More

    ಕಣ್ಮನ ಸೆಳೆಯುವ ಕಲಾಕೃತಿಗಳು: 11 ದಿನಗಳ ಮಹಿಳಾ ಕಲಾಪ್ರದರ್ಶನ ಉದ್ಘಾಟನೆ

    ಬೆಂಗಳೂರು: ಜ್ಞಾನಭಾರತಿಯ ಮಲ್ಲತ್ತಹಳ್ಳಿಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 11 ದಿನಗಳ ಮಹಿಳಾ ಕಲಾ ಪ್ರದರ್ಶನವನ್ನು ಅಂತಾರಾಷ್ಟ್ರೀಯ ಮಟ್ಟದ ಕಲಾ ಇತಿಹಾಸಕಾರರಾದ ಪ್ರೊ.ಚೂಡಾಮಣಿ ನಂದಗೋಪಾಲ್ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ (ಪ್ರಾದೇಶಿಕ ಕೇಂದ್ರ ಬೆಂಗಳೂರು)ದ ಸಲಹಾ ಸಮಿತಿ ಸದಸ್ಯೆ ಕಲಾವಿದೆ ಶುಭಾ ಅಮೃತ ಉದ್ಘಾಟಿಸಿದರು.

    ಇದನ್ನೂ ಓದಿ: ದೇವಸ್ಥಾನದ ರಥದ ಮುಕ್ತಿಬಾವುಟಕ್ಕೆ ಭಾರಿ ಬೇಡಿಕೆ; ಊಹೆಗೂ ಮೀರಿದ ಭರ್ಜರಿ ಮೊತ್ತಕ್ಕೆ ಹರಾಜು

    ಮಾ.19ರವರೆಗೆ ನಡೆಯಲಿರುವ ಈ ಕಲಾಪ್ರದರ್ಶನದಲ್ಲಿ ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆಗಳಿಂದ ಆಗಮಿಸಿರುವ 22 ಮಹಿಳಾ ಕಲಾವಿದರ ಕಲಾಕೃತಿಗಳು ಪ್ರದರ್ಶನ ಕಂಡಿದ್ದು, ಕಲಾ ರಸಿಕರ ಕಣ್ಮನ ಸೆಳೆದವು. 1970ರ ದಶಕದಲ್ಲಿ ಅನ್ವೇಷಣೆಗೊಂಡಿದ್ದ ದ್ವಿಲೋಹ ಶಿಲ್ಪ ಅರ್ಧನಾರೀಶ್ವರ ಹಾಗೂ ನಾಟ್ಯ ಸರಸ್ವತಿ ವಿಗ್ರಹಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಮರು ರಚನೆ ಮಾಡಲಾಗಿದೆ.

    ಇದನ್ನೂ ಓದಿ: ಬೆಂಗಳೂರು-ಮೈಸೂರು ದಶಪಥ: ನಾಳೆಯಿಂದಲೇ ಟೋಲ್ ಕಲೆಕ್ಷನ್; ಪೊಲೀಸ್ ಭದ್ರತೆಯಲ್ಲಿ ಹಣ ಸಂಗ್ರಹಕ್ಕೆ ಸಜ್ಜು

    ಆಧುನಿಕ ತಾಂತ್ರಿಕ ಯುಗದಲ್ಲಿ ಮರೆಯಾಗಿರುವ ಶಿಲ್ಪ ರಚನಾ ಕೌಶಲ್ಯ, ವಿಧಾನ, ಕಲೆಯ ಹಿಂದಿರುವ ಪರಿಶ್ರಮವನ್ನು ಬಿಂಬಿಸುವ ಸಂಕೇತವಾಗಿದೆ. ಶಿಲ್ಪಿ ಎನ್.ಪಿ.ಶ್ರೀನಿವಾಸಾಚಾರ್ಯರು ರಚಿಸಿದ್ದ ಕಲಾಕೃತಿ ಈಗ ಮತ್ತೆ ರಚಿತಗೊಳ್ಳುತ್ತಿದೆ. ಶಿಲ್ಪಿಗಳ ಕೈಯಲ್ಲಿ ಅರಳುತ್ತಿರುವ ಶಿಲ್ಪಗಳನ್ನು ನೋಡುವುದೇ ವಿಸ್ಮಯ. ಲೋಹಶಿಲ್ಪದ ಪ್ರತಿಯೊಂದು ಹಂತಗಳನ್ನು ತಿಳಿಯಲು ಇಚ್ಛಿಸುವವರು ಈ ಕಲಾ ಪ್ರದರ್ಶನಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಐಜಿಎನ್‌ಸಿಎ ಪ್ರಾದೇಶಿಕ ನಿರ್ದೇಶಕ ಡಿ.ಮಹೇಂದ್ರ, ಅಗ್ನಿಹೋತ್ರಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.

    ಕಣ್ಮನ ಸೆಳೆಯುವ ಕಲಾಕೃತಿಗಳು: 11 ದಿನಗಳ ಮಹಿಳಾ ಕಲಾಪ್ರದರ್ಶನ ಉದ್ಘಾಟನೆ
    ಕಣ್ಮನ ಸೆಳೆಯುವ ಕಲಾಕೃತಿಗಳು: 11 ದಿನಗಳ ಮಹಿಳಾ ಕಲಾಪ್ರದರ್ಶನ ಉದ್ಘಾಟನೆ
    ಕಣ್ಮನ ಸೆಳೆಯುವ ಕಲಾಕೃತಿಗಳು: 11 ದಿನಗಳ ಮಹಿಳಾ ಕಲಾಪ್ರದರ್ಶನ ಉದ್ಘಾಟನೆ
    ಕಣ್ಮನ ಸೆಳೆಯುವ ಕಲಾಕೃತಿಗಳು: 11 ದಿನಗಳ ಮಹಿಳಾ ಕಲಾಪ್ರದರ್ಶನ ಉದ್ಘಾಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts