More

    ಶಿಕ್ಷಣ ಇಲಾಖೆ ಕಾರ್ಯ ಶ್ಲಾಘನೀಯ

    ಯಲಬುರ್ಗಾ: ಗ್ರಾಮೀಣ ಕಲೆ, ರೈತರ ಜೀವನಶೈಲಿ ಮತ್ತು ಆಚಾರ ವಿಚಾರಗಳು ಅವನತಿಯತ್ತ ಸಾಗುತ್ತಿದ್ದು, ಉಳಿವಿಗೆ ಎಲ್ಲರು ಕೈಜೋಡಿಸಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಶಂಕರ ಮೂಲಿ ಹೇಳಿದರು.

    ಇದನ್ನೂ ಓದಿ: ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಅತೀ ಅವಶ್ಯ: ಸಭಾಪತಿ ಬಸವರಾಜ ಹೊರಟ್ಟಿ

    ತಾಲೂಕಿನ ಹೊಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಳ್ಳಿ ಸೊಗಡು ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
    ಆಧುನಿಕ ಕಾಲದ ಭರಾಟೆಯಲ್ಲಿ ಮಾನವ ತಾಂತ್ರಿಕ ಬದುಕಿಗೆ ಅವಲಂಬಿತನಾಗಿದ್ದು, ಸಾಂಪ್ರದಾಯಿಕ ಜೀವನ ಶೈಲಿ ಕಣ್ಮರೆಯಾಗುತ್ತಿದೆ.

    ಹಳ್ಳಿಯ ಜೀವನಶೈಲಿಯನ್ನು ವಿದ್ಯಾರ್ಥಿಗಳ ಮೂಲಕ ಕಣ್ಮುಂದೆ ತರಲು ವಿಭಿನ್ನ ಪ್ರಯತ್ನ ಮಾಡುತ್ತಿರುವ ಶಿಕ್ಷಣ ಇಲಾಖೆ ಕಾರ್ಯ ಮೆಚ್ಚುವಂಥದ್ದು ಎಂದರು.
    ಅಕ್ಕಿ ಕೇರುವುದು, ಬೀಸುವುದು, ಕಟ್ಟಿಗೆ ತರುವುದು, ಆಸ್ಪತ್ರೆ, ಕಿರಾಣಿ ಅಂಗಡಿ, ರೊಟ್ಟಿ ತಟ್ಟುವುದು,

    ಉಪಹಾರ ಅಂಗಡಿ, ಮಜ್ಜಿಗೆ ಮಾಡುವುದು, ರಂಗೋಲಿ ಹಾಕುವುದು, ಹೂ ಮಾರುವುದು ಸೇರಿ ಹೀಗೆ ಇನ್ನೂ ಹಲವಾರು ಬಗೆಯ ಹಳ್ಳಿ ಬದುಕಿಗೆ ಮುಖ್ಯವಾದ ಸೊಗಡನ್ನು ವಿದ್ಯಾರ್ಥಿಗಳಿಂದ ಮಾಡಿಸಿ ನೋಡುಗರ ಹುಬ್ಬೇರುವಂತೆ ಮಾಡಲಾಯಿತು.

    ವಿಶೇಷವಾಗಿ ಶಾಲಾ ಶಿಕ್ಷಕರು ಮತ್ತು ಮಕ್ಕಳು ನಿಲುವಂಗಿ ಮತ್ತು ದೋತ್ರ ಉಟ್ಟರೆ, ಶಿಕ್ಷಕಿಯರು, ಹೆಣ್ಣುಮಕ್ಕಳು ಸೀರೆ ತೊಟ್ಟ ಕಂಗೊಳಿಸಿದರು.
    ಗ್ರಾಪಂ ಸದಸ್ಯ ರವಿಚಂದ್ರ ಭಾವಿಕಟ್ಟಿ, ಮುಖ್ಯಶಿಕ್ಷಕ ಫಕೀರಗೌಡ ಮಾ.ಪಾ, ಪ್ರಮುಖರಾದ ದೇವಪ್ಪ ಗೌಡ್ರ, ದೇವರಾಜ ಹಡಪದ, ರವಿ ಗೌಡ್ರ, ರಾಮನಗೌಡ ಪೊ.ಪಾ., ಶಿಕ್ಷಕರಾದ ಸಂಗಯ್ಯ ಹಿರೇಮಠ, ಅನ್ನಪೂರ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts