More

    ಕತಾರ್​ ಕರ್ನಾಟಕ ಸಂಘದಿಂದಲೂ ಅಭಿಯಂತರ ದಿನಾಚರಣೆ; ತಾಂತ್ರಿಕ ಮಾಹಿತಿಗಳ ವಿನಿಮಯ..

    ಕತಾರ್​: ದೂರದ ಕತಾರ್​ನಲ್ಲಿ ಉದ್ಯೋಗ-ಉದ್ಯಮದಲ್ಲಿರುವ ಕನ್ನಡಿಗರು ಕರ್ನಾಟಕ ಸಂಘವನ್ನು ಕಟ್ಟಿಕೊಂಡು ಅಲ್ಲಿ ಕನ್ನಡದ ನೆಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದು, ಅವರೆಲ್ಲ ಒಂದಾಗಿ ಅಭಿಯಂತರರ ದಿನವನ್ನೂ ಆಚರಣೆ ಮಾಡಿದ್ದಾರೆ.

    ಭಾರತ ರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ 162ನೇ ಜನ್ಮದಿನಾಚರಣೆ ಸ್ಮರಣಾರ್ಥ 2022ರ ಅಭಿಯಂತರರ ದಿನವನ್ನು ಕತಾರ್​ ಕರ್ನಾಟಕ ಸಂಘವು ಆಚರಿಸಿದೆ. ಆ ಮೂಲಕ ವಾರ್ಷಿಕ ಸಂಪ್ರದಾಯವನ್ನು ಮುಂದುವರಿಸಿದೆ.

    ಅಲ್ಲಿನ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಪಿ.ಎನ್. ಬಾಬುರಾಜನ್ ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು. ಗೌರವ ಅತಿಥಿಗಳಾಗಿ ಕತಾರ್ ಕೆಮಿಕಲ್ ಲಿಮಿಟೆಡ್‌ ಪ್ರಾಜೆಕ್ಟ್ ಮ್ಯಾನೇಜರ್ ಎಂ.ಜಿ.ಅಮೀರ್ ಫರೋಖ್‌ಜಾದ್, ಕತಾರ್ ಕೆಮಿಕಲ್ ಲಿಮಿಟೆಡ್ ಪ್ರಾಜೆಕ್ಟ್ ಇಂಜಿನಿಯರ್ ಮೊಹಮ್ಮದ್ ಅಲ್-ಜೌಬಿ ಪಾಲ್ಗೊಂಡಿದ್ದರು. ಗಲ್ಫಾರ್ ಅಲ್ ಮಿಶಾದ್​ನ ಇನ್​ಫ್ರಾಸ್ಟ್ರಕ್ಚರ್​ ಮತ್ತು ಫೆಸಿಲಿಟಿ ಮ್ಯಾನೇಜ್‌ಮೆಂಟ್​ನ ಸೀನಿಯರ್ ಜನರಲ್ ಮ್ಯಾನೇಜರ್ ಹೇಮಚಂದ್ರನ್​ ಅವರು​ ಪ್ರಧಾನ ಟೆಕ್ನಿಕಲ್ ಕೀನೋಟ್ ಸ್ಪೀಕರ್ ಆಗಿದ್ದರು.

    ಕತಾರ್​ ಕರ್ನಾಟಕ ಸಂಘದಿಂದಲೂ ಅಭಿಯಂತರ ದಿನಾಚರಣೆ; ತಾಂತ್ರಿಕ ಮಾಹಿತಿಗಳ ವಿನಿಮಯ..

    ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ಕರ್ನಾಟಕ ಸಂಘ ಕತಾರ್‌ನ ಸಲಹಾ ಮಂಡಳಿಯ ಸದಸ್ಯರು ಮತ್ತು ಕರ್ನಾಟಕ ಸಂಘ ಕತಾರ್‌ನ ಸಂಘ-ಸಂಸ್ಥೆಗಳ ಅಧ್ಯಕ್ಷರು ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

    ಕಾರ್ಯಕ್ರಮದ ಪ್ರಮುಖ ಅಂಗವಾಗಿ ಹೇಮಚಂದ್ರನ್ ಅವರು “ತಂತ್ರಜ್ಞಾನ ಹಾಗೂ ಅದರಿಂದ ಜೀವನಶೈಲಿಗಳ ಮೇಲೆ ಪರಿಣಾಮ”, ಕಿಶೋರ್, ವೆಂಕಟೇಶ್ ಅವರು “ವಿದ್ಯುತ್ ಉತ್ಪಾದನೆ ಹಾಗೂ ಅದರ ಪ್ರಯೋಜನ” ಮತ್ತು ಪ್ರದೀಪ್ ಕುಮಾರ್ ದಿಲೀಪ್ ಅವರು “ವೈಮಾನಿಕ ಕ್ಷೇತ್ರದಲ್ಲಿ ಡ್ರೋನ್​ಗಳ ಬಳಕೆ” ವಿಷಯಗಳ ಬಗ್ಗೆ ತಾಂತ್ರಿಕ ಮಾಹಿತಿಗಳನ್ನು ಸಭೆಗೆ ನೀಡಿದರು.

    ಬಾಲ್ಯದ ದಿನಗಳಲ್ಲಿ ಸರ್ ಎಂ.ವಿ ಅವರ ಜನ್ಮಸ್ಥಳಕ್ಕೆ ಭೇಟಿ ನೀಡಿದ್ದನ್ನು ಮಹೇಶ್ ಗೌಡ ಅವರು ತಮ್ಮ ಸ್ವಾಗತ ಭಾಷಣದಲ್ಲಿ ನೆನಪಿಸಿಕೊಂಡರು. ವಿಶ್ವೇಶ್ವರಯ್ಯ ಅವರು ಭಾರತದ ಲಕ್ಷಾಂತರ ಯುವಕರಿಗೆ ಇಂಜಿನಿಯರ್‌ಗಳಾಗಲು ಸ್ಫೂರ್ತಿ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.

    ಕತಾರ್​ ಕರ್ನಾಟಕ ಸಂಘದಿಂದಲೂ ಅಭಿಯಂತರ ದಿನಾಚರಣೆ; ತಾಂತ್ರಿಕ ಮಾಹಿತಿಗಳ ವಿನಿಮಯ..

    ಕರ್ನಾಟಕ ಸಂಘ ಕತಾರ್ ಇಂಜಿನಿಯರ್‌ಗಳ ದಿನಾಚರಣೆಯನ್ನು ಆಚರಿಸುತ್ತಿರುವುದನ್ನು ಪಿ.ಎನ್.ಬಾಬುರಾಜನ್ ಶ್ಲಾಘಿಸಿದರು ಮತ್ತು ಮುಂದಿನ ವರ್ಷ ಈ ಆಚರಣೆಯನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹಯೋಗದೊಂದಿಗೆ ಎಲ್ಲ ಭಾರತೀಯ ಇಂಜಿನಿಯರ್‌ಗಳು ಮತ್ತು ಅಂಗಸಂಸ್ಥೆಗಳನ್ನು ಆಹ್ವಾನಿಸುವ ಮೂಲಕ ದೊಡ್ಡಮಟ್ಟದಲ್ಲಿ ನಡೆಸಬೇಕೆಂದು ವಿನಂತಿಸಿದರು.

    ಗೌರವ ಅತಿಥಿ ಅಮೀರ್ ತಮ್ಮ ಭಾಷಣದಲ್ಲಿ ಇಂಜಿನಿಯರಿಂಗ್ ವಿಕಾಸ ಮತ್ತು ಅವರು ಇಂಜಿನಿಯರ್ ಆಗಲು ಸಿಕ್ಕ ಪ್ರೇರಣೆಯ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ಗೌರವಾನ್ವಿತ ಅತಿಥಿಗಳು ಮತ್ತು ತಾಂತ್ರಿಕ ಭಾಷಣಕಾರರಿಗೆ ಸ್ಮರಣಿಕೆಗಳನ್ನು ವಿತರಿಸಲಾಯಿತು.

    ಕಾರ್ಯಕ್ರಮವನ್ನು ಕರ್ನಾಟಕ ಸಂಘ ಕತಾರ್‌ನ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್, ದಿಲೀಪ್ ನಿರ್ವಹಿಸಿದರು. ಕರ್ನಾಟಕ ಸಂಘ ಕತಾರ್‌ನ ಕೋಶಾಧಿಕಾರಿ ರಮೇಶ್ ವಂದನಾರ್ಪಣೆ ಸಲ್ಲಿಸಿದರು.

    ಬರ್ತ್​ಡೇಗೆ ಬರುವವರಿಗೆ ರಿಯಲ್ ಸ್ಟಾರ್ ಉಪೇಂದ್ರ ಕಂಡಿಷನ್ ಇದು..

    ವಿಷ್ಣುವರ್ಧನ್​ ಜನ್ಮದಿನಂದು ‘ಯಜಮಾನೋತ್ಸವ’; ನಡೆಯಲಿದೆ ದಾಖಲೆಯ ಕಟೌಟ್​​ ಜಾತ್ರೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts