More

    ಪ್ರವಾಹದಲ್ಲಿ ಮರಕ್ಕೆ ಸಿಲುಕಿದ ಕಾರು: ಕೊನೇ ಕರೆ ಮಾಡಿ ಸ್ನೇಹಿತನ ಬಳಿ ಕೇಳಿದ್ದು ಮನಕಲಕುವಂತಿದೆ!

    ಹೈದರಾಬಾದ್​: ಮುತ್ತಿನ ನಗರಿ ಹೈದರಾಬಾದ್​ನಲ್ಲಿ ಶತಮಾನದಲ್ಲಿ ಕಂಡುಕೇಳರಿಯದ ಭೀಕರ ಪ್ರವಾಹ ಎದುರಾಗಿದೆ. ಭಾರಿ ಮಳೆಗೆ ನಗರಾದಾದ್ಯಂತ ಜನಜೀವನ ಅಸ್ತವ್ಯವಸ್ತವಾಗಿದ್ದು, ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸಾಕಷ್ಟು ಕಾರುಗಳು ಪ್ರವಾಹದ ನೀರಿನಲ್ಲಿ ಸಂಪೂರ್ಣ ಮುಳಗಡೆಯಾದರೆ, ರಸ್ತೆಗಳೆಲ್ಲ ನದಿಯಂತಾಗಿ, ಕಟ್ಟಡಗಳಿಗೆ ನೀರು ನುಗ್ಗಿದೆ. ಇದರ ನಡುವೆ ಪ್ರವಾಹದ ನೀರಿನಲ್ಲಿ ಕಾರಿನೊಳಗೆ ಸಿಲುಕಿದ್ದ ವ್ಯಕ್ತಿಯೊಬ್ಬನ ಕೊನೆಯ ಫೋನ್​ ಕಾಲ್​ ಮರುಕ ಹುಟ್ಟಿಸುತ್ತದೆ​

    ದುರಾದೃಷ್ಟಕರ ಕಾರಿನಲ್ಲಿ ಸಿಲುಕಿಕೊಂಡ ವ್ಯಕ್ತಿಯ ಮೃತದೇಹ ಗುರುವಾರ ಪತ್ತೆಯಾಗಿದೆ. ಆತನನ್ನು ವೆಂಕಟೇಶ್​ ಗೌಡ ಎಂದು ಗುರುತಿಸಲಾಗಿದ್ದು, ಕೊನೆಯ ಬಾರಿಗೆ ತನ್ನ ಸ್ನೇಹಿತನಿಗೆ ಕರೆ ಮಾಡಿದ್ದ ವೆಂಕಟೇಶ್​, ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರು ಮರವೊಂದಕ್ಕೆ ಸಿಲುಕಿಕೊಂಡಿದೆ. ಸಹಾಯಕ್ಕಾಗಿ ಯಾರನ್ನಾದರೂ ಕಳುಹಿಸು, ನೀರು ತುಂಬಿಕೊಳ್ಳುತ್ತಾ ಕಾರಿನ ಟೈರ್​ಗಳು ಮೇಲೆ ಬರುತ್ತಿದೆ ಎಂದು ಆತಂಕದ ಧ್ವನಿಯಲ್ಲಿ ಸ್ನೇಹಿತನ ಬಳಿ ಮಾತನಾಡಿದ್ದಾರೆ.

    ಇದನ್ನೂ ಓದಿ: ಲಾಕ್​ಡೌನ್ ಅವಧಿಯಲ್ಲಿ ಕೆಲಸ ಕಳ್ಕೊಂಡಿದ್ದೀರಾ? ಶೇಕಡ 50ರಷ್ಟು ವೇತನ ಕ್ಲೇಮ್ ಮಾಡಿ..

    ವೆಂಕಟೇಶ್​ ಧ್ವನಿ ಕೇಳಿದ ಆತನ ಸ್ನೇಹಿತ ಭಯದಿಂದಲೇ ಹೇಗಾದರೂ ಮಾಡಿ ಪಕ್ಕದಲ್ಲಿ ಇರುವ ಕಾಂಪೌಂಡ್​ ಗೋಡೆ ಅಥವಾ ಮರವನ್ನು ಏರು ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಮರು ಮಾತನಾಡಿದ ವೆಂಕಟೇಶ್​, ಹೌದು ನಾನು ಕಾಂಪೌಂಡ್​ ನೋಡಿದೆ. ಒಂದು ವೇಳೆ ನಾನೇನಾದರೂ ಕಾಂಪೌಂಡ್​ ಏರಲು ಕಾರಿನಿಂದ ಹೊರಬಂದರೆ ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋಗುವುದು ಖಂಡಿತ. ಕಾರನ್ನು ಹಿಡಿದಿಟ್ಟುಕೊಂಡಿದ್ದ ಮರವೂ ಸಹ ಈಗ ಪ್ರವಾಹಕ್ಕೆ ಕೊಚ್ಚಿಹೋಗಿದೆ. ಇದೀಗ ತಾನೇ ಕಾರು ಸಹ ನೀರಿನಲ್ಲಿ ಮುಳುಗಲು ಆರಂಭಿಸಿದೆ ಎನ್ನುತ್ತಾರೆ.

    ಧೈರ್ಯವಾಗಿರೂ. ಏನು ಆಗುವುದಿಲ್ಲ ಎಂದು ಸ್ನೇಹಿತನಿಗೆ ಧೈರ್ಯ ತುಂಬುವ ಹೊತ್ತಿಗೆ ಆ ಕಡೆ ಸ್ನೇಹಿತನ ಕಾರು ನೀರಿನಲ್ಲಿ ಕೊಚ್ಚಿ ಹೋಗಿತ್ತು. ಸುಮಾರು 1 ನಿಮಿಷ 44 ಸೆಕೆಂಡ್​ ಫೋನ್​ ಸಂಭಾಷಣೆ ಕೊನೆಯಾಗುವುದರ ಜತೆಗೆ ಸ್ನೇಹಿತನ ಜೀವವೂ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಇದನ್ನು ಕೇಳಿದ ಸ್ನೇಹಿತನ ಮುಖದಲ್ಲಿ ಹತಾಶೆಯ ಭಾವ ಕಾಡತೊಡಗಿತು. ಇತ್ತ ವೆಂಕಟೇಶ್​ ಶವ ಗುರುವಾರ ಪತ್ತೆಯಾಯಿತು.

    ಇನ್ನು ಹೈದರಾಬಾದಿನಲ್ಲಿ ವರುಣನ ಅಬ್ಬರಕ್ಕೆ ಎರಡು ತಿಂಗಳು ಮಗು ಸೇರಿದಂತೆ 31 ಮಂದಿ ಮೃತಪಟ್ಟಿದ್ದಾರೆ. ತೆಲಂಗಾಣ ರಾಜ್ಯಾದ್ಯಂತ ಒಟ್ಟು 50 ಮಂದಿ ಪ್ರವಾಹದಿಂದ ಸಂಭವಿಸಿದ ಅನಾಹುತಗಳಿಂದ ಜೀವ ಕಳೆದುಕೊಂಡಿದ್ದಾರೆ.

    ಇತ್ತೀಚೆಗೆ ರಸ್ತೆಯಲ್ಲಿ ಉಂಟಾದ ಪ್ರವಾಹದ ನೀರಿನಲ್ಲಿ ವ್ಯಕ್ತಿಯೊಬ್ಬ ಕೊಚ್ಚಿ ಹೋದ ಭಯಾನಕ ದೃಶ್ಯ ಹೈದರಾಬಾದ್​ನ ಬರ್ಕಾಸ್​ ಏರಿಯಾದಲ್ಲಿ ಕಂಡುಬಂತು. ರಸ್ತೆ ಪಕ್ಕದಲ್ಲೇ ಇಬ್ಬರು ವ್ಯಕ್ತಿಗಳು ಆಶ್ರಯ ಪಡೆದುಕೊಂಡಿದ್ದರೂ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಉಳಿಸಲಾಗಸದೇ ಅಸಹಾಯಕತೆಯಿಂದ ನೋಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. (ಏಜೆನ್ಸೀಸ್​)

    ಅಮ್ಮನಿಗಾಗಿ ಕಣ್ಣೀರಿಟ್ಟ ಮಗಳು, ಕರಗಲೇ ಇಲ್ಲ ವಿಧಿಯ ಮನಸ್ಸು: ಚಿಕಿತ್ಸೆ ಫಲಿಸದೇ ಶಿಕ್ಷಕಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts