More

    ಇನ್ನು ತುರ್ತು ಸೇವೆಗೆ 112ಗೆ ಕರೆ ಮಾಡಿ

    ಮಂಗಳೂರು: ‘ಒಂದು ಭಾರತ, ಒಂದು ತುರ್ತು ಕರೆ ಸಂಖ್ಯೆ’ ಪರಿಕಲ್ಪನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ 112 ಸಹಾಯವಾಣಿ ವಾರದೊಳಗೆ ಆರಂಭಗೊಳ್ಳಲಿದೆ.

    112 ಸಂಖ್ಯೆಗೆ ಕರೆ ಮಾಡಿದರೆ ನೇರವಾಗಿ ಜಿಲ್ಲಾ ಸಮನ್ವಯ ಕೇಂದ್ರದೊಂದಿಗೆ ಸಂಪರ್ಕಿಸಲಾಗುತ್ತದೆ. ಆ ಮೂಲಕ ಅಗತ್ಯ ನೆರವು ನೀಡಲಾಗುತ್ತದೆ. ತುರ್ತು ಸಹಾಯವಾಣಿ ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಪೊಲೀಸ್, ಅಗ್ನಿಶಾಮಕ ದಳ, ಆರೋಗ್ಯ ಮುಂತಾದ ತುರ್ತು ಸೇವೆಗಳನ್ನು ಒಂದೇ ಕರೆಯಲ್ಲಿ ಪಡೆಯಬಹುದು.

    www.ka.ners.in ಜಾಲತಾಣ, [email protected] ಗೆ ಇ-ಮೇಲ್ ಅಥವಾ 112 ಇಂಡಿಯಾ ಮೊಬೈಲ್ ಆ್ಯಪ್ ಮೂಲಕವೂ ವಿನಂತಿ ಕಳುಹಿಸಬಹುದು. ಇದು 24*7 ನಾಗರಿಕರ ತುರ್ತು ಸೇವೆಯಾಗಿದ್ದು, ತಕ್ಷಣ ಸ್ಪಂದನೆ ಸಿಗಲಿದೆ.
    ಕರೆ ಮಾಡಿದವರು ಇರುವ ಸ್ಥಳದ ವಿವರಗಳನ್ನು ಸಂಗ್ರಹಿಸುವ ವ್ಯವಸ್ಥೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಮಾಡಲಾಗಿದೆ. ಹತ್ತಿರದ ತುರ್ತು ಸ್ಪಂದನ ವಾಹನ ಸುಲಭವಾಗಿ ತಕ್ಷಣ ಭೇಟಿ ನೀಡಲು ಇದು ಸಹಾಯಕ. ಮಹಿಳಾ, ಮಕ್ಕಳ, ಹಿರಿಯ ನಾಗರಿಕರ ಹಾಗೂ ಇನ್ನಿತರ ತುರ್ತು ಸಂದರ್ಭ ತಕ್ಷಣ ಸ್ಪಂದನೆಗೆ ಪೂರಕ.

    ಕರೆ ಮಾಡುವುದು ಹೇಗೆ?: ಸಾಮಾನ್ಯ ಫೋನ್‌ಗಳಲ್ಲಿ 112 ಡಯಲ್ ಮಾಡಬೇಕು. 5 ಅಥವಾ 9 ಬಟನ್‌ನನ್ನು ದೀರ್ಘವಾಗಿ ಒತ್ತಿದರೆ ಕರೆ ಸಕ್ರಿಯವಾಗುತ್ತದೆ. ಸ್ಮಾರ್ಟ್ ಫೋನ್‌ಲ್ಲಿ 112 ಸಂಖ್ಯೆಗೆ ಕರೆ ಮಾಡಬಹುದು ಅಥವಾ ಪವರ್ ಬಟನ್ ಮೂರು ಬಾರಿ ಒತ್ತಿದರೆ ತಕ್ಷಣ ಕರೆ ಸಕ್ರಿಯವಾಗುತ್ತದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 112 ಸಹಾಯವಾಣಿ ಮೂರ್ನಾಲ್ಕು ದಿನಗಳಲ್ಲಿ ಆರಂಭಗೊಳ್ಳಲಿದೆ. ಇದಕ್ಕೆ ಬೇಕಾದ ಪೂರಕ ಸಿದ್ಧತೆ ಮಾಡಿಕೊಳ್ಳಲಾಗಿದೆ. 10 ಪೊಲೀಸ್ ವಾಹನಗಳನ್ನು ಮೀಸಲಿರಿಸಲಾಗಿದೆ.
    – ಬಿ.ಎಂ.ಲಕ್ಷ್ಮೀ ಪ್ರಸಾದ್, ಎಸ್‌ಪಿ, ದ.ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts