More

    ಸೆಕ್ಸ್ ವಿಡಿಯೋ ಬಹಿರಂಗ: ಜಾರಕಿಹೊಳಿ ಪರ ವಾಲ್ಮೀಕಿ ಪೀಠದ ಸ್ವಾಮೀಜಿ ಬ್ಯಾಟಿಂಗ್!

    ಬೆಂಗಳೂರು: ಅಶ್ಲೀಲ ಸಿಡಿ ವಿಚಾರವಾಗಿ ರಾಜೀನಾಮೆ ನೀಡಿರುವ ರಮೇಶ್ ಜಾರಕಿಹೊಳಿ ಪರವಾಗಿ ದಾವಣಗೇರೆ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಬ್ಯಾಟಿಂಗ್ ಮಾಡಿದ್ದಾರೆ.

    ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸ್ವಾಮೀಜಿ, ‘ಕೂಡಲೇ ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ರಮೇಶ್ ಜಾರಕಿಹೊಳಿ ಯಾವುದೇ ತಪ್ಪು ಮಾಡದಿದ್ದರೂ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಆದರೆ, ಮುಖ್ಯಮಂತ್ರಿ ಅವರು ಇಷ್ಟು ಬೇಗ ಜಾರಕಿಹೊಳಿ ರಾಜೀನಾಮೆಯನ್ನು ಅಂಗೀಕರಿಸಬಾರದಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

    ‘ಈಗಿನ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ತುಂಬಾ ದೊಡ್ಡದಿದೆ. ಅವರನ್ನು ಸಂಪುಟದಲ್ಲಿ ಉಳಿಸಿಕೊಂಡೇ ಅಶ್ಲೀಲ ಸಿಡಿ ಬಹಿರಂಗವಾಗಿರುವುದರ ಬಗ್ಗೆ ಸೂಕ್ತ ತನಿಖೆ ನಡೆಸಬಹುದಿತ್ತು. ಅವರು ಯಾವುದೇ ತಪ್ಪು ಮಾಡಿಲ್ಲ ಎಂಬ ವಿಶ್ವಾಸ ನಮಗಿದೆ’ ಎಂದು ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ.

    ರಮೇಶ್​ ಜಾರಕಿಹೊಳಿ ಸೆಕ್ಸ್​ ಸಿಡಿ ಪ್ರಕರಣವನ್ನ ರಾಜಕೀಯ ಷಡ್ಯಂತ್ರ ಎಂದಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ನಾನು ಇದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಇಟ್ ಈಸ್ ವೆರಿ ಅನ್ ಫಾರ್ಚ್ಯುನೇಟ್. ಪ್ಲಾನ್ಡ್ ಎಫರ್ಟ್, ಇದೊಂದು ರಾಜಕೀಯದ ಷಡ್ಯಂತ್ರ. ಅವ್ರು ಸಂಪೂರ್ಣ‌ ನಿರ್ದೋಷಿ ಆಗಿ ಆಚೆ ಬರ್ತಾರೆ. ರಾಜಕಾರಣಿಗಳ ಬಗ್ಗೆ ಅಸಹ್ಯ ಹುಟ್ಟಿಸೋ ಸಂಚು ಅಡಗಿದೆ. ಇಂಥ ಕೃತ್ಯವನ್ನ ಬಲವಾಗಿ ಖಂಡಿಸ್ತೀನಿ. ನೈತಿಕವಾಗಿ ನಾನು ರಮೇಶ್ ಜಾರಕಿಹೊಳಿ ಪರ ಇದ್ದೀನಿ ಎಂದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಸುಧಾಕರ್​, ಎರಡು ದಿನಗಳಿಂದ ರಮೇಶ್​ ಜಾರಕಿಹೊಳಿ ಅವರನ್ನ ಸಂಪರ್ಕಿಸಲು ಟ್ರೈ ಮಾಡ್ದೆ, ಅವ್ರು ಸಿಕ್ಕಿಲ್ಲ. ಇದನ್ನ ಯಾರು ಮಾಡಿದ್ದಾರೆ ಅನ್ನೋದಕ್ಕಿಂತ ವ್ಯವಸ್ಥಿತ ಷಡ್ಯಂತ್ರ ಅನ್ನೋದು ಗೊತ್ತಾಗುತ್ತೆ. ಇದೊಂದು ವ್ಯವಸ್ಥಿತ ಪಿತೂರಿ. ಇದರಲ್ಲಿ ಯಾರು ಇದ್ದಾರೆ? ಏಕೆ ಮಾಡಲಾಗಿದೆ ಎಂಬುದು ಗೊತ್ತಾಗಬೇಕಿದೆ. ಇಂಥ ಷಡ್ಯಂತ್ರ ರಾಜಕೀಯವಾಗಿ ಒಳ್ಳೆಯದಲ್ಲ. ಇದೊಂದು ವ್ಯವಸ್ಥಿತ ಸಂಚು. ಪ್ರಜಾಫ್ರಭುತ್ವದ ಮೇಲೆ ನಂಬಿಕೆ ಹೋಗೋ ಕೆಲ್ಸ ಆಗ್ತಿದೆ. ಮುಂಬರುವ ದಿನಗಳಲ್ಲಿ ಇದು ಪ್ರಾರಂಭ ಆಗ್ತದೆ. ಎಲ್ಲರ ಮೇಲೂ ಪ್ರಯೋಗ ಮಾಡುವ ಅಸ್ತ್ರ ಆಗಲಿದೆ ಎನ್ನುವ ಮೂಲಕ ಹಲವು ಪ್ರಶ್ನೆಗಳನ್ನು ಸಚಿವರು ಹುಟ್ಟುಹಾಕಿದ್ದಾರೆ.

    ಜಾರಕಿಹೊಳಿ ಸೆಕ್ಸ್​ ಸಿಡಿ ಪ್ರಕರಣ: ಹಲವು ಅನುಮಾನ ಹುಟ್ಟಿಸಿದೆ ಡಾ.ಸುಧಾಕರ್​ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts