More

    ಇಂಗ್ಲೆಂಡ್ ಎದುರು ಶ್ರೀಲಂಕಾ ತಂಡದ ಪ್ರತಿ ಹೋರಾಟ

    ಗಾಲೆ: ನಾಯಕ ಜೋ ರೂಟ್ (228 ರನ್, 321 ಎಸೆತ, 18 ಬೌಂಡರಿ, 1 ಸಿಕ್ಸರ್) ದ್ವಿಶತಕದಾಟದ ನೆರವಿನಿಂದ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಎದುರು 286 ರನ್ ಮುನ್ನಡೆ ಸಾಧಿಸಿದೆ. ಭಾರಿ ಇನಿಂಗ್ಸ್ ಹಿನ್ನಡೆ ನಡುವೆಯೂ ಆತಿಥೇಯ ತಂಡ ಕುಸಾಲ್ ಪೆರೇರಾ (62ರನ್, 109 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಲಹಿರು ತಿರುಮನ್ನೆ (76*ರನ್, 189 ಎಸೆತ, 6 ಬೌಂಡರಿ) ಜೋಡಿ ಎಚ್ಚರಿಕೆ ನಿರ್ವಹಣೆಯಿಂದ ಪ್ರತಿ ಹೋರಾಟದ ಎಚ್ಚರಿಕೆಯನ್ನು ರವಾನಿಸಿದೆ.

    ಇದನ್ನೂ ಓದಿ: ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಭಾರತ ತಂಡಕ್ಕೆ ಆರಂಭಿಕ ಶಾಕ್,

    ಗಾಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 4 ವಿಕೆಟ್‌ಗೆ 320 ರನ್‌ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ 421 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ 286 ರನ್ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗೆ 156 ರನ್ ಕಲೆಹಾಕಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 130ರನ್ ಗಳಿಸಬೇಕಿದೆ. ಲಹಿರು ತಿರುಮನ್ನೆ ಹಾಗೂ ಇನ್ನು ಖಾತೆ ತೆರೆಯದ ಲಸಿತ್ ಎಂಬುಲ್ಡೆನಿಯ ಕ್ರೀಸ್‌ನಲ್ಲಿದ್ದಾರೆ.

    ಇದನ್ನೂ ಓದಿ: ಕರ್ನಾಟಕಕ್ಕೆ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ತಂದ ಅನಿರುದ್ಧ ಜೋಶಿ

    * ಜೋ ರೂಟ್, ಶ್ರೀಲಂಕಾದಲ್ಲಿ ದ್ವಿಶತಕ ಸಿಡಿಸಿದ ಇಂಗ್ಲೆಂಡ್‌ನ ಮೊದಲ ಆಟಗಾರ ಎನಿಸಿಕೊಂಡರು. ಜತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 8 ಸಾವಿರ ರನ್ ಪೂರೈಸಿದರು. ಇದರೊಂದಿಗೆ ಅತಿ ಹೆಚ್ಚು ರನ್ ಗಳಿಸಿರುವ ಹಾಲಿ ಕ್ರಿಕೆಟಿಗ ಎನಿಸಿದ್ದಾರೆ.

    ಶ್ರೀಲಂಕಾ: 135 ಮತ್ತು 2 ವಿಕೆಟ್‌ಗೆ 156 (ಕುಸಾಲ್ ಪೆರೇರಾ 62, ಲಹಿರು ತಿರುಮನ್ನೆ 76*, ಸ್ಯಾಮ್ ಕರ‌್ರನ್ 25ಕ್ಕೆ 1, ಜಾಕ್ ಲೀಚ್ 67ಕ್ಕೆ 1), ಇಂಗ್ಲೆಂಡ್ : 421 (ಜೋ ರೂಟ್ 228, ಡಾನ್ ಲಾರೆನ್ಸ್ 73, ಡಿಲ್‌ರುವಾನ್ ಪೆರೇರಾ 109ಕ್ಕೆ 4, ಲಸಿತ್ ಎಂಬುಲ್ಡೆನಿಯ 176ಕ್ಕೆ 3, ಅಸಿತಾ ಫೆರ್ನಾಂಡೊ 44ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts