More

    ದೊಡ್ಡ ಕೈಗಾರಿಕೆ ಸ್ಥಾಪನೆಗೆ ಪ್ರಯತ್ನ

    ಕಡೂರು: ನಗದಿಯಾತ್ ಕಾವಲು ಪ್ರದೇಶದಲ್ಲಿ ದೊಡ್ಡ ಕೈಗಾರಿಕೆಗಳ ಸ್ಥಾಪನೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

    ದೇಶದ ಕಾಮಗಾರಿಗಳನ್ನು ಬುಧವಾರ ಕೆಐಎಡಿಬಿ ಇಂಜಿನಿಯರ್‌ಗಳ ಜತೆ ವೀಕ್ಷಿಸಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಕೈಗಾರಿಕಾ ಪ್ರದೇಶ ವೇಗವಾಗಿ ಬೆಳೆಯಲಿದ್ದು, ಒಂದೆರಡು ಗಾರ್ಮೆಂಟ್ಸ್‌ಗಳು ತೆರೆದುಕೊಂಡರೆ ಮಹಿಳೆಯರಿಗೆ ಉದ್ಯೋಗ ನೀಡಿದಂತಾಗುತ್ತದೆ. ಜತೆಗೆ ನಿರುದ್ಯೋಗಿ ಯುವಕರಿಗೂ ಸಹಕಾರವಾಗುತ್ತದೆ. ಕಡೂರು ಪಟ್ಟಣದ ಬೆಳವಣಿಗೆಗೂ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಕೈಗಾರಿಕ ಪ್ರದೇಶಕ್ಕೆ ಸೌಲಭ್ಯಗಳನ್ನು ನೀಡಲಾಗುವುದು ಎಂದರು.
    ನಗದಿಯಾತ್ ಕಾವಲಿನ 236 ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಸೌಕರ್ಯಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೇ.10 ಕಾಮಗಾರಿ ಬಾಕಿ ಉಳಿದಿದೆ. ನಿಡಘಟ್ಟ ಸಮೀಪದ ಎಂಯುಎಸ್‌ಎಸ್‌ನಿಂದ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಸಂಪರ್ಕವಾಗಬೇಕಿದ್ದು, ಕಾಮಗಾರಿಗಾಗಿ ಮಂಜೂರಾತಿಗೊಂಡು, ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ. 20 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಲೈನ್‌ಗಳನ್ನು ಅಳವಡಿಸಲು ಹಾಗೂ ಕೈಗಾರಿಕಾ ಪ್ರದೇಶದ ಎಲ್ಲ ರಸ್ತೆಗಳಿಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು. ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣವೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
    15 ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣವಾಗಿದ್ದು, 200 ಬ್ಲಾಕ್‌ಗಳ ನಿರ್ಮಾಣ ನಡೆದಿದೆ. ಕನಿಷ್ಠ ಅರ್ಧ ಎಕರೆಯಿಂದ ಗರಿಷ್ಠ 10 ಎಕರೆವರೆಗೂ ಬ್ಲಾಕ್ ನಿರ್ಮಾಣ ನಡೆದಿದೆ ಎಂದರು.
    ಕಾವಲು ಪ್ರದೇಶದಲ್ಲಿ ಅವಕಾಶ ದೊರಕಿಸಿಕೊಡುವಂತೆ ಸಾಮಿಲ್ ಮಾಲೀಕರೂ ಅರ್ಜಿ ಸಲ್ಲಿಸಿದ್ದು, ಅವರಿಗೆ ಪ್ರತ್ಯೇಕ ಬ್ಲಾಕ್‌ಗಳನ್ನು ಮೀಸಲಿಡಲು ಚಿಂತಿಸಲಾಗಿದೆ. ಸಲ್ಲಿಕೆಯಾದ ಅರ್ಜಿಗಳಿಗೆ ಕೂಡಲೇ ಬ್ಲಾಕ್‌ಗಳನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
    ಹಾಸನ ಕೆಐಎಡಿಬಿ ಮುಖ್ಯ ಇಂಜಿನಿಯರ್ ಸುನೀಲ್‌ಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಸಿದ್ದರಾಜ್, ಹಾಸನದ ಇಂಜಿನಿಯರ್ ಜೋಷಿ, ಎಇ ಹರೀಶ್, ಜವಳಿ ಇಲಾಖೆ ಅಧಿಕಾರಿ ಅಶೋಕ್, ಚಿಕ್ಕಮಗಳೂರಿನ ಡಿಡಿ ರವಿಪ್ರಸಾದ್, ಮಂಗಳೂರಿನ ರಾಘವೇಂದ್ರ, ಗುತ್ತಿಗೆದಾರ ಚೌಳಹಿರಿಯೂರು ಹಾಲಪ್ಪ, ಶ್ರೀಕಂಠ ಒಡೆಯರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts