More

    ಬಲವಂತದ ವಿವಾಹ ತಡೆಗೆ ಕ್ರಮ; ಮದುವೆಗೆ ಕನಿಷ್ಠ ವಯಸ್ಸು 18ಕ್ಕೆ ಏರಿಕೆ!

    ಇಂಗ್ಲೆಂಡ್​​​: ಬಲವಂತದ ವಿವಾಹವನ್ನು ತಡೆಯಲು ಇಂಗ್ಲೆಂಡ್ ಮತ್ತು ವೇಲ್ಸ್‌ ರಾಷ್ಟ್ರಗಳು ಕ್ರಮ ತೆಗೆದುಕೊಂಡಿವೆ. ವಿಶೇಷವಾಗಿ ದಕ್ಷಿಣ ಏಷ್ಯಾ ಮತ್ತು ಆಫ್ರಿಕನ್‌ ಜನಾಂಗಗಳು ಈ ರೀತಿಯ ಬಲವಂತದ ಮದುವೆಗೆ ಒಳಗಾಗುತ್ತಿದ್ದರು. ಹೀಗಾಗಿ ಮದುವೆಯ ಕನಿಷ್ಠ ವಯಸ್ಸನ್ನು 18 ವರ್ಷಕ್ಕೆ ಏರಿಕೆ ಮಾಡಿ ಹೊಸ ಕಾನೂನನ್ನು ಜಾರಿಗೊಳಿಸಲಾಗಿದೆ.

    ಮದುವೆಯ ಕನಿಷ್ಠ ವಯಸ್ಸನ್ನು 18 ವರ್ಷಕ್ಕೆ ಏರಿಕೆ ಮಾಡಿ ಹೊಸ ಕಾನೂನನ್ನು ಜಾರಿಗೊಳಿಸಿದೆ. ಈವರೆಗೆ 16 ಅಥವಾ 17 ವರ್ಷದ ಯುವಕ- ಯುವತಿಯರು ಮದುವೆಗೆ ಅರ್ಹರಲ್ಲ ಎನ್ನುವ ಯಾವುದೇ ಕಾನೂನು ಇರಲಿಲ್ಲ. ಹೀಗಾಗಿ ಪೋಷಕರ ಒಪ್ಪಿಗೆಯ ಮೇರೆಗೆ ಮದುವೆಯಾಗಬಹುದಿತ್ತು. ಆದರೆ ಇನ್ಮುಂದೆ ಮದುವೆಗೆ ಕನಿಷ್ಠ ವಯಸ್ಸು 18 ಆಗಬೇಕಾಗಿದೆ. 18 ವರ್ಷವಾಗದೇ ಇದ್ದಲ್ಲಿ, 7 ವರ್ಷದವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗಿ ಬರುತ್ತದೆ. ಕೆಲವು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಸಾಂಪ್ರದಾಯಿಕವಾಗಿ ಬೇಗ ನಡೆಸುವ ವಿವಾಹಗಳು ಕಾನೂನು ಬಾಹಿರವಾಗಿರುತ್ತವೆ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಡಿಗೆ ಮನೆಗಾಗಿ ಕಿಡ್ನಿ ಮಾರಾಟಕ್ಕಿಟ್ಟ ವ್ಯಕ್ತಿ!; ಟ್ವೀಟ್​​ ಪೋಸ್ಟ್​​ ವೈರಲ್​​

    ಬಾಲ್ಯ ವಿವಾಹವು ಹೆಚ್ಚಾಗಿ ಹುಡುಗಿಯರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಳೆದ ವರ್ಷ, ರಾಷ್ಟ್ರೀಯ ಸಹಾಯವಾಣಿ ಬಾಲ್ಯ ವಿವಾಹದಲ್ಲಿ 64 ಪ್ರಕರಣಗಳು ದಾಖಲಾಗಿವೆ. ಹೊಸ ಕಾನೂನು ಇಂಗ್ಲೆಂಡ್ ಮತ್ತು ವೇಲ್ಸ್‌ ರಾಷ್ಟ್ರಗಳಲ್ಲಿ ಬಲವಂತ ವಿವಾಹ ತಡೆಯಲು ಸಹಾಯ ಮಾಡಲಿದೆ.

    ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts