ಬೆಂಗಳೂರು: ಆನೆಯೊಂದು ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಮೈಕಲ್ ವಾನ್ ಸೇರಿದಂತೆ ಹಲವು ಕ್ರಿಕೆಟಿಗರು ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಶೇರ್ ಮಾಡಿದ್ದಾರೆ. ಆನೆಯ ಬ್ಯಾಟಿಂಗ್ ಶೈಲಿಗೆ ಮನಸೋತಿದ್ದಾರೆ. ಇದರ ಬೆನ್ನ ಹಿಂದೆಯೇ ಹಲವು ಮಂದಿ ವಿಡಿಯೋ ಮುಂದಿಟ್ಟುಕೊಂಡು ಕ್ರಿಕೆಟಿಗರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಕೆಲ ಅಂತಾರಾಷ್ಟ್ರೀಯ ಆಟಗಾರರಿಗಿಂತ ಆನೆಯೇ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದೆ ಎಂದು ಕಾಲೆಳೆದಿದ್ದಾರೆ.
ಇದನ್ನೂ ಓದಿ: ಕುಡಿದು ಬಾರ್‌ನಲ್ಲಿ ಗಲಾಟೆ ಮಾಡಿಕೊಂಡ ಡೇವಿಡ್ ವಾರ್ನರ್ ಹಾಗೂ ಮೈಕೆಲ್ ಸ್ಲೇಟರ್..!,
ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಹಾಗೂ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಆನೆ ಬ್ಯಾಟಿಂಗ್ ಮಾಡುವ ಕುರಿತು ಫಿದಾ ಆಗಿದ್ದಾರೆ. ‘ಈ ಆನೆಗೆ ಇಂಗ್ಲೀಷ್ (ಇಂಗ್ಲೆಂಡ್) ಪಾಸ್‌ಪೋರ್ಟ್ ಇದೆ’ ಎಂದು ವಾನ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೆಲಮಂದಿ ಟಿ20 ಕ್ರಿಕೆಟ್ ವಿಶ್ವ ನಂ.1 ಆಟಗಾರ ಡೇವಿಡ್ ಮಲಾನ್‌ಗಿಂಥ ಚೆನ್ನಾಗಿ ಆಡುತ್ತಿದೆ. ಅವರ ಸ್ಥಾನಕ್ಕೆ ಈ ಆನೆಯೇ ಸರಿ ಎಂದಿದ್ದಾರೆ. ಎಂಥ ಕ್ಲಾಸಿಕ್ ಆಟ ಎಂದು ವೀರೇಂದ್ರ ಸೆಹ್ವಾಗ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಕೆಕೆಆರ್ ಸ್ಪಿನ್ನರ್ ಹರ್ಭಜನ್ ಸಿಂಗ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆನೆ ಬ್ಯಾಟಿಂಗ್ ಕುರಿತು ಪ್ರತಿಕ್ರಿಯಿಸಿದ್ದಾರೆ.
Have you seen an elephant playing cricket? Well he is better than many international players.
pic.twitter.com/WrJhnYTboW— Gannuprem (@Gannuuprem) May 8, 2021