More

    ಶಿಕ್ಷಣದ ಜತೆ ಸೇವಾ ಮನೋಭಾವವೂ ಇರಲಿ: ಡಾ.ಇ.ಸಿ. ನಿಂಗಾಜಗೌಡ ಸಲಹೆ

    ವಿದ್ಯಾರ್ಥಿಗಳು ಸೇವಾ ಮನೋಭಾವ ಹಾಗೂ ಸಾಂಸ್ಕೃತಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಇ.ಸಿ. ನಿಂಗಾಜಗೌಡ ಸಲಹೆ ನೀಡಿದರು.

    ಮೈಸೂಸು ವಿವಿ ಸಮಾಜ ಕಾರ್ಯ ಅಧ್ಯಯನ ವಿಭಾಗ, ಪ್ರಜ್ಞಾ -ಫೌಂಡೇಷನ್ ಮತ್ತು ಲಿಯೋ ಕ್ಲಬ್ ಆಫ್ ಮೈಸೂರು ಪ್ಯಾಲೆಸ್ ಸಿಟಿ ಸಂಯುಕ್ತಾಶ್ರಯದಲ್ಲಿ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪತಂಗ- 2023 ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದರು.

    ಜೀವನದಲ್ಲಿ ಶಿಕ್ಷಣ ಇದ್ದರೆ ಸಾಲದು. ಹಾಗಾಗಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆ ಜತೆಗೆ ನಿತ್ಯದ ಬದುಕಿನಲ್ಲಿ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು. ಸಾಂಸ್ಕೃತಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.

    ಯದುವಂಶದ ಅರಸರು, ವಿಶೇಷವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಆಡಳಿತದ ಫಲವಾಗಿ ಮೈಸೂರು ನಗರವಿಂದು ಸಾಂಸ್ಕೃತಿಕ ರಾಜಧಾನಿಯಾಗಿದೆ. ಇಡೀ ವಿಶ್ವದಲ್ಲೇ ತನ್ನ ಖ್ಯಾತಿ ಹೆಚ್ಚಿಸಿಕೊಂಡಿದೆ. ಯೋಗ, ಆಯುರ್ವೇದ, ಜನಪದ, ಸಂಗೀತ, ನಾಟಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಲವಾರು ವಿದ್ವಾಂಸರು, ಗುರುಗಳು ಮೈಸೂರಿನಲ್ಲಿ ಇರುವುದು ನಮ್ಮ ಪುಣ್ಯ ಎಂದರು.

    ಸ್ವಾಮಿ ವಿವೇಕಾನಂದ ಅವರ ಮಾದರಿ ವ್ಯಕ್ತಿತ್ವ ಅಳವಡಿಸಿಕೊಂಡಾಗ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎನ್ನುವುದನ್ನು ವಿದ್ಯಾರ್ಥಿಗಳು ನೆನಪಿನಲ್ಲಿ ಇಟ್ಟುಕೊಂಡು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದ ಅವರು, ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಸೋಲು- ಗೆಲುವು ಸಹಜ. ಕಲಾವಿದರನ್ನು ಪ್ರೋತ್ಸಾಹಿಸಲು ಪಾಲಿಕೆಯಿಂದ ಪ್ರೋತ್ಸಾಹ ದನ ನೀಡಲಾಗುತ್ತಿದೆ ಎಂದರು.


    ಮೇಯರ್ ಶಿವಕುಮಾರ್ ಮಾತನಾಡಿ, ಮೈಸೂರು ಯೋಗ ನಗರಿ ಆಗಿದ್ದು, ಇಡೀ ವಿಶ್ವವೇ ನೋಡುತ್ತಿದೆ. ಹೀಗಾಗಿ, ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡುವ ಮೂಲಕ ದೈಹಿಕ, ಮಾನಸಿಕವಾಗಿ ಸದೃಢರಾಗಬೇಕು. ಇದರಿಂದ ಓದಿನಲ್ಲಿ ಏಕಾಗ್ರತೆ ಬರುತ್ತದೆ. ನಿರಂತರವಾಗಿ ಯೋಗ ಮಾಡುವುದರಿಂದ ನಿಮ್ಮ ಎಲ್ಲ ಗುರಿಗಳನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.


    ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ಲಾಸ್ಟಿಕ್ ಬಳಕೆ ತ್ಯಜಿಸಿ, ಬಟ್ಟೆ ಬ್ಯಾಗ್‌ಗಳನ್ನು ಬಳಸಬೇಕು. ಆ ಮೂಲಕ ಪರಿಸರ ಉಳಿಸಬೇಕು ಎಂದು ಕೋರಿದರು.


    ವಿದ್ಯಾರ್ಥಿಗಳಿಗಾಗಿ ಜನಪದ ನೃತ್ಯ, ಜನಪದ ಗೀತೆ, ಏಕಾಂಕ ನಾಟಕ, ಪ್ರಬಂಧ, ಆಶುಭಾಷಣ, ಚಿತ್ರಕಲೆ, ರಂಗೋಲಿ, ಭಾವಗೀತೆ ಸ್ಪರ್ಧೆಗಳು ನಡೆದವು.
    ಸಮಾಜ ಕಾರ್ಯ ಅಧ್ಯಯನ ವಿಭಾಗದ ಡಾ.ಎಚ್.ಪಿ. ಜ್ಯೋತಿ, ಸಹ ಪ್ರಾಧ್ಯಾಪಕ ಡಾ. ಚಂದ್ರಮೌಳಿ, ಲಿಯೋ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಶಿವಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts