More

    ಶಿಕ್ಷಣದಿಂದ ಸ್ಥಾನಮಾನ ಸಾಧ್ಯ ; ಅಗ್ನಿಬನ್ನಿರಾಯ ಸ್ವಾಮಿ ಜಯಂತ್ಯುತ್ಸವದಲ್ಲಿ ಸಂಸದ ಬಸವರಾಜು ಸಲಹೆ

    ತುಮಕೂರು: ಶ್ರಮದ ಬದುಕಿಗೆ ಹೆಸರಾಗಿರುವ ತಿಗಳ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕ, ಸಾವಾಜಿಕ ಮತ್ತು ರಾಜಕೀಯವಾಗಿ ಸ್ಥಾನಮಾನ ಪಡೆಯಲು ಶಿಕ್ಷಣದಿಂದ ಸಾಧ್ಯ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.

    ನಗರದ ಶ್ರೀಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀಅಗ್ನಿಬನ್ನಿರಾಯ ಸ್ವಾಮಿ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಗ್ನಿಬನ್ನಿರಾಯ ಸಮುದಾಯದಲ್ಲಿ ಒಗ್ಗಟ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದರು.
    ತಿಗಳ ಸಮುದಾಯ ಕಷ್ಟಪಟ್ಟು ಬೆಳೆ ಬೆಳೆದು ವಾರುಕಟ್ಟೆ ಪ್ರವೇಶ ವಾಡಿ, ಬೆಳೆದ ಬೆಳೆಯನ್ನು ವಾರಾಟ ವಾಡಿ ಜೀವನ ಸಾಗಿಸುತ್ತಾ ಆರ್ಥಿಕವಾಗಿ ಮುಂದೆ ಬರುತ್ತಿದೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಬಗ್ಗೆಯೂ ಯೋಚನೆ ವಾಡಬೇಕು ಎಂದರು.

    ನಗರದ ಸುತ್ತಮುತ್ತಲಿರುವ ಕೆರೆಗಳನ್ನು ಸ್ವಚ್ಚಗೊಳಿಸಿ, ನೀರು ಹರಿಸುವ ಯೋಜನೆ ರೂಪಿಸಲಾಗಿದ್ದು, ಈ ಮೂಲಕ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ. ಎಲ್ಲ ಕೆರೆಗಳನ್ನು ತುಂಬಿಸಿದರೆ ಮುಂದಿನ ದಿನಗಳಲ್ಲಿ ತುಮಕೂರು ನಗರಕ್ಕೆ ಕುಡಿಯುವ ನೀರಿಗೂ ತತ್ವಾರ ಇಲ್ಲದೆ 24/7 ನೀರು ನಗರದ ಜನತೆಗೆ ಲಭ್ಯವಾಗಲಿದೆ ಎಂದರು.

    ಶಾಸಕ ಡಿ.ಸಿ.ಗೌರಿಶಂಕರ್ ವಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ, ಒಗ್ಗಟ್ಟಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನೀವೆಲ್ಲಾ ಇಲ್ಲಿ ಸೇರಿರುವುದೇ ಸಾಕ್ಷಿ. ಕೊಲ್ಲಾಪುರದಮ್ಮ ಸಮುದಾಯಭವನ ಕಟ್ಟಲು ಸಮುದಾಯಕ್ಕೆ ಶಕ್ತಿ ತುಂಬಿದ್ದೇ ನಮ್ಮ ತಂದೆ ಚನ್ನಿಗಪ್ಪ ಎಂದು ಹೇಳಿಕೊಂಡರು.

    ನಾವು ಅಗ್ನಿವಂಶ ತಿಗಳ ಸಮುದಾಯಕ್ಕೆ ಯಾವುದೇ ರೀತಿ ಅನ್ಯಾಯ ವಾಡಿಲ್ಲ, ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ ತರಲು ಎಚ್.ಡಿ.ಕುವಾರಸ್ವಾಮಿ ಜತೆ ಮುಖ್ಯಮಂತ್ರಿಗಳಿಗೆ ಒತ್ತಡ ಹಾಕುವುದಾಗಿ ತಿಳಿಸಿದರು.

    ಅಗ್ನಿಬನ್ನಿರಾಯ ಸಮುದಾಯದ ಆಶೀರ್ವಾದದಿಂದ ಇಲ್ಲಿನ ಶಾಸಕರು, ಸಂಸದರು ಆಯ್ಕೆಯಾಗಿದ್ದು, ಅವರು ಸರ್ಕಾರದ ಮೇಲೆ ಒತ್ತಡ ಹಾಕಿ ತಿಗಳ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು. ಅಗ್ನಿಬನ್ನಿರಾಯ ಸ್ವಾಮಿ ದೇವಸ್ಥಾನ ನಿರ್ವಾಣ ವಾಡಲು ವೈಯಕ್ತಿಕವಾಗಿ 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಕಾರ್ಯಕ್ರಮದಲ್ಲಿ ೋಷಿಸಿದರು.
    ವಾಜಿ ಶಾಸಕ ಡಾ.ಎಸ್.ರಫೀಕ್ ಅಹಮ್ಮದ್ ವಾತನಾಡಿ, ತಿಗಳ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು, ಇದಕ್ಕೆ ಸಮುದಾಯದ ಹೋರಾಟವೂ ಅಗತ್ಯವಿದೆ ಎಂದರು.

    ಮೇಯರ್ ಬಿ.ಜಿ.ಕೃಷ್ಣಪ್ಪ, ಸವಾಜದ ಮುಖಂಡ ಸುಬ್ಬಣ್ಣ, ಉಪಮೇಯರ್ ನಾಜೀವಾಬಿ, ಪಾಲಿಕೆ ಸದಸ್ಯ ಟಿ.ಕೆ.ನರಸಿಂಹಮೂರ್ತಿ, ಎ.ಶ್ರೀನಿವಾಸ್, ತಿಗಳ ಮಹಾಸಭಾ ಅಧ್ಯಕ್ಷ ಎಂ.ಆಂಜನೇಯ, ಮುಖಂಡ ರವೀಶ್ ಜಾಂಗೀರ್, ಪ್ರೆಸ್ ರಾಜಣ್ಣ ವಾತನಾಡಿದರು. ಸಮಾಜದ ಮುಖಂಡರು, ಪಾಲಿಕೆ ಸದಸ್ಯರು ಇದ್ದರು. ಕಾರ್ಯಕ್ರಮದಲ್ಲಿ ತಿಗಳ ಸಮುದಾಯದ ಗೀತೆಗಳುಳ್ಳ ಆಡಿಯೋವನ್ನು ಬಿಡುಗಡೆ ವಾಡಲಾಯಿತು.

    ಗಾರ್ಡನ್ ರಸ್ತೆಗೆ ಅಗ್ನಿಬನ್ನಿರಾಯ ಸ್ವಾಮಿ ರಸ್ತೆ ಎಂದು ನಾಮಕರಣ: ನಗರದ ಗಾರ್ಡನ್ ರಸ್ತೆಗೆ ಅಗ್ನಿಬನ್ನಿರಾಯ ಸ್ವಾಮಿ ರಸ್ತೆ ಎಂದು ನಾಮಕರಣ ವಾಡಲು ನಿರ್ಧರಿಸಿದ್ದು, ಇದಕ್ಕೆ ಯಾರ ವಿವಾದವೂ ಇಲ್ಲದೇ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು. ಅದೇ ರೀತಿ ಗುಬ್ಬಿಗೇಟ್ ವೃತ್ತಕ್ಕೆ ಅಗ್ನಿಬನ್ನಿರಾಯ ವೃತ್ತ ಎಂದು ನಾಮಕರಣ ವಾಡಲು ನಿರ್ಧರಿಸಲಾಗಿದೆ ಎಂದರು. ಸಮುದಾಯ ಸ್ಮಶಾನ ಜಾಗಕ್ಕಾಗಿ ಮನವಿ ವಾಡಿದ್ದು, ನಗರದಲ್ಲಿ ಗುರುತಿಸಿರುವ ಜಾಗಕ್ಕೆ ಖಾತೆ ವಾಡಿಸಬೇಕಿದೆ, ಖಾತೆ ಆದ ಬಳಿಕ ಸ್ಮಶಾನ ಅಭಿವೃದ್ಧಿಗೆ ಆದ್ಯತೆ ನಿಡಲಾಗುವುದು, ಅಗ್ನಿಬನ್ನಿರಾಯ ಸ್ವಾಮಿ ದೇವಸ್ಥಾನ ನಿರ್ವಾಣಕ್ಕೂ ಸಹಕಾರ ನೀಡುವುದಾಗಿ ತಿಳಿಸಿದರು. ತಿಗಳ ಸಮುದಾಯಕ್ಕೆ ಮಹಾನಗರಪಾಲಿಕೆಯಲ್ಲಿ ಎರಡು ಬಾರಿ ಮೇಯರ್ ಸ್ಥಾನ, ಒಂದು ಬಾರಿ ಉಪಮೇಯರ್ ಸ್ಥಾನ ಸಿಗಲು ನಾವೂ ಸಹ ಕೈಜೋಡಿಸಿದ್ದೇವೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts