More

    ಹೆದ್ದಾರಿ ಮಧ್ಯೆ ಒಂಟಿ ಸಲಗ; ಶಿರಾಡಿ ಘಾಟಿಯಲ್ಲಿ ಎಲಿಫೆಂಟ್ ಟ್ರಾಫಿಕ್, ಕಳೆದ ವಾರವಷ್ಟೇ ಲಾರಿ ಚಾಲಕನೊಬ್ಬನನ್ನು ತುಳಿದು ಕೊಂದಿದ್ದ ಕಾಡಾನೆ!

    ಸಕಲೇಶಪುರ: ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾ, ಸುದ್ದಿವಾಹಿನಿಗಳಲ್ಲಿ ರೀಲ್ ‘ಸಲಗ’ ಸದ್ದು ಮಾಡುತ್ತಿದ್ದರೆ, ಶಿರಾಡಿ ಘಾಟಿಯಲ್ಲಿ ಇದೀಗ ರಿಯಲ್​ ಸಲಗವೇ ಹೆದ್ದಾರಿ ಮಧ್ಯೆ ಕಾಣಿಸಿಕೊಂಡು, ಆತಂಕ ಹುಟ್ಟಿಸಿದೆ. ಸಕಲೇಶಪುರ ತಾಲೂಕಿನ ಶಿರಾಡಿ ಘಾಟ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಒಂಟಿ ಸಲಗವೊಂದು ಅರ್ಧ ಗಂಟೆ ಕಾಲ ರಸ್ತೆ ಸಂಚಾರ ತಡೆ ನಡೆಸಿದೆ!

    ಕಳೆದ ವಾರ ಲಾರಿ ಚಾಲಕನೊಬ್ಬನನ್ನು ತುಳಿದು ಕೊಂದಿದ್ದ ಕಾಡಾನೆ ಗುರುವಾರ ಪುನಃ ರಾಷ್ಟ್ರೀಯ ಹೆದ್ದಾರಿ ಮೇಲೆ ಪ್ರತ್ಯಕ್ಷಗೊಂಡು ಅರ್ಧ ಗಂಟೆ ಕಾಲ ವಾಹನ ಸಂಚಾರವನ್ನೇ ತಡೆ ಹಿಡಿಯಿತು. ಡಬಲ್ ಟರ್ನ್ ಬಳಿ ಕಾಡಿನೊಳಗೆ ಅಡ್ಡಾಡುತ್ತಿದ್ದ ಆನೆ ಸಂಜೆ 4 ಗಂಟೆ ವೇಳೆಯಲ್ಲಿ ರಸ್ತೆಯ ಮಧ್ಯದಲ್ಲಿಯೇ ಬಂದು ನಿಂತು ಬಿಟ್ಟಿತು.

    ಇದರಿಂದ ಬೆಚ್ಚಿದ ಚಾಲಕರು ದೂರದಲ್ಲಿಯೇ ತಮ್ಮ ವಾಹನಗಳನ್ನು ನಿಲ್ಲಿಸಿ ಆನೆಯ ಓಡಾಟ ಗಮನಿಸಲಾರಂಭಿಸಿದರು. ಇದರಿಂದ ಎರಡೂ ಬದಿಯಲ್ಲಿಯೂ ಸುಮಾರು 2 ಕಿಲೋಮೀಟರ್​ ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತವು. ಮೊಬೈಲ್​ಫೋನ್​ ನೆಟ್‌ವರ್ಕ್ ಕೂಡ ಇಲ್ಲದ್ದರಿಂದ ಹೊರಗಿನಿಂದ ಸಹಾಯವನ್ನೂ ಯಾಚಿಸಲು ಸಾಧ್ಯವಾಗದೆ ಜನರು ಆನೆಯ ಅಟಾಟೋಪ ವೀಕ್ಷಿಸಿದರು. ರಸ್ತೆಯಲ್ಲಿ ಅತ್ತಿಂದಿತ್ತ ಅಡ್ಡಾಡುತ್ತ ಕಾಲ ಕಳೆದ ಗಜರಾಜ, ಸುಮಾರು ಅರ್ಧ ಗಂಟೆ ನಂತರ ಕಾಡಿನೊಳಗೆ ನಡೆದು ಹೋದ. ನಂತರ ವಾಹನಗಳು ಸಂಚಾರ ಆರಂಭಿಸಿದವು.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಸೆಕ್ಸ್ ವಿಡಿಯೋ ಬಹಿರಂಗ: ಜಾರಕಿಹೊಳಿ ಪರ ವಾಲ್ಮೀಕಿ ಪೀಠದ ಸ್ವಾಮೀಜಿ ಬ್ಯಾಟಿಂಗ್!

    ಪ್ರೇಮಿಯ ಜತೆ ಮಗಳನ್ನು ನೋಡಿದ: ಆಕೆಯ ರುಂಡ ಕತ್ತರಿಸಿ ಎರಡು ಕಿ.ಮೀ ಹಿಡಿದು ನಡೆದ- ಬೆಚ್ಚಿಬಿದ್ದ ಜನತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts