More

    ಚುನಾವಣೆಯಲ್ಲಿ ಸ್ಪರ್ಧಿಸಲು ಕುಟುಂಬಗಳ ಒಳಗೆ ತೀವ್ರ ಪೈಪೋಟಿ!

    ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಒಂದೇ ಟಿಕೆಟ್​ಗಾಗಿ ಕುಟುಂಬ ಸದಸ್ಯರಲ್ಲಿಯೇ ಸ್ಪರ್ಧೆ ಉಂಟಾಗಿದೆ. ಅಣ್ಣ- ತಮ್ಮ, ಸೊಸೆ-ಮಾವ, ತಂದೆ-ಮಗ ಹೀಗೆ ಹತ್ತಿರದ ಸಂಬಂಧಿಕರ ನಡುವೆಯೇ ಟಿಕೆಟ್​ಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ.

    ಒಂದೇ ಕುಟುಂಬದಲ್ಲಿ ಇಬ್ಬರೂ ಟಿಕೆಟ್ ಕೇಳಿರುವುದು ಆಯಾ ಪಕ್ಷದ ನಾಯಕರಿಗೂ ಇಕ್ಕಟ್ಟು ತಂದಿಟ್ಟಿದೆ. ಬೆಳಗಾವಿ ಜಿಲ್ಲೆಯ ಪ್ರಬಲ ರಾಜಕೀಯ ಕುಟುಂಬಗಳಲ್ಲಿಯೇ ಟಿಕೆಟ್​ಗಾಗಿ ಪೈಪೋಟಿ ನಡೆಯುತ್ತಿದೆ.

    ಹುಕ್ಕೇರಿಯಲ್ಲಿ ಕತ್ತಿ ಕುಟುಂಬದಲ್ಲಿ ಚಿಕ್ಕಪ್ಪ ಹಾಗೂ ಅಣ್ಣನ ಮಗನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು ಕತ್ತಿ ಕುಟುಂಬ ಬಿಟ್ಟು ಹೊರಗೆ ಟಿಕೆಟ್ ಹೋಗಬಾರದು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ದಿ.ಉಮೇಶ ಕತ್ತಿ ಮಗ ನಿಖಿಲ್ ಕತ್ತಿಗೆ ಕೊಡಿ ಇಲ್ಲಾ ನನಗೆ ಕೊಡಿ ಎಂದು ಉಮೇಶ್ ಕತ್ತಿ ಸಹೋದರ ರಮೇಶ ಕತ್ತಿ ಹೇಳುತ್ತಿದ್ದಾರೆ. ಅದರ ನಡುವೆಯೇ ಅಣ್ಣನ ಮಗನಿಗೆ ಟಿಕೆಟ್ ನೀಡಿದರೆ ರಮೇಶ್ ಕತ್ತಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ.

    ಇತ್ತ ಸವದತ್ತಿಯಲ್ಲಿ ದಿ. ಆನಂದ ಮಾಮನಿ ಕುಟುಂಬದಲ್ಲಿ ದಿ.ಮಾಮನಿ ಪತ್ನಿ ಹಾಗೂ ಮಾಮನಿ ಸಹೋದರ ನಡುವೆ ಟಿಕೆಟ್ ಪೈಪೋಟೊ ನಡೆಯುತ್ತಿದೆ. ರಾಮದುರ್ಗದಲ್ಲಿ ಯಾದವಾಡ ಕುಟುಂಬದಲ್ಲಿ ಅಣ್ಣ- ತಮ್ಮನ ನಡುವೆ ಟಿಕೆಟ್​ಪೈಪೋಟಿನಡೆಯುತ್ತಿದೆ.

    ಕುಟುಂಬದಲ್ಲಿಯೇ ಟಿಕೆಟ್​ ಪೈಪೋಟಿ


    1) ರಾಮದುರ್ಗ ವಿಧಾನಸಭಾ ಕ್ಷೇತ್ರ
    ಬಿಜೆಪಿ ಟಿಕೆಟ್​ಗಾಗಿ ಅಣ್ಣ- ತಮ್ಮನ ನಡುವೆ .
    ಅಣ್ಣ- ಮಹಾದೇವಪ್ಪ ಯಾದವಾಡ
    ತಮ್ಮ – ಮಲ್ಲಣ್ಣ ಯಾದವಾಡ

    2) ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರ
    ಬಿಜೆಪಿ ಟಿಕೇಟ್ ಗಾಗಿ ಮಾವ- ಸೊಸೆ ನಡುವೆ ಪೈಪೋಟಿ
    ಮಾಮನಿ ಪತ್ನಿ- ರತ್ನಾ ಆನಂದ ಮಾಮನಿ.
    ಆನಂದ ಮಾಮನಿ ಸಹೋದರ
    ವೀರೂಪಾಕ್ಷ ಮಾಮನಿ ಟಿಕೆಟ್​ಗಾಗಿ ಪೈಪೋಟಿ..

    3) ಹುಕ್ಕೇರಿ ವಿಧಾನಸಭಾ ಕ್ಷೇತ್ರ
    ಬಿಜೆಪಿ ಟಿಕೇಟ್ ಗಾಗಿ ಚಿಕ್ಕಪ್ಪ- ಮಗನ ನಡುವೆ ಸ್ಪರ್ಧೆ
    ಚಿಕ್ಕಪ್ಪ- ರಮೇಶ್ ಕತ್ತಿ
    ಮಗ- ನಿಖಿಲ್ ಕತ್ತಿ

    4) ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರ
    ಕಾಂಗ್ರೆಸ್ ಟಿಕೇಟ್ ಗಾಗಿ ಅಣ್ಣ ತಮ್ಮನ ನಡುವೆ ಟಿಕೆಟ್ ಸ್ಪರ್ಧೆ
    ಅಣ್ಣ- ಫೀರೋಜ್ ಶೇಠ್
    ತಮ್ಮ – ರಾಜು ಶೇಠ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts