More

    VIDEO| ಫುಟ್​ಪಾತ್​ ಮೇಲೆ ಬರ್ತಿರಾ ಬನ್ನಿ ನೋಡ್ತೀನಿ: ಬೈಕ್​​ ಸವಾರರಿಗೆ ಹಿರಿಯ ಮಹಿಳೆಯ ಓಪನ್​ ಛಾಲೆಂಜ್​

    ಪುಣೆ: ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿಕೊಳ್ಳುವ ಕೆಲ ಬೈಕ್​ ಸವಾರರು ಇತ್ತೀಚೆಗೆ ಅದರಿಂದ ಬಚಾವಾಗಲು ರಸ್ತೆ ಬದಿಯಲ್ಲಿ ಪಾದಾಚಾರಿಗಳಿಗಾಗಿ ಮಾಡಿರುವ ಫುಟ್​ಪಾತ್​ ಅನ್ನು ಆಶ್ರಯಿಸಿಕೊಂಡು ನಿಯಮ ಉಲ್ಲಂಘನೆ ಮಾಡುವುದು ಸಾಮಾನ್ಯವಾಗಿದೆ. ಇದರಿಂದ ಪಾದಾಚಾರಿಗಳಿಗೆ ಎಷ್ಟು ತೊಂದರೆಯಾಗುತ್ತದೆ ಎಂಬ ಸಾಮಾನ್ಯ ಅರಿವು ಕೂಡ ಕೆಲ ಬೈಕ್​ ಸವಾರರಿಗೆ ಇರುವುದಿಲ್ಲ. ಇದರಿಂದ ರೋಸಿಹೋದ ಹಿರಿಯ ಮಹಿಳೆಯೊಬ್ಬರು ಅಂತಹ ಸವಾರರಿಗೆ ಕ್ಲಾಸ್​ ತೆಗೆದುಕೊಂಡ ವಿಶೇಷ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ಸೀರೆಯನ್ನು ಎತ್ತಿ ಕಟ್ಟಿಕೊಂಡು ಫುಟ್​ಪಾತ್​ ಅಖಾಡಕ್ಕೆ ಇಳಿದು ಮಹಿಳೆ, ನಿಯಮ ಉಲ್ಲಂಘಿಸುವ ಬೈಕ್​ ಸವಾರರನ್ನು ತಡೆಗಟ್ಟಿ ತರಾಟೆಗೆ ತೆಗದುಕೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಪತ್ರಕರ್ತರೊಬ್ಬರು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ಫುಟ್​ಪಾತ್​​ ಮಧ್ಯೆ ನಿಂತಿರುವ ಮಹಿಳೆಯೊಬ್ಬರು ಫುಟ್​ಪಾತ್​ ಮೇಲೆ ಬೈಕ್​ ಚಲಾಯಿಸಿಕೊಂಡು ಬರುವ ಸವಾರರನ್ನು ತಡೆದು ರಸ್ತೆ ಮೇಲೆ ಬರುವಂತೆ ಪಾಠ ಮಾಡಿದ್ದಾರೆ. ಕೊನೆಯಲ್ಲಿ ಮತ್ತಿಬ್ಬರು ಹಿರಿಯರು ಮಹಿಳೆಯೊಂದಿಗೆ ಸೇರಿ ಸವಾರರನ್ನು ತಡೆದು ಚೆನ್ನಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

    ಫೆ. 21ರಂದು ವಿಡಿಯೋವನ್ನು ಶೇರ್​ ಮಾಡಲಾಗಿದ್ದು, ಅಂದಿನಿಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಿರಕಿ ಹೊಡೆಯುತ್ತಿದೆ. ಈವರೆಗೂ 20 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, ಅದರ ಸಂಖ್ಯೆ ಇನ್ನು ಹೆಚ್ಚುತ್ತಲೇ ಇದೆ. ವಿಡಿಯೋವನ್ನು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್​ ಮಾಡಿದ್ದು, 300ಕ್ಕೂ ಹೆಚ್ಚು ರೀಟ್ವೀಟ್​ಗಳನ್ನು ಪಡೆದುಕೊಂಡಿದೆ.

    ಪುಣೆ ಪೊಲೀಸರು ಸೇರಿ ಅನೇಕರು ವಿಡಿಯೋ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಒಳ್ಳೆಯ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿ, ಮಹಿಳೆಯನ್ನು ದಿಟ್ಟ ಮಹಿಳೆ ಎಂದು ಕೊಂಡಾಡಿದ್ದಾರೆ. ಹೀಗೆ ಸಾಕಷ್ಟು ಮಂದಿ ಮಹಿಳೆಯನ್ನು ಹೊಗಳಿ ಕಾಮೆಂಟ್​ಗಳ ಸುರಿಮಳೆ ಗೈಯುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts