More

    ‘ಜೈ ಎಲೆಕ್ಷನ್ ಧನ್ ಧನಾ ಧನ್ …’; ‘ಪ್ರಜಾರಾಜ್ಯ’ಕ್ಕೆ ಭಟ್ಟರ ಸಾಹಿತ್ಯ, ಉಪ್ಪಿ ಹಾಡು …

    ಬೆಂಗಳೂರು: ಕಳೆದ ವಾರವಷ್ಟೇ ದೇವರಾಜ್​, ಸುಧಾರಾಣಿ ಮುಂತಾದವರು ಅಭಿನಯಿಸಿರುವ ‘ಪ್ರಜಾರಾಜ್ಯ’ ಚಿತ್ರದ ಟೀಸರ್​ ಬಿಡುಗಡೆಯಾಗಿತ್ತು. ಈಗ ಇದೇ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಈ ಹಾಡನ್ನು ಉಪೇಂದ್ರ ಬಿಡುಗಡೆ ಮಾಡಿದ್ದಾರೆ.

    ಇದನ್ನೂ ಓದಿ: ‘ಲಾಠಿ’ ಹಿಡಿದ ವಿಶಾಲ್​; ಬೆಂಗಳೂರಿನಲ್ಲಿ ಪ್ರಚಾರ …

    ವಿಶೇಷವೆಂದರೆ, ‘ಜೈ ಎಲೆಕ್ಷನ್ ಧನ್ ಧನಾ ಧನ್ …’ ಎಂದು ಸಾಗುವ ಈ ಹಾಡನ್ನು ಉಪೇಂದ್ರ ಬಿಡುಗಡೆ ಮಾಡಿರುವುದಷ್ಟೇ, ಆ ಹಾಡನ್ನೂ ಅವರೇ ಹಾಡಿದ್ದಾರೆ. ಈ ಹಾಡಿಗೆ ಯೋಗರಾಜ್​ ಭಟ್​ ಸಾಹಿತ್ಯ ಬರೆದರೆ, ವಿಜೇತ್​ ಮಂಜಯ್ಯ ಸಂಗೀತ ಸಂಯೋಜಿಸಿದ್ದಾರೆ. ಇನ್ನು, ಆನಂದ್​ ಆಡಿಯೂ ಮೂಲಕ ಈ ಹಾಡು ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ನಿರ್ಮಾಪಕ ವರದರಾಜು, ನಿರ್ದೇಶಕ ವಿಜಯ್ ಭಾರ್ಗವ್, ಸಂಗೀತ ನಿರ್ದೇಶಕ ವಿಜೇತ್ ಮಂಜಯ್ಯ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದಾರೆ.

    ಈ ಹಾಡನ್ನು ಕುರಿತು ಮಾತನಾಡಿರುವ ಉಪೇಂದ್ರ, ‘ಯೋಗರಾಜ್ ಭಟ್ ಹಾಡನ್ನು ತುಂಬಾ ಚೆನ್ನಾಗಿ ಬರೆದಿದ್ದಾರೆ. ಎಲೆಕ್ಷನ್ ಕುರಿತಾದ ಈ ಹಾಡು ಸೊಗಸಾಗಿದೆ. ನೀವು ನಿಮ್ಮ ಮತವನ್ನು ದೇಶ, ರಾಜ್ಯಕ್ಕಾಗಿ ಎನ್ನುವುದಕ್ಕಿಂತ, ನನ್ನ ಮನೆ, ನನ್ನ ಮಕ್ಕಳು ಹಾಗೂ ನನ್ನ ಜೀವನಕ್ಕೆ ಬಹಳ ಮುಖ್ಯ ಎಂದು ಎಲ್ಲರೂ ಮತದಾನ ಮಾಡಿ’ ಎಂದು ಉಪೇಂದ್ರ ಹೇಳಿದ್ದಾರೆ.

    ಇದನ್ನೂ ಓದಿ: ಪ್ರಭಾಸ್​ ಮದುವೆ ಯಾವಾಗ? ಕೊನೆಗೂ ಬಾಯಿಬಿಟ್ಟರು ‘ಡಾರ್ಲಿಂಗ್​’

    ಪ್ರಜಾಪ್ರಭುತ್ವದ ಮಹತ್ವ ಸಾರಲಿರುವ ಈ ಚಿತ್ರವನ್ನು ವೃತ್ತಿಯಲ್ಲಿ ವೈದ್ಯರಾಗಿರುವ ವರದರಾಜು ಡಿ.ಎನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡಿರುವ ‘ಪ್ರಜಾರಾಜ್ಯ’ ಚಿತ್ರದಲ್ಲಿ ದೇವರಾಜ್, ನಾಗಾಭರಣ, ಅಚ್ಯುತ್​ ಕುಮಾರ್, ಸುಧಾರಾಣಿ, ಶೋಭರಾಜ್, ವಿಜಯ್ ಭಾರ್ಗವ, ದಿವ್ಯ ಗೌಡ, ತಬಲ ನಾಣಿ, ಸುಧಾ ಬೆಳವಾಡಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

    ಅಭಿಮಾನಿಗಳ ಅತಿರೇಕ: ಎಲ್ಲ ಫ್ಯಾನ್ಸ್​​ಗೆ ನಟಿ ರಮ್ಯಾ ಕಿವಿಮಾತು, ನಟರಿಗೆ ಸಲಹೆ; ಕೆಲ ಖಾತೆಗಳ ಬ್ಲಾಕ್​ ಮಾಡಲು ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts