More

    ಯುಎಇಗೆ ಬಂದಿಳಿದ ಇಂಗ್ಲೆಂಡ್, ಆಸ್ಟ್ರೇಲಿಯಾ ಕ್ರಿಕೆಟಿಗರು..

    ದುಬೈ: ಕೋಟ್ಯಂತರ ಕ್ರೀಡಾಭಿಮಾನಿಗಳು ಕಾಯುತ್ತಿದ್ದ 13ನೇ ಆವೃತ್ತಿಯ ಐಪಿಎಲ್‌ಗೆ ಕ್ಷಣಗಣನೆ ಆರಂಭಗೊಂಡಿದೆ. ಅಬುಧಾಬಿಯ ಶೇಖ್ ಜಯೆದ್ ಸ್ಟೇಡಿಯಂ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಸಜ್ಜಾಗಿದೆ. ಇದೀಗ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಟಗಾರರು ಕಡೆದಾಗಿ ತಂಡ ಕೂಡಿಕೊಂಡಿದ್ದಾರೆ. ಬುಧವಾರವಷ್ಟೆ ಇಂಗ್ಲೆಂಡ್‌ನಲ್ಲಿ ದ್ವಿಪಕ್ಷೀಯ ಏಕದಿನ ಸರಣಿ ಮುಕ್ತಾಯಗೊಂಡ ಬಳಿಕ ಪಿಪಿಇ ಕಿಟ್ ಧರಿಸಿ ಐಪಿಎಲ್ ಆಡುವ ಸಲುವಾಗಿ ಕೆಲ ಆಟಗಾರರು ಯುಎಇಗೆ ಬಂದಿಳಿದರು. ಆಟಗಾರರು ತಂಡ ಕೂಡಿಕೊಂಡಿರುವುದನ್ನು ರಾಜಸ್ಥಾನ ರಾಯಲ್ಸ್, ಕೋಲ್ಕತ ನೈಟ್ ರೈಡರ್ಸ್‌ ತಂಡಗಳು ಟ್ವಿಟರ್‌ನಲ್ಲಿ ಫೋಟೋ ಸಮೇತ ಪ್ರಕಟಿಸಿವೆ.

    ಇದನ್ನೂ ಓದಿ: ಕಣಿವೆ ರಾಜ್ಯದ ಯುವ ಕ್ರಿಕೆಟಿಗರಿಗೆ ಸುರೇಶ್ ರೈನಾ ನೆರವು..!

    ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್, ಆ್ಯಂಡ್ರೊ ಟೈ, ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ ಹಾಗೂ ಟಾಮ್ ಕರನ್ ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಂಡರು. ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್, ಇಂಗ್ಲೆಂಡ್‌ನ ಏವೊಯಿನ್ ಮಾರ್ಗನ್ ಹಾಗೂ ಟಾಮ್ ಬಾಂಟಮ್ ಅಬುಧಾನಿಯಲ್ಲಿ ಕೆಕೆಆರ್ ತಂಡ ಸೇರ್ಪಡೆಗೊಂಡರು. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ ಹಾಗೂ ಇಂಗ್ಲೆಂಡ್‌ನ ಜಾನಿ ಬೇರ್‌ಸ್ಟೋ ದುಬೈನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಸೇರಿದರು.

    ಇದನ್ನೂ ಓದಿ: ಬರ್ತ್ ಡೇ ವಿಷ್ ಮಾಡಿದ ಕೊಹ್ಲಿಗೆ ಪ್ರಧಾನಿ ಮೋದಿ ಹೇಳಿದ್ದೇನು..?

    ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ರಿಂದ ಜಯ ದಾಖಲಿಸಿದರೆ, ಟಿ20 ಸರಣಿಯನ್ನು ಇಂಗ್ಲೆಂಡ್ ಗೆದ್ದುಕೊಂಡಿತ್ತು. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಟಗಾರರ ಆಗಮನದಿಂದಾಗಿ ಐಪಿಎಲ್‌ನಲ್ಲಿ ಮತ್ತಷ್ಟು ರೋಚಕತೆ ಹೆಚ್ಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts