More

    ಇಂದಿನಿಂದ ಇಂಗ್ಲೆಂಡ್-ವಿಂಡೀಸ್ 2ನೇ ಟೆಸ್ಟ್

    ಮ್ಯಾಂಚೆಸ್ಟರ್: ಕರೊನಾ ವೈರಸ್ ಭೀತಿಯ ನಡುವೆಯೂ 117 ದಿನಗಳ ಬಳಿಕ ಪುನರಾರಂಭಗೊಂಡ ಮೊದಲ ಟೆಸ್ಟ್ ಪಂದ್ಯವೇ ರೋಚಕ ಕಾಳಗಕ್ಕೆ ಸಾಕ್ಷಿಯಾಗಿತ್ತು. ಯಾವುದೇ ಟಿ20, ಏಕದಿನ ಪಂದ್ಯಕ್ಕೂ ಕಡಿಮೆಯಿಲ್ಲ ಎನ್ನುವಂತೆ ಏಕದಿನ ವಿಶ್ವಚಾಂಪಿಯನ್ ಇಂಗ್ಲೆಂಡ್ ಹಾಗೂ ಟಿ20 ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡಗಳು ಸೌಥಾಂಪ್ಟನ್‌ನಲ್ಲಿ ಹೋರಾಡಿದ್ದವು. ಇದೀಗ ಈ ಕದನ ಕುತೂಹಲ ಓಲ್ಡ್ ಟ್ರಾಫೋರ್ಡ್ ಅಂಗಳಕ್ಕೆ ಶಿಫ್ಟ್ ಆಗಿದೆ. 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿರುವ ಪ್ರವಾಸ ವೆಸ್ಟ್ ಇಂಡೀಸ್ ಆತ್ಮವಿಶ್ವಾಸದಲ್ಲಿದ್ದರೆ, ನಾಯಕ ಜೋ ರೂಟ್ ಆಗಮನ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಕೊಂಚ ಸಮಾಧಾನ ತಂದಿದೆ.

    ಇದನ್ನೂ ಓದಿ: ಕೋಚ್ ಗ್ಯಾರಿ ಕರ್ಸ್ಟನ್‌ಗಾಗಿ ಧೋನಿ ರದ್ದುಗೊಳಿಸಿದ ಕಾರ್ಯಕ್ರಮ ಯಾವುದು ?

    ಪುಟಿದೇಳುವ ವಿಶ್ವಾಸದಲ್ಲಿ ಆತಿಥೇಯರು: 2017-18ನೇ ಸಾಲಿನ ಆಶಸ್ ಸರಣಿ ಸೇರಿದಂತೆ ಕಳೆದ 10 ಟೆಸ್ಟ್ ಸರಣಿಗಳಲ್ಲಿ 8 ಬಾರಿ ಮೊದಲ ಪಂದ್ಯದಲ್ಲೇ ಸೋತರೂ ಸರಣಿ ಗೆದ್ದಿರುವ ಹಾಗೂ ಡ್ರಾ ಸಾಧಿಸಿರುವ ಇತಿಹಾಸ ಹೊಂದಿರುವ ಇಂಗ್ಲೆಂಡ್ ಪುಟಿದೇಳುವ ವಿಶ್ವಾಸದಲ್ಲಿದೆ. ಕ್ರಿಕೆಟ್ ಪುನರಾರಂಭಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತರೂ ಇಂಗ್ಲೆಂಡ್ ಸರಣಿಯನ್ನು 3-1 ರಿಂದ ಗೆದ್ದುಕೊಂಡಿತ್ತು. ನಾಯಕ ಜೋ ರೂಟ್ ಆಗಮನದಿಂದಾಗಿ ಜೋ ಡೆನ್ಲೆ ಹೊರಗುಳಿಯಲಿದ್ದಾರೆ. ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ಆಯ್ಕೆಯೇ ಇನ್ನು ಅನಿಶ್ಚಿತತೆಯಲ್ಲಿ ಮುಳುಗಿದೆ. ಬ್ರಾಡ್‌ಗೆ ಅವಕಾಶ ನೀಡಿದರೆ ಮಾರ್ಕ್ ವುಡ್ ಅಥವಾ ಜ್ರೋಾ ಆರ್ಚರ್ ಇಬ್ಬರಲ್ಲಿ ಒಬ್ಬರನ್ನು ಕೈಬಿಡಲಾಗುತ್ತದೆ. ಮತ್ತೊಂದೆಡೆ, ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಪ್ರವಾಸಿ ವೆಸ್ಟ್ ಇಂಡೀಸ್ ತಂಡದಲ್ಲಿ ಯಾವುದೇ ಬದಲಾವಣೆ ನಿರೀಕ್ಷಿಸುವಂತಿಲ್ಲ. ಈ ಪಂದ್ಯದಲ್ಲೂ ಸರ್ವಾಂಗೀಣ ನಿರ್ವಹಣೆ ಪುನರಾವರ್ತಿಸಿ ಗೆಲುವು ದಾಖಲಿಸುವ ಮೂಲಕ ಸರಣಿ ವಶಪಡಿಸಿಕೊಳ್ಳುವ ಹಂಬಲವನ್ನು ಜೇಸನ್ ಹೋಲ್ಡರ್ ಬಳಗ ಹೊಂದಿದೆ.

    ಪಂದ್ಯ ಆರಂಭ: ಮಧ್ಯಾಹ್ನ 3.30
    ನೇರಪ್ರಸಾರ: ಸೋನಿ ಸಿಕ್ಸ್, ಜಿಯೋ ಟಿವಿ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts