More

  ಶಿಕ್ಷಣದಿಂದ ಸಬಲೀಕರಣ ಸಾಧ್ಯ

  ಅಳವಂಡಿ: ಸಮಾಜದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಜೀವಮಾನದ ಕಲಿಕೆಯನ್ನು ಅರ್ಥೈಸಿ ವಿದ್ಯಾವಂತರನ್ನಾಗಿ ಮಾಡುವ ಜತೆಗೆ 2027 ರೊಳಗೆ ಅನಕ್ಷರತೆಯನ್ನು ನಿರ್ಮೂಲನೆ ಮಾಡುವುದೇ ನವ ಭಾರತ ಸಾಕ್ಷರತಾ ಕಾರ್ಯಕ್ರಮ ಉದ್ದೇಶ ಎಂದು ಅಳವಂಡಿ ಸಿಆರ್‌ಪಿ ವಿಜಯಕುಮಾರ ಟಿಕಾರೆ ತಿಳಿಸಿದರು.

  ಇದನ್ನೂ ಓದಿ: ಮಕ್ಕಳಿಗೆ ಶಿಕ್ಷಣದ ಜತೆಗೆ ಜೀವನ ಮೌಲ್ಯ ತಿಳಿಸಿ

  ಗ್ರಾಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಲೋಕ ಶಿಕ್ಷಣ ವಿಭಾಗ) ಯಿಂದ ಉಲ್ಲಾಸ ನವ ಭಾರತ ಸಾಕ್ಷರತಾ (ಎನ್‌ಐಎಲ್‌ಪಿ) ಕಾರ್ಯಕ್ರಮದ ಅಂಗವಾಗಿ ದದೇಗಲ್ ರಾಜೀವ ಗಾಂಧಿ ರೂರಲ್ ಕಾಲೇಜ ಆಫ್ ಎಜುಕೇಶನ್ ವಿದ್ಯಾರ್ಥಿಗಳಿಂದ ನಡೆದ ಸಾಕ್ಷರತಾ ಮಾಹಿತಿ ಕಾರ್ಯಕ್ರಮವನ್ನು ಚಾಲನೆ ನೀಡಿ ಸೋಮವಾರ ಮಾತನಾಡಿದರು.

  ಎಲ್ಲರಿಗೂ ಶಿಕ್ಷಣ ಎಂಬ ವಿಷಯದ ಮೇಲೆ ಕಾರ್ಯಕ್ರಮ ಜಾರಿಯಾಗಲಿದ್ದು 2030ರೊಳಗೆ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನವನ್ನು ಖಾತ್ರಿಗೊಳಿಸುವ ಉದ್ದೇಶ ಇದೆ. ಅನಕ್ಷರಸ್ಥರಿಗೆ ಓದು, ಬರಹ, ಸುಲಭ ಲೆಕ್ಕಾಚಾರ ಕಲಿಸಲಾಗುವುದು. ವಿದ್ಯಾರ್ಥಿಗಳು, ಸಮುದಾಯದ ಸದಸ್ಯರು, ಸ್ವಯಂ ಸೇವಕರಿಂದ ಅನುಷ್ಠಾನಗೊಳಿಸಲಾಗುವುದು ಎಂದರು.

  ಪ್ರಶಿಕ್ಷಣಾರ್ಥಿಗಳಾದ ಮೇಘಾ, ಶಿಲ್ಪಾ, ಮಾರುತಿ, ಅರುಣ, ಯಮನೂರಪ್ಪ, ಕನಕಪ್ಪ, ಶಂಕರಗೌಡ, ಮಹೇಶ, ಶಿಕ್ಷಕ ನೀಲಪ್ಪ ಹಕ್ಕಂಡಿ ಹಾಗೂ ಇತರರು ಇದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts