More

    ಪುಂಡಾಟಿಕೆ ತಡೆಗೆ ಸುಗ್ರೀವಾಜ್ಞೆ ಜಾರಿ: ರಾಜ್ಯಪಾಲರ ಅಂಕಿತ, ಆದೇಶ ಪ್ರಕಟ

    ಬೆಂಗಳೂರು: ರಾಜ್ಯದಲ್ಲಿ ಮಾರಕ ಸಾಂಕ್ರಾಮಿಕ ರೋಗಗಳ ನಿವಾರಣೆಗಾಗಿ ಸರ್ಕಾರದ ಕಾರ್ಯಾಚರಣೆಗಳಿಗೆ ಅಡ್ಡಿ, ಕರ್ತವ್ಯನಿರತ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ದೌರ್ಜನ್ಯ, ಹಲ್ಲೆ ಎಸಗುವವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸುವ ಕಾನೂನು ಸುಗ್ರೀವಾಜ್ಞೆಯ ಮೂಲಕ ಜಾರಿಯಾಗಿದೆ.

    ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಗೆ ಸಂಬಂಧಿಸಿದ ಈ ಕಾನೂನಿಗೆ ‘ಕರ್ನಾಟಕ ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳ ಅಧ್ಯಾದೇಶ, 2020’ ಎಂದು ಕರೆಯಲಾಗಿದೆ. ಕರೊನಾ ಯೋಧರ ಮೇಲೆ ಹಲ್ಲೆ ಪುನರಾವರ್ತನೆ ಹಾಗೂ ಪಾದರಾಯನಪುರದಲ್ಲಿ ನಡೆದ ದಾಂಧಲೆ ಬಳಿಕ ಶೀಘ್ರ ಮತ್ತು ಕಠಿಣ ಕ್ರಮದ ಕಾನೂನು ಅಗತ್ಯತೆ ಮನಗಂಡು ಕೇರಳ ಹಾಗೂ ಉತ್ತರ ಪ್ರದೇಶ ಮಾದರಿಯಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಸಚಿವ ಸಂಪುಟದ ಸಭೆಯಲ್ಲಿ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ತಡೆಗಟ್ಟುವಿಕೆಗೆ ಸಂಬಂಧಿಸಿದ ಕಾನೂನುಗಳನ್ನು ಏಕೀಕರಿಸಿ, ಕ್ರೋಡೀಕರಿಸಲು ಉದ್ದೇಶಿಸಿ ಸರ್ಕಾರ ಸಲ್ಲಿಸಿದ್ದ ಅಧ್ಯಾದೇಶಕ್ಕೆ ರಾಜ್ಯಪಾಲರು ಬುಧವಾರ ಅಂಕಿತ ಹಾಕಿದ್ದಾರೆ.

    ಸುಗ್ರೀವಾಜ್ಞೆಯಲ್ಲಿ ಏನೇನಿದೆ?

    ನಿರ್ಬಂಧ ಉಲ್ಲಂಘನೆ ಹಾಗೂ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡಚಣೆ ಉಂಟುಮಾಡಿದವರಿಗೆ 3 ವರ್ಷ ಶಿಕ್ಷೆ, 50,000 ರೂ. ದಂಡ.

    ಅಪರಾಧ ಕೃತ್ಯಕ್ಕೆ ಪ್ರಚೋದನೆ ಹಾಗೂ ಕುಮ್ಮಕ್ಕು ನೀಡಿದವರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ.

    ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿ ನಷ್ಟ ಹಾಗೂ ಹಾನಿ ಉಂಟು ಮಾಡಿದವರಿಗೆ 3 ವರ್ಷ ಶಿಕ್ಷೆ ಹಾಗೂ 50,000 ರೂ. ದಂಡ

    ಜಿಲ್ಲಾಧಿಕಾರಿಗೆ ಸಾರ್ವಜನಿಕ, ಖಾಸಗಿ ಆಸ್ತಿಪಾಸ್ತಿ ನಷ್ಟ ಹಾಗೂ ಹಾನಿ ಪ್ರಕರಣ ವಿಚಾರಣೆ ಅಧಿಕಾರ. ನಷ್ಟದ ದುಪ್ಪಟ್ಟು ವಿಧಿಸುವ ಜವಾಬ್ದಾರಿಯಿದೆ. ಆದರೆ, ಅಪರಾಧಿಗೆ ಅಹವಾಲು ಸಲ್ಲಿಕೆ ಅವಕಾಶ. ಆದೇಶ ಹೊರಡಿಸಿದ 30 ದಿನಗಳೊಳಗೆ ಪ್ರಾದೇಶಿಕ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಬಹುದು.

    ನಿರ್ಲಕ್ಷ್ಯದಿಂದ ಅಪರಾಧ ಸಂಭವಿಸಿದರೆ ಜವಾಬ್ದಾರಿಯುತ ಸಂಸ್ಥೆಯ ವ್ಯವಸ್ಥಾಪಕ, ಕಾರ್ಯದರ್ಶಿ ಇತರೆ ಅಧಿಕಾರಿಗೆ ಶಿಕ್ಷೆ.

    ಅಪರಾಧದಲ್ಲಿ ಕಂಪನಿ/ ಸಂಸ್ಥೆಭಾಗಿಯಾಗಿದ್ದರೆ ಶಿಕ್ಷೆ. ಅಪರಾಧಿ ಯಲ್ಲವೆಂದು ಸಾಬೀತುಪಡಿಸಿದರೆ ದೋಷ ಮುಕ್ತ.

    ರಾಜ್ಯದಲ್ಲಿ ವಾಯು, ರಸ್ತೆ, ರೈಲು, ಸಮುದ್ರ ಸೇರಿದಂತೆ ಯಾವುದೇ ಮಾರ್ಗಗಳ ಮೂಲಕ ಬಂದ ವ್ಯಕ್ತಿಗೆ ಪರೀಕ್ಷೆ, ಸೋಂಕು ಶಂಕಿತರಿಗೆ ಆಸ್ಪತ್ರೆ, ತಾತ್ಕಾಲಿಕ ತಂಗುದಾಣ ಇಲ್ಲವೆ ಮನೆಯಲ್ಲಿ ಪ್ರತ್ಯೇಕವಾಗಿಡುವುದು (ಕ್ವಾರಂಟೈನ್).

    ರಾಜಕೀಯ, ಸಾಮಾಜಿಕ ಕ್ರೀಡೆಗಳು, ಸಾಂಸ್ಕೃತಿಕ, ಧಾರ್ವಿುಕ ಸಮಾರಂಭಗಳು, ಜಾತ್ರೆ, ಉತ್ಸವ ಹಾಗೂ ಜನ ಗುಂಪುಗೂಡುವುದಕ್ಕೆ ನಿಷೇಧ.

    ಅಗತ್ಯ ಮತ್ತು ತುರ್ತು ಸೇವೆಗಳಾದ ಬ್ಯಾಂಕ್, ಮಾಧ್ಯಮ, ಆರೋಗ್ಯ ರಕ್ಷಣೆ, ಆಹಾರ ಸರಬರಾಜು, ನೀರು, ವಿದ್ಯುತ್, ಇಂಧನ ಇತ್ಯಾದಿಗಳ ಸೇವೆ ನೀಡಿಕೆ ಅವಧಿಯನ್ನು ಸರ್ಕಾರ ಅಗತ್ಯವೆಂದು ಮನಗಂಡಲ್ಲಿ ನಿರ್ಬಂಧಿಸಬಹುದು.

    ಲಾಕ್​ಡೌನ್​ನಿಂದ ಮನೆ ಸೇರಿರುವವರನ್ನು ರಂಜಿಸಲು ಫ್ಲೋರಿಡಾದ ಮಹಿಳೆ ಮಾಡಿದ್ದು ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts