More

    ಸೆ.21ರಿಂದ ತರಗತಿ ಆರಂಭ ಆಗಲ್ಲ, ಆದರೆ…

    ಮೈಸೂರು: ಖಾಸಗಿ ಶಾಲೆಗಳಿಗೆ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಮತ್ತೊಮ್ಮೆ ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ. ಸರ್ಕಾರದ ಆದೇಶದಂತೆ ಕೇವಲ ಒಂದು ಟರ್ಮ್​ ಫೀಸ್​ ಮಾತ್ರ ತೆಗೆದುಕೊಳ್ಳಬೇಕು. ಈ ಸೂಚನೆಯನ್ನು ಉಲ್ಲಂಘಿಸಿರುವುದು ಕಂಡುಬಂದರೆ ಶಾಲೆಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

    ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಸುರೇಶ್​ ಕುಮಾರ್​, ಕರೊನಾ ಇರೋದ್ರಿಂದ ಕಳೆದ ವರ್ಷಕ್ಕಿಂತ ಈ ಬಾರಿ ಫೀಸ್ ಜಾಸ್ತಿ ಮಾಡಬಾರದು. ಸಾಧ್ಯವಾದರೆ ಶುಲ್ಕವನ್ನು ಇನ್ನೂ ಕಡಿಮೆ ಮಾಡಬೇಕು. ಯಾವ ಶಾಲೆಯಲ್ಲಾದರೂ ಹೆಚ್ಚಿನ ಫೀಸ್ ತೆಗೆದುಕೊಂಡರೆ ಪೋಷಕರು ಸ್ಥಳೀಯ ಬಿಇಒ ಅಥವಾ ಡಿಡಿಪಿಐಗೆ ದೂರು ಕೊಡಬೇಕು. ಈ ಬಗ್ಗೆ ಖಾಸಗಿ ಶಾಲೆಗಳಿಗೂ ಸರ್ಕಾರದಿಂದ ಸೂಚನೆ ಕೊಟ್ಟಿದ್ದೇವೆ ಎಂದರು. ಅಲ್ಲದೆ ಸೆ‌.21ರಿಂದ ಕೇವಲ ಶಾಲೆ ತೆರೆಯಲಿದೆ. ಆದರೆ, ತರಗತಿ ಪ್ರಾರಂಭ ಆಗಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿರಿ ಸರ್ಕಾರಿ ಶಾಲೆಗೆ ಡಿಮಾಂಡ್; ಮಕ್ಕಳ ಕಲಿಕೆಗೆ ಕೈ ಹಿಡಿದ ವಿದ್ಯಾಗಮ

    ದಾಖಲಾತಿ ಎಂಬುದು ಆ ವರ್ಷದಲ್ಲಿ ನಿಗದಿತ ಅವಧಿಯಲ್ಲೇ ಮುಗಿಯಬೇಕು. ಜೂನ್​ನಲ್ಲೇ ಮಕ್ಕಳ ದಾಖಲಾತಿ ಆಗಬೇಕಿತ್ತು. ಕರೊನಾ ಕಾರಣಕ್ಕೆ ತಡವಾಗಿದೆ. ಸೆ.21ರಿಂದ 30ರೊಳಗೆ 1ರಿಂದ 10ನೇ ತರಗತಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಮುಗಿಯಬೇಕು. ಪ್ರತಿ ವರ್ಷ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಶಾಲೆಗಳಿಗೆ ನೋಂದಾವಣಿ ಆಗ್ತಾರೆ ಎಂದು ಸುರೇಶ್​ ಕುಮಾರ್​ ತಿಳಿಸಿದರು.

    ಇನ್ನು ಸೆ‌.21ರಿಂದ ಶಾಲೆಗಳು ತೆರೆಯುತ್ತವೆಯಾದರೂ ಸದ್ಯಕ್ಕೆ ತರಗತಿ ಪ್ರಾರಂಭ ಆಗಲ್ಲ. ಅಂದಿನಿಂದ ಎಲ್ಲ ಶಿಕ್ಷಕರು ಶಾಲೆಗೆ ಬರಬೇಕು. ಸೆ. 21ರಿಂದ 9, 10, 11, 12ನೇ ತರಗತಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಬಗ್ಗೆ ಏನಾದರೂ ಅನುಮಾನ ಇದ್ದರೆ ಸ್ಪಷ್ಟೀಕರಣ ತೆಗೆದುಕೊಳ್ಳಬಹುದು. ಅದು ದೈನಂದಿನ ತಗರತಿ ರೀತಿ ಅಲ್ಲ. ಓದಿದ್ದು ಅರ್ಥವಾಗಿಲ್ಲ ಅಂದರೆ ಶಿಕ್ಷಕರ ಜೊತೆ ಮಾಹಿತಿ ಪಡೆದುಕೊಳ್ಳಬಹುದು ಎಂದರು.

    ಡ್ರಗ್ಸ್​ ಕೇಸ್​; ಅಕುಲ್​ ಬಾಲಾಜಿ, ಪ್ರಭಾವಿ ರಾಜಕಾರಣಿಯ ಪುತ್ರ ಸೇರಿ ಮೂವರಿಗೆ ಸಿಸಿಬಿ ನೋಟಿಸ್​

    ಮೊಬೈಲ್​ ಕಳ್ಳನ ವಿರುದ್ಧ ಹೋರಾಡಿ ಗೆದ್ದ ಕೂಲಿಕಾರನ ಮಗಳಿಗೆ ಸಿಕ್ತು ಬಂಪರ್​ ಬಹುಮಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts