More

    ವರೂರಿಗೆ ಮೂಲಸೌಕರ್ಯ ಕಲ್ಪಿಸಲು ಪ್ರಯತ್ನ

    ಹುಬ್ಬಳ್ಳಿ: ಬಣ್ಣದರ್ಪಣ ಯೋಜನೆಯಡಿ ಕುಂದಗೋಳ ಮತಕ್ಷೇತ್ರದ 280 ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯಲಾಗಿದೆ ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.

    ತಾಲೂಕಿನ ವರೂರ ಗ್ರಾಮದಲ್ಲಿ ಶ್ರೀಮತಿ ದೇವಕ್ಕ ದ್ಯಾವಪ್ಪ ಬಡಿಗೇರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಣ್ಣ ದರ್ಪಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಚಿವ ಪ್ರಲ್ಹಾದ ಜೋಶಿಯವರ ಮಹತ್ವಾಕಾಂಕ್ಷಿ ಯೋಜನೆ ಬಣ್ಣದರ್ಪಣ ದೇಶಕ್ಕೆ ಮಾದರಿ ಯಾಗಬೇಕೆಂಬ ಅಭಿಲಾಷೆಯಿಂದ ಈ ಯೋಜನೆ ರೂಪಿಸಲಾಗಿದೆ. ಜನರ ಸಹಕಾರ ಮತ್ತು ಸಮಯದಿಂದಾಗಿ ಬಣ್ಣದರ್ಪಣ ಯೋಜನೆ ಯಶಸ್ವಿಗೆ ಕಾರಣವಾಗಿದೆ ಎಂದರು. ಯಾರೇ ಆಗಲಿ ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡಬೇಕು. ಉಳಿದ ಅವಧಿಯಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ನನ್ನ ಮೇಲೆ ನಿಮ್ಮೆಲ್ಲರ ಋಣವಿದ್ದು, ಅದನ್ನು ತೀರಿಸುತ್ತೇನೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸರ್ಕಾರದಿಂದ ಅನುದಾನ ತಂದಿದ್ದು, ಗ್ರಾಮಕ್ಕೆ ಮೂಲಸೌಲಭ್ಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.

    ಗ್ರಾಪಂ ಅಧ್ಯಕ್ಷೆ ಲಕ್ಷ್ಮವ್ವ ಮ್ಯಾಗೇಡಿ, ಉಪಾಧ್ಯಕ್ಷ ನಿಂಗಪ್ಪ ಹೊರಓಣಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಸವರಾಜ ಬಡಿಗೇರ, ಎಸ್​ಡಿಎಂಸಿ ಅಧ್ಯಕ್ಷ ಬಸವರಾಜ ಹೊಸಮನಿ, ಕೆಸಿಸಿ ಬ್ಯಾಂಕ್ ನೂತನ ನಿರ್ದೇಶಕ ನಿಂಗನಗೌಡ ಮರಿಗೌಡ್ರ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಸಿಆರ್​ಪಿ ಇಒ ಭಾರತಿ ಗುಜ್ಜಲ, ಚಂದ್ರಕಾಂತ ಬೆಣ್ಣಿ, ಮೃತ್ಯುಂಜಯ ಜಡಿಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts