More

    ಇಪಿಎಫ್​ ಬಗ್ಗೆ ಚಿಂತೆ ಬೇಡ, ಇನ್ನೂ 3ತಿಂಗಳು ಕೇಂದ್ರವೇ ಪಾವತಿಸುತ್ತದೆ: ನಿರ್ಮಲಾ ಸೀತಾರಾಮನ್​

    ನವದೆಹಲಿ: ಕೆಲವು ಉದ್ಯಮಗಳು ಕೊವಿಡ್​-19ರಿಂದ ತೀವ್ರ ಹೊಡೆತಕ್ಕೆ ಒಳಗಾಗಿವೆ. ಕೊವಿಡ್​ ಮುಗಿದ ಬಳಿಕವೂ ಅವು ಆರ್ಥಿಕವಾಗಿ ಸಹಜ ಸ್ಥಿತಿಗೆ ಬರಲು ಕೆಲ ಸಮಯ ಬೇಕಾಗುತ್ತದೆ. ಹಾಗಾಗಿ ಅಂಥ ಇಪಿಎಫ್​ ಸಂಸ್ಥೆಗಳಿಗೆ ಇನ್ನೂ ಮೂರು ತಿಂಗಳು ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದರು.

    ಇದನ್ನೂ ಓದಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಉತ್ತೇಜನಕ್ಕೆಆರ್ಥಿಕ​ ಪ್ಯಾಕೇಜ್​​ ಮೂಲಕ 6 ಹೊಸ ಕ್ರಮಗಳು: ನಿರ್ಮಲಾ ಸೀತಾರಾಮನ್​

    ಉದ್ಯಮ ಮತ್ತು ಉದ್ಯೋಗಿಗಳಿಗೆ ಇಪಿಎಫ್​ ಸಹಕಾರವನ್ನು ಇನ್ನೂ ಮೂರು ತಿಂಗಳು ಅಂದರೆ ಜೂನ್​, ಜುಲೈ, ಆಗಸ್ಟ್​ಗೆ ವಿಸ್ತರಿಸಿಲು ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್​​ನಲ್ಲಿ 2500 ಕೋಟಿ ರೂಪಾಯಿ ಮೀಸಲಿಟ್ಟಿದೆ. ಇದರಿಂದಾಗಿ 3.67 ಲಕ್ಷ ಸಂಸ್ಥೆಗಳ 72.22 ಲಕ್ಷ ನೌಕರರು ಅನುಕೂಲ ಪಡೆಯಲಿದ್ದಾರೆ ಎಂದು ನಿರ್ಮಲಾ ಸೀತಾರಾಮನ್​ ಹೇಳಿದರು.

    ಕೊವಿಡ್​-19ರಿಂದ ನಷ್ಟದಲ್ಲಿರುವ ಇಪಿಎಫ್ ಸಂಸ್ಥೆಗಳು ಹಾಗೂ ಅವುಗಳ ನೌಕರರಿಗೆ ಅನುಕೂಲವಾಗುವಂತೆ ನೌಕರರ ಸಂಪೂರ್ಣ ಭವಿಷ್ಯ ನಿಧಿ (ಇಪಿಎಫ್​)ಯ ಪಾವತಿ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ಹೊತ್ತಿತ್ತು. ಉದ್ಯೋಗದಾತ ಸಂಸ್ಥೆಗಳು ನೀಡುವ ಶೇ.12 ಮತ್ತು ನೌಕರರು ಪಾವತಿಸುವ ಶೇ. 12 ಸೇರಿ ಒಟ್ಟು ಶೇ.24 ಪಿಎಫ್​ನ್ನು ಮಾರ್ಚ್​, ಏಪ್ರಿಲ್​ ಹಾಗೂ ಮೇ ತಿಂಗಳಿಗೆ ಅನ್ವಯವಾಗುವಂತೆ ಸಂಪೂರ್ಣ ಪಾವತಿ ಮಾಡುವುದಾಗಿ ಈ ಹಿಂದೆ ನಿರ್ಮಲಾ ಸೀತಾರಾಮನ್​ ಹೇಳಿದ್ದರು. ಇದೀಗ ಈ ಪಾವತಿಯ ಕ್ರಮ ಮುಂದಿನ ಜೂನ್​, ಜುಲೈ ಮತ್ತು ಅಗಸ್ಟ್​ ತಿಂಗಳುಗಳಿಗೂ ಅನ್ವಯ ಆಗಲಿದೆ ಎಂದು ಇಂದು ತಿಳಿಸಿದ್ದಾರೆ.

    ಇದನ್ನೂ ಓದಿ: 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಪರಿಣಾಮ ಸೆನ್ಸೆಕ್ಸ್ 1,400 ಅಂಶ ಏರಿಕೆ

    ಹಾಗೇ ಈಗಿನ ಪರಿಸ್ಥಿತಿಯಲ್ಲಿ ನೌಕರರ ಕೈಯಲ್ಲಿ ಹಣ ಇರುವುದು ಮುಖ್ಯ. ಅದಕ್ಕಾಗಿ ಉದ್ಯೋಗದಾತರು ಮತ್ತು ನೌಕರರ ಶಾಸನಬದ್ಧ ಪಿಎಫ್​ ಕೊಡುಗೆಯನ್ನು ಶೇ.12ರಿಂದ ಶೇ.10ಕ್ಕೆ ಇಳಿಸಲಾಗಿದೆ. ಮುಂದಿನ ಮೂರು ತಿಂಗಳವರೆಗೆ ಇದು ಅನ್ವಯ ಆಗಲಿದೆ. ಇದರಿಂದ ಟೇಕ್​ ಹೋಂ ಸ್ಯಾಲರಿ ಪ್ರಮಾಣ ಹೆಚ್ಚುತ್ತದೆ ಮತ್ತು ದ್ರವ್ಯತೆ ಏರುತ್ತದೆ. ಇದಕ್ಕಾಗಿ ಪ್ಯಾಕೇಜ್​ನಲ್ಲಿ 6750 ಕೋಟಿ ರೂ.ಮೀಸಲಿಡಲಾಗಿದೆ ಎಂದು ತಿಳಿಸಿದರು.
    ಆದರೆ ಕೇಂದ್ರದ ಮತ್ತು ರಾಜ್ಯದ ಸಾರ್ವಜನಿಕ ವಲಯದ ಉದ್ಯಮಗಳಿಗೆ ಇದು ಅನ್ವಯ ಆಗುವುದಿಲ್ಲ. ಅಲ್ಲಿ ಶೇ. 12ರಷ್ಟೇ ಕೊಡುಗೆ ನೀಡಬೇಕು ಎಂದು ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts