More

    ಶಿಕ್ಷಣದಿಂದ ಹೆಚ್ಚಿನ ಅವಕಾಶಗಳು ಸೃಷ್ಟಿ

    ಗಂಗಾವತಿ: ಶಿಕ್ಷಣದಿಂದ ಸಮಗ್ರ ಅಭಿವೃದ್ಧಿ ಸಾಧ್ಯವಿದ್ದು, ಶೈಕ್ಷಣಿಕ ಕ್ಷೇತ್ರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮಾಜಿ ಶಾಸಕ ಹಾಗೂ ಕೆಎಲ್‌ಇ ಸ್ಥಾನಿಕ ಮಂಡಳಿ ಸದಸ್ಯ ಪರಣ್ಣ ಮುನವಳ್ಳಿ ಸಲಹೆ ನೀಡಿದರು.

    ತಾಲೂಕಿನ ವಡ್ಡರಹಟ್ಟಿಯ ಕೆಎಲ್‌ಇ ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು.

    ಶಿಕ್ಷಣದಿಂದಿ ಉತ್ತಮ ಭವಿಷ್ಯ

    ಶಿಕ್ಷಣಕ್ಕೆ ಆದ್ಯತೆ ನೀಡಿದಾಗ ಭವಿಷ್ಯದಲ್ಲಿ ಉತ್ತಮ ಅವಕಾಶ ದೊರೆಯಲಿವೆ. ನಿರೀಕ್ಷಿತ ಗುರಿ ಕನಸು ನನಸಾಗಿಸಲು ಅಧ್ಯಯನಶೀಲತೆ ಮುಖ್ಯ ಎಂದು ಸಲಹೆ ನೀಡಿದರು. ಪ್ರಾಚಾರ್ಯ ಎಸ್.ಸಿ.ಪಾಟೀಲ್ ಮಾತನಾಡಿ, ಆಧುನಿಕ ತಂತ್ರಜ್ಞಾನದ ಜತೆಗೆ ಮೌಲ್ಯಗಳನ್ನು ರೂಪಿಸುವ ಶಿಕ್ಷಣ ವ್ಯವಸ್ಥೆ ಅಗತ್ಯವಿದೆ ಎಂದರು.

    ಇದನ್ನೂ ಓದಿ:ಶಿಕ್ಷಕನೊಂದಿಗೆ ಸಿಕ್ಕಿ ಬಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ: ವಿವಸ್ತ್ರಗೊಳಿಸಿ ಹಲ್ಲೆ

    ಕಳೆದ ವರ್ಷದ ಪಿಯು ಪರೀಕ್ಷೆಯಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಾಲಕರ ಸ.ಪ.ಪೂ.ಕಾಲೇಜಿನ ಪ್ರಾಚಾರ್ಯ ಬಸಪ್ಪ ನಾಗೋಲಿ ಮಾತನಾಡಿದರು. ಬಸಾಪಟ್ಟಣ ರಾಜರಾಜೇಶ್ವರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಿಂಗಪ್ಪ ಗುಂಡೂರು, ಕೆಎಲ್‌ಇ ಸ್ಥಾನಿಕ ಮಂಡಳಿ ಕಾರ್ಯಾಧ್ಯಕ್ಷ ಗಿರಿಯಪ್ಪ ಹೊಸ್ಕೇರಿ, ಸದಸ್ಯ ಪ್ರಭಾಕರ ಹೊಸ್ಕೇರಿ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts