ಯೂಕ್ರೇನ್​ನಲ್ಲಿ ಸಿಲುಕಿಕೊಂಡವರಿಗೆ ಮತ್ತೊಂದು ಆತಂಕ; ತಕ್ಷಣವೇ ಖಾರ್ಕಿವ್​ನಿಂದ ತೆರಳಲು ಸೂಚನೆ!

Khiv
ರಷ್ಯಾ ದಾಳಿ ಬಳಿಕ ಯೂಕ್ರೇನ್​ನ ಕೀವ್​ನಲ್ಲಿನ ದೃಶ್ಯ
Published on

ನವದೆಹಲಿ: ರಷ್ಯಾದ ದಾಳಿಯಿಂದಾಗಿ ತೀವ್ರ ಭಯದ ವಾತಾವರಣ ಇರುವ ಯೂಕ್ರೇನ್​ನಲ್ಲಿ ಸಿಲುಕಿಕೊಂಡಿರುವ ಹಲವರಿಗೆ ಇದೀಗ ಮತ್ತೊಂದು ಆತಂಕ ಎದುರಾಗಿದೆ. ಉಳಿಯಲು ಸರಿಯಾದ ಸ್ಥಳ, ತಿನ್ನಲು ಸೂಕ್ತ ಆಹಾರ ಸಿಗದೆ ಸಂಕಟ ಹಾಗೂ ಭೀತಿಯಲ್ಲೇ ಒಂದೊಂದು ಕ್ಷಣವನ್ನೂ ಕಳೆಯುತ್ತಿದ್ದ ಸಂತ್ರಸ್ತರು ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಕ್ಕಂತಾಗಿದೆ.

ಅದೇನೆಂದರೆ ಯೂಕ್ರೇನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿ ಸಿಲುಕಿರುವ ಭಾರತೀಯರಿಗೆ ಟ್ವೀಟ್ ಮೂಲಕ ತುರ್ತು ಸಂದೇಶವನ್ನು ರವಾನಿಸಿ, ಕೂಡಲೇ ಬೇರೆ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದೆ.

ಖಾರ್ಕಿವ್​ನಲ್ಲಿ ಇರುವವರು ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡಬೇಕು. ಖಾರ್ಕಿವ್​ನಲ್ಲಿ ಇರುವವರು ಪಿಸೊಚಿನ್, ಬೆಜ್ಲ್ಯೂಡೊವ್ಕ ಮತ್ತು ಬಬಯ್​ಗೆ ತಕ್ಷಣವೇ ಹೊರಟು ಯೂಕ್ರೇನಿಯನ್​ ಸಮಯ 18:00ರ ಒಳಗೆ ಸೇರಿಕೊಳ್ಳಬೇಕು ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net