More

    ಇಂಗ್ಲೆಂಡ್​-ವಿಂಡೀಸ್​ ನಡುವಿನ 2ನೇ ಟೆಸ್ಟ್​ ಪಂದ್ಯದ ಮೂರನೇ ದಿನದಾಟ ಮಳೆಯಿಂದ ರದ್ದು

    ಮ್ಯಾಂಚೆಸ್ಟರ್​: ಆತಿಥೇಯ ಇಂಗ್ಲೆಂಡ್​ ಹಾಗೂ ವೆಸ್ಟ್​ ಇಂಡೀಸ್​ ನಡುವಿನ ಎರಡನೇ ಟೆಸ್ಟ್​ ಪಂದ್ಯದ ಮೂರನೇ ದಿನದಾಟಕ್ಕೆ ಮಳೆ ಅಡ್ಡಿಯುಂಟು ಮಾಡಿದೆ. ಶನಿವಾರ ಬೆಳಗ್ಗೆ ಬಿದ್ದ ಮಳೆಯಿಂದಾಗಿ 3ನೇ ದಿನದಾಟದಲ್ಲಿ ಒಂದು ಎಸೆತ ಆಟ ನಡೆಯಲಿಲ್ಲ. ಇದರಿಂದ  ಪಂದ್ಯದಲ್ಲಿ ಮೇಲುಗೈ ಸಾಧಿಸುವ ಯತ್ನದಲ್ಲಿದ್ದ ಆತಿಥೇಯ ಇಂಗ್ಲೆಂಡ್​ ತಂಡಕ್ಕೆ ಹಿನ್ನಡೆಯುಂಟಾಗಿದೆ.

    ಓಲ್ಡ್​ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಂಗ್ಲೆಂಡ್​ 9 ವಿಕೆಟ್​ಗೆ 469 ರನ್​ಗಳಿಗೆ ಇನಿಂಗ್ಸ್​ ಡಿಕ್ಲೇರ್​ ಮಾಡಿಕೊಂಡಿದ್ದರೆ, ಪ್ರವಾಸಿ ವೆಸ್ಟ್​ ಇಂಡೀಸ್​ ಎರಡನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್​ಗೆ 32 ರನ್​ ಗಳಿಸಿದ್ದು, ಇನ್ನೂ 437 ರನ್​ ಹಿನ್ನಡೆಯಲ್ಲಿದೆ. ಕ್ರೇಗ್​ ಬ್ರಾಥ್​ವೇಟ್​ (6) ಹಾಗೂ ಅಲ್ಜಾರಿ ಜೋಸೆಫ್​ (14) ಕ್ರೀಸ್​ನಲ್ಲಿದ್ದಾರೆ. ಮಳೆಯಿಂದಾಗಿ ಪಂದ್ಯದ ಮೊದಲ ದಿನದಾಟ 90 ನಿಮಿಷ ತಡವಾಗಿ ಆರಂಭಗೊಂಡಿತ್ತು. ಮೂರು ಪಂದ್ಯಗಳ ಸರಣಿಯಲ್ಲಿ ವೆಸ್ಟ್​ ಇಂಡೀಸ್​ ತಂಡ 1-0ಯಿಂದ ಮುನ್ನಡೆ ಸಾಧಿಸಿದೆ.

    ಇಂಗ್ಲೆಂಡ್​: 162 ಓವರ್​ಗಳಲ್ಲಿ 9 ವಿಕೆಟ್​ಗೆ 469 ಡಿಕ್ಲೇರ್​ (ಸಿಬ್ಲೆ 120, ಸ್ಟೋಕ್ಸ್​ 176, ಬಟ್ಲರ್​ 40, ಚೇಸ್​ 172ಕ್ಕೆ 5, ರೋಚ್​ 58ಕ್ಕೆ 2), ವೆಸ್ಟ್​ ಇಂಡೀಸ್​: 14 ಓವರ್​ಗಳಲ್ಲಿ 1 ವಿಕೆಟ್​ಗೆ 32 (ಬ್ರಾಥ್​ ವೇಟ್​ 6, ಕ್ಯಾಂಪ್​ಬೆಲ್​ 12, ಕರ್ರನ್​​ 8ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts