ಲಿ 129 (ಶೈ ಹೋಪ್ 31, ಬ್ರೂಕ್ಸ್ 22, ಬ್ಲ್ಯಾಕ್‌ವುಡ್ 23, ಕ್ರಿಸ್ ವೋಕ್ಸ್ 50ಕ್ಕೆ 4, ಸ್ಟುವರ್ಟ್ ಬ್ರಾಡ್ 36ಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts