More

    ಹಿರಿಯ ನಾಗರಿಕರಿಗಿರುವ ಸೌಲಭ್ಯದ ಮಾಹಿತಿ ಪಡೆಯಿರಿ

    ಮಡಿಕೇರಿ: ಹಿರಿಯರು ಕಾನೂನಿನ ಹಾಗೂ ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳಿ ಎಂದು ಉಪ ವಿಭಾಗಾಧಿಕಾರಿ ಯತೀಶ್ ಕುಮಾರ್ ಉಳ್ಳಾಲ್‌ರವರು ತಿಳಿಸಿದರು.


    ನಗರದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಭಾನುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಬದಲಾಗುತ್ತಿರುವ ಜಗತ್ತಿನಲ್ಲಿ ಹಿರಿಯ ನಾಗರಿಕರ ಸ್ಥಿತಿಸ್ಥಾಪಕತ್ವ ಎಂಬ ಘೋಷ ವಾಕ್ಯ ದಡಿಯಲ್ಲಿ ಬದಲಾಗುತ್ತಿರುವ ಈ ಆಧುನಿಕ ಸನ್ನಿವೇಶದಲ್ಲಿ ತಂತ್ರಜ್ಞಾನವು ಒಂದಾಗಿದೆ. ಹಿರಿಯ ನಾಗರಿಕರು ಇದನ್ನು ಬಳಸಿ ಉಪಯುಕ್ತ ಮಾಹಿತಿ ಪಡೆದುಕೊಳ್ಳಬೇಕು. ಸಂಪಾದನೆಯಲ್ಲಿ ಮಕ್ಕಳ ಜತೆಗೆ ತಮಗೂ ಸ್ವಲ್ಪ ಉಳಿಸಿಕೊಳ್ಳಬೇಕು ಎಂದರು.


    ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ ಮಾತನಾಡಿ, ಹಿರಿಯ ನಾಗರಿಕರು ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು. ಮಾನಸಿಕ ಹಾಗೂ ದೈಹಿಕ ಆರೋಗ್ಯ ಬಹಳ ಉತ್ತಮವಾಗಿಟ್ಟುಕೊಳ್ಳಬೇಕು. ದಿನನಿತ್ಯ ಯೋಗ, ಒಳ್ಳೆಯ ಆಹಾರ ಸೇವನೆ, ವಿಶ್ರಾಂತಿ ಪಡೆಯುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗುವುದು ಮುಖ್ಯ ಎಂದರು.


    ಜಿಲ್ಲಾ ಹಿರಿಯ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಕೆ.ಬಿ.ಪ್ರಸಾದ್ ಮಾತನಾಡಿ, ನ್ಯಾಯಾಲಯದ ಆವರಣದಲ್ಲಿ ಹಿರಿಯ ನಾಗರಿಕರಿಗಾಗಿ ಸೇವಾ ಕೌಂಟರ್ ಅನ್ನು ತೆರೆಯಲಾಗಿದ್ದು ಅದರ ಸದುಪಯೋಗವನ್ನು ಹಿರಿಯ ನಾಗರಿಕರು ಪಡೆದುಕೊಳ್ಳಬೇಕು. ಜಿಲ್ಲೆಯ ಹಿರಿಯ ನಾಗರಿಕರ ಸಮಸ್ಯೆಗೆ ಸಂಬಂಧಿಸಿದಂತೆ ಜಿಲ್ಲಾ ಕಾನೂನು ಪ್ರಾಧಿಕಾರ ಸೇವೆಯು ಅಂದಿನಿಂದಲೂ ಸಮಸ್ಯೆಗಳನ್ನು ನಿವಾರಿಸುತ್ತಾ ಬಂದಿದೆ. ಇನ್ನು ಮುಂದೆಯೂ ಕೂಡ ನಿವಾರಿಸುತ್ತದೆ ಎಂಬ ಭರವಸೆ ನೀಡುತ್ತೇನೆ ಎಂದ ಅವರು, ಹಿರಿಯ ನಾಗರಿಕರಿಗೆ ಯಾವುದೇ ತೊಂದರೆಯಾದರಲ್ಲಿ ಉಚಿತ ಸಹಾಯವಾಣಿ(೧೮೦೦೪೨೫೯೦೯೦೦) ಕರೆ ಮಾಡಿ ಸಮಸ್ಯೆಯನ್ನು ತಿಳಿಸಬೇಕೆಂದು ಸಲಹೆ ನೀಡಿದರು.


    ಹಿರಿಯ ವಕೀಲ ಡಾ.ಮನೋಜ್ ಬೋಪಯ್ಯ ಮಾತನಾಡಿ, ಹಿರಿಯ ನಾಗರಿಕರು ಯಾವುದೇ ಸಮಸ್ಯೆಗಳಿಗೂ ಭಯಪಡುವ ಅಗತ್ಯವಿಲ್ಲ. ಮಕ್ಕಳು ತಂದೆ ತಾಯಿಯನ್ನು ಮನೆಯಿಂದ ಹೊರ ಹಾಕುವಂತಿಲ್ಲ. ಜೀವಿತಾವಧಿವರೆಗೆ ಮಕ್ಕಳು ತಂದೆ ತಾಯಿಯನ್ನು ನೋಡಿಕೊಳ್ಳಬೇಕು ಎಂದು ಹಿರಿಯ ನಾಗರಿಕರ ಕಾಯ್ದೆಯು ವಿವರಿಸುತ್ತದೆ. ಯಾವುದೇ ಸಮಸ್ಯೆ ಇದ್ದರೂ ಕಾನೂನಿನ ಮುಖಾಂತರ ಬಗೆಹರಿಸಲು ಪ್ರಯತ್ನಿಸಿ ಎಂದರು.


    ಕಾರ್ಯಕ್ರಮದಲ್ಲಿ ರಾಣಿ ಮಾಚಯ್ಯ, ಮಾರಮಡ ಮಾಚಮ್ಮ ಪೊನ್ನಪ್ಪ, ಪಾಲೆಕಂಡ ಬೋಪಯ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ನೌಕರ ಸಂಘದ ಅಧ್ಯಕ್ಷ ಮಲ್ಲಪ್ಪ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಕೆ.ಜಿ.ವಿಮಲಾ, ವಿರಾಜಪೇಟೆಯ ಹಿರಿಯ ವಕೀಲ ಶಂಕರಿ ಪೊನ್ನಪ್ಪ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts