More

    ದಿಢೀರನೇ ವಿದ್ಯಾರ್ಥಿನಿಯ ಕೋಣೆಗೆ​ ನುಗ್ಗಿದ ಯುವಕ: ಬಾಗಿಲು ಮುರಿದು ನೋಡಿದ ಪಾಲಕರಿಗೆ ಕಾದಿತ್ತು ಶಾಕ್​

    ವಿಜಯವಾಡ: ಯುವಕನೊರ್ವ 20 ವರ್ಷದ ಇಂಜಿನಿಯರ್​ ವಿದ್ಯಾರ್ಥಿನಿ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಅಕ್ಟೋಬರ್​ 15ರಂದು ವಿಜಯವಾಡದ ಕ್ರಿಸ್ತುರಾಜ್​ಪುರಂನಲ್ಲಿ ನಡೆದಿದೆ.

    ವಿದ್ಯಾರ್ಥಿನಿ ದಿವ್ಯಾ ತೇಜಸ್ವಿನಿಯನ್ನು ಕೊಲೆ ಮಾಡಿದ ಬೆನ್ನಲ್ಲೇ ಆರೋಪಿ ನಾಗೇಂದ್ರ ಬಾಬು ಅಲಿಯಾಸ್​ ಸ್ವಾಮಿ ಸಹ ತನ್ನಷ್ಟಕ್ಕೆ ತಾನು ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ದಿಢೀರನೇ ವಿದ್ಯಾರ್ಥಿನಿಯ ಕೋಣೆಗೆ​ ನುಗ್ಗಿದ ಯುವಕ: ಬಾಗಿಲು ಮುರಿದು ನೋಡಿದ ಪಾಲಕರಿಗೆ ಕಾದಿತ್ತು ಶಾಕ್​ಮಚಾವರಂ ಠಾಣೆಯ ಪೊಲೀಸರ ಪ್ರಕಾರ ಆರೋಪಿ ನಾಗೇಂದ್ರ ಬಾಬು ವೃತ್ತಿಯಲ್ಲಿ ಪೇಂಟರ್ ಮತ್ತು ಕ್ರಿಸ್ತುರಾಜ್​ಪುರಂನ ನಿವಾಸಿ. ಈತ ಕೆಲವು ದಿನಗಳಿಂದ ದಿವ್ಯಾ​ ಹಿಂದೆ ಬಿದ್ದಿದ್ದ. ತನ್ನ ಪ್ರೀತಿಯ ಪ್ರಸ್ತಾವನೆಯನ್ನು ದಿವ್ಯಾ ಮುಂದೆಯು ಇಟ್ಟಿದ್ದ. ಆದರೆ, ಅದು ತಿರಸ್ಕೃತಗೊಂಡಿತ್ತು ಎನ್ನಲಾಗಿದೆ.

    ಇದೇ ಕೋಪದಲ್ಲಿ ಗುರುವಾರ ದಿವ್ಯಾ ಮನೆಗೆ ನುಗ್ಗಿದ ನಾಗೇಂದ್ರ ದಿವ್ಯಾ ಇದ್ದ ಕೊಠಡಿಯನ್ನು ಲಾಕ್​ ಮಾಡಿಕೊಂಡು ವಾಗ್ವಾದಕ್ಕೆ ಇಳಿದಿದ್ದಾನೆ. ಈ ವೇಳೆ ಬಾಗಿಲು ಮುರಿದು ಯಾರಾದರೂ ಕಾಪಾಡಿ ಎಂದು ಕೂಗಾಡಿದ್ದಾಳೆ. ಇಬ್ಬರ ನಡುವಿನ ಮಾತುಕತೆ ತಾರಕಕ್ಕೇರಿ ನಿಯಂತ್ರಣ ಕಳೆದುಕೊಂಡ ನಾಗೇಂದ್ರ, ದಿವ್ಯಾಗೆ ಇರಿದಿದ್ದಾನೆ. ಬಳಿಕ ತಾನೂ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇತ್ತ ಕೊಠಡಿ ತೆರೆದು ನೋಡಿದ ಪಾಲಕರಿಗೆ ದಿವ್ಯಾ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಳು. ಇತ್ತ ನಾಗೇಂದ್ರನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಸಿಗಂದೂರು ವಿವಾದ: ಚಂಡಿಕಾ ಹೋಮಕ್ಕೆ ಅವಕಾಶ ನೀಡದ ಕಾರಣ ಮೌನವ್ರತ ಕುಳಿತ ಪ್ರಧಾನ ಅರ್ಚಕ ಕುಟುಂಬ

    ಆರೋಪಿ ನಾಗೇಂದ್ರ ಪಾಲಕರ ಪ್ರಕಾರ ಇಬ್ಬರು ಪ್ರೇಮಿಗಳಾಗಿದ್ದು, ಕೆಲವು ತಿಂಗಳ ಹಿಂದೆ ರಹಸ್ಯವಾಗಿ ಮದುವೆಯು ಆಗಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಈ ವಿಚಾರವನ್ನು ದಿವ್ಯಾ ಕುಟುಂಬ ಅಲ್ಲಗೆಳೆದಿದ್ದು, ನನ್ನ ಮಗಳು ಖಾಸಗಿ ಕಾಲೇಜಿನ ಇಂಜಿನಿಯರ್​ ವಿದ್ಯಾರ್ಥಿನಿ. ಒಳ್ಳೆಯ ವಿದ್ಯಾರ್ಥಿನಿಯೂ ಹೌದು. ಆಕೆ ಯಾರೊಂದಿಗೆ ಪ್ರೀತಿಯಲ್ಲಿ ಬಿದ್ದಿರಲಿಲ್ಲ ಎಂದಿದೆ.

    ಇದರ ನಡುವೆ ನಾಗೇಂದ್ರ ಸಹೋದರ ನಾಗರಾಜು, ದಿವ್ಯಾ ಮತ್ತು ನಾಗೇಂದ್ರ ಒಟ್ಟಿಗೆ ಇರುವ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಫೋಟೋದಲ್ಲಿ ಇಬ್ಬರು ಮದುವೆ ಆಗಿರುವಂತಿದೆ. ದಿವ್ಯಾಳ ಕುತ್ತಿಗೆಯಲ್ಲಿ ಮಾಂಗಲ್ಯವು ಇದ್ದಂತಿದೆ. ಆಕೆಯ ಪಾಲಕರಿಗೂ ಸಹ ಮದುವೆ ಬಗ್ಗೆ ತಿಳಿದಿದೆ. ಆದರೆ, ಇಬ್ಬರು ಒಟ್ಟಿಗೆ ಬಾಳಲು ಅವರ ಕುಟುಂಬ ಬಿಡಲಿಲ್ಲ ಎಂದು ನಾಗರಾಜು ಆರೋಪಿಸಿದ್ದಾರೆ.

    ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆ ಹಿಂದರುವ ಉದ್ದೇಶ ಏನೆಂಬುದನ್ನು ತಿಳಿಯಲು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಪ್ರವಾಹದಲ್ಲಿ ಮರಕ್ಕೆ ಸಿಲುಕಿದ ಕಾರು: ಕೊನೇ ಕರೆ ಮಾಡಿ ಸ್ನೇಹಿತನ ಬಳಿ ಕೇಳಿದ್ದು ಮನಕಲಕುವಂತಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts