More

    ಕೇಪ್‌ಟೌನ್ ಟೆಸ್ಟ್‌ನಲ್ಲೂ ವೈಫಲ್ಯ, ಪೂಜಾರ-ರಹಾನೆ ಇನ್ನು ಪುರಾನೆ?

    ಕೇಪ್‌ಟೌನ್: ಅನುಭವಿ ಟೆಸ್ಟ್ ತಜ್ಞ ಬ್ಯಾಟರ್‌ಗಳಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಕೇಪ್‌ಟೌನ್ ಟೆಸ್ಟ್‌ನಲ್ಲಿ ಮತ್ತೊಮ್ಮೆ ವೈಫಲ್ಯ ಕಾಣುವುದರೊಂದಿಗೆ ಅವರಿಗೆ ಇನ್ನು ಟೀಮ್ ಇಂಡಿಯಾದ ಬಾಗಿಲು ಮುಚ್ಚಿಹೋಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಇಬ್ಬರ ಹೆಸರನ್ನು ಸೇರಿಸಿ ‘ಪುರಾನೆ’ (ಹಳೆಯ) ಎಂಬ ಹ್ಯಾಷ್‌ಟ್ಯಾಗ್ ಕೂಡ ಟ್ರೆಂಡಿಂಗ್ ಮಾಡಿದ್ದಾರೆ.

    ಪೂಜಾರ-ರಹಾನೆ ದಕ್ಷಿಣ ಆಫ್ರಿಕಾದ ಸರಣಿಯಲ್ಲಿ ಆಡಿದ 6 ಇನಿಂಗ್ಸ್‌ಗಳ ಪೈಕಿ ಒಂದರಲ್ಲಿ ಮಾತ್ರ ಅರ್ಧಶತಕ ಬಾರಿಸಿದ್ದಾರೆ. 33 ವರ್ಷದ ರಹಾನೆ 22.66ರ ಸರಾಸರಿಯಲ್ಲಿ ಕೇವಲ 124 ಮತ್ತು 33 ವರ್ಷದ ಪೂಜಾರ 20.66ರ ಸರಾಸರಿಯಲ್ಲಿ 124 ರನ್ ಗಳಿಸಿದ್ದಾರೆ. ಇದರಿಂದಾಗಿ ಮುಂಬರುವ ತವರಿನ ಟೆಸ್ಟ್ ಸರಣಿಯಲ್ಲಿ ಶ್ರೇಯಸ್ ಅಯ್ಯರ್, ಹನುಮ ವಿಹಾರಿಗೆ ಅವಕಾಶ ಒಲಿಯಬಹುದು ಎನ್ನಲಾಗಿದೆ.

    ಕಳೆದ ಡಬ್ಲ್ಯುಟಿಸಿ ಫೈನಲ್, ಇಂಗ್ಲೆಂಡ್-ನ್ಯೂಜಿಲೆಂಡ್ ವಿರುದ್ಧದ ಸರಣಿಗಳಲ್ಲೂ ಪೂಜಾರ-ರಹಾನೆ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಯುವ ಆಟಗಾರರು ಅವಕಾಶಗಳಿಗಾಗಿ ಕಾದು ಕುಳಿತಿರುವಾಗ ‘ಪುರಾನೆ’ ಜೋಡಿಯನ್ನು ಮತ್ತೆ ಮತ್ತೆ ಆಡಿಸುವುದು ಎಷ್ಟು ಸರಿ ಎಂಬ ವಾದ ಕೇಳಿಬಂದಿದೆ.

    ಕೇಪ್‌ಟೌನ್ ಟೆಸ್ಟ್ ಪೂಜಾರ ಪಾಲಿಗೆ 95ನೇ ಟೆಸ್ಟ್ ಪಂದ್ಯವಾಗಿದ್ದರೆ, ರಹಾನೆಗೆ 82ನೇ ಟೆಸ್ಟ್ ಪಂದ್ಯವಾಗಿದೆ. ಕಳೆದೊಂದು ದಶಕದಿಂದ ಇವರಿಬ್ಬರೂ ತಂಡದ ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿದ್ದರು. ಆದರೆ ಸತತವಾಗಿ ದೊಡ್ಡ ಇನಿಂಗ್ಸ್ ಆಡಲು ಎಡವುತ್ತಿರುವುದರಿಂದ ಕೇಪ್‌ಟೌನ್ ಪಂದ್ಯವೇ ಇವರಿಬ್ಬರಿಗೆ ಟೀಮ್ ಇಂಡಿಯಾ ಪರ ಕೊನೇ ಟೆಸ್ಟ್ ಪಂದ್ಯವಾಗಲಿದೆ ಎನ್ನಲಾಗಿದೆ. ಆದರೆ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ, ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರ ನಿಲುವುಗಳು ಇವರಿಬ್ಬರ ವೃತ್ತಿಜೀವನದ ಮುಂದಿನ ಹಾದಿಯ ಬಗ್ಗೆ ನಿರ್ಣಾಯಕ ಪಾತ್ರ ವಹಿಸಲಿದೆ.

    ಐಪಿಎಲ್ ಹೊಸ ತಂಡಗಳಿಗೆ ಹರಾಜಿಗೆ ಮುನ್ನವೇ 3 ಆಟಗಾರರು; ರಾಹುಲ್, ಹಾರ್ದಿಕ್‌ಗೆ ಸಾರಥ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts