More

    ಹಿರಿಯ ನಾಗರಿಕರ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ

    ಸಂಡೂರು: ಹಿರಿಯ ನಾಗರೀಕರ ಆರೋಗ್ಯ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ, ಆರು ತಿಂಗಳಿಗೊಮ್ಮೆ ಕಣ್ಣುಗಳ ಪರೀಕ್ಷೆ, ರಕ್ತದೊತ್ತಡ, ಸುಗರ್ ಲೆವೆಲ್ ಎಷ್ಟಿದೆ ಎಂಬ ಸಾಮಾನ್ಯ ಪರೀಕ್ಷೆ ಮಾಡಿಸಬೇಕು ಎಂದು ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್ ಹೇಳಿದರು.

    ಇದನ್ನೂ ಓದಿ: ಹಿರಿಯ ನಾಗರಿಕರಿಗಿರುವ ಸೌಲಭ್ಯದ ಮಾಹಿತಿ ಪಡೆಯಿರಿ

    ತಾಲೂಕಿನ ತೋರಣಗಲ್ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ವಿಶ್ವ ಹಿರಿಯ ನಾಗರೀಕರ ದಿನಾಚರಣೆಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಉತ್ತಮ ಆಹಾರ ಕೊಡಿ, ವಿಟಮಿನ್, ಖನಿಜಾಂಶಯುಕ್ತ ಆಹಾರ, ಹಾಲು, ಹಣ್ಣು ಕೊಡುವುದು ಮುಖ್ಯವಾಗಿದೆ, ಕ್ಯಾಲ್ಸಿಯಂ ಮಾತ್ರೆಗಳನ್ನು ವೈದ್ಯರ ಸಲಹೆಯಂತೆ ನಿಯಮಿತವಾಗಿ ಕೊಡಬೇಕು ಎಂದು ತಿಳಿಸಿದರು. ನಂತರ ವಿಶೇಷವಾಗಿ ಹಿರಿಯ ನಾಗರೀಕರ ಆರೋಗ್ಯ ತಪಾಸಣೆ ಮಾಡಲಾಯಿತು.

    ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಹಿರಿಯ ನಾಗರೀಕರಾದ ಜಿ.ಎಂ.ರುದ್ರಮುನಿ, ನಾಗರಾಜ್, ಸರೋಜಾ, ಪಾತಿಮಾ, ಮಸ್ತಾನ್ ಸಾಬ್, ಮಕ್ಕಳ ತಜ್ಞ ಡಾ.ಮಣಿಕುಮಾರ್, ಹರ್ಷ, ಮಂಜುನಾಥ್, ಶಕೀಲ್ ಅಹ್ಮದ್, ಶ್ರೀರಾಮ್, ವೆಂಕಪ್ಪ, ಇಮ್ರಾನ್, ರೋಜಾ, ನರೇಶ್ ಕುಮಾರ್, ಮಹಾಂತೇಶ್, ಚಂದ್ರಶೇಖರ, ರಾಜೇಶ್, ಹುಲಿಗೆಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts