More

    ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಅತೀ ಅವಶ್ಯ: ಸಭಾಪತಿ ಬಸವರಾಜ ಹೊರಟ್ಟಿ

    ವಿಜಯವಾಣಿ ಸುದ್ದಿಜಾಲ ಗದಗ

    ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಅತೀ ಅವಶ್ಯ. ಸಂಸ್ಕಾರವಂತ ಯವಕರ ಕೊರತೆ ಸಮಾಜವನ್ನು ಕಾಡುತ್ತಿದೆ. ಬೋಧನೆ ಆರಂಭಿಸುವುದಕ್ಕೂ ಮೊದಲು 10 ನಿಮಿಷ ನೈತಿಕ ಶಿಕ್ಷಣ ಬೋಧಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಶಿಕ್ಷಕರಿಗೆ ಸಲಹೆ ನೀಡಿದರು.

    ಪತ್ರಗಾರ ಇಲಾಖೆ, ಕರ್ನಾಟಕ ನಾಮಕರಣ 50 ಮಹೋತ್ಸವ ಸಹಯೋಗದಲ್ಲಿ ಹುಲಕೋಟಿಯ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ಕರ್ನಾಟಕ ಏಕೀಕರಣ ಚಳುವಳಿ ವಿಚಾರ ಸಂಕಿರಣ, ಐತಿಹಾಸಿಕ ದಾಖಲೆಗಳ ಮತ್ತು ಛಾಯಾಚಿತ್ರ ಪ್ರದರ್ಶನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ತಂದೆ ತಾಯಿಗಳು ತಮ್ಮ ಸರ್ವಸ್ವವನ್ನು ತ್ಯಜಿಸಿ ಮಕ್ಕಳ ಭವಿಷ್ಯ ರೂಪಿಸಲು ಬದುಕಿನ ಬಂಡಿ ದೂಡುತ್ತಾರೆ. ಅವರ ಆಶಯಕ್ಕೆ ಧಕ್ಕೆ ಬಾರದಂತೆ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಂಡು ಹೆತ್ತವರ ಹೆಸರು ತರಬೇಕು. ಕಳೆದುಕೊಂಡ ನಂತರ ಹುಡುಕುವುದು ಕಷ್ಟ. ಅದಕ್ಕೂ ಮುಂಚೆಯೇ ಎಚ್ಚರ ವಹಿಸಿಕೊಳ್ಳಬೇಕು. ಸುಶಿಕ್ಷಿತರಾಗಿ ಉತ್ತಮ ಜೀವನ ತಮ್ಮದಾಗಿಸಿ ಕೊಳ್ಳಬೇಕು. ಯಶಸ್ಸು ಸಾಧಿಸಲು ಸತತ ಪ್ರಯತ್ನ ಅಗತ್ಯವಿದೆ‌. ಕಾಲ ಬದಲಾದಂತೆ ಶೈಕ್ಷಣಿಕ ವ್ಯವಸ್ಥೆಯು ಬದಲಾಗುತ್ತಿದೆ. ಬದಲಾವಣೆ ಮಧ್ಯೆಯು ಮಕ್ಕಳು ಪಾಲಕರಿಗೆ ಪೋಷಕರಿಗೆ ಗೌರವ ನೀಡಬೇಕು. ಪತ್ರಗಾರ ಇಲಾಖೆಯು ಮಹತ್ವದ ದಾಖಲೆಗಳನ್ನು ಪ್ರದರ್ಶನಕ್ಕೆ ಇಟ್ಟಿದೆ. ದಾಖಲೆಗಳ ಬಗ್ಗೆ ಅರಿತುಕೊಂಡು ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಹೊರಟ್ಟಿ ತಿಳಿಸಿದರು.

    ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ವೈಚಾರಿಕತೆಯಲ್ಲಿ ಭಿನ್ನಾಭಿಪ್ರಾಯ ಇರಲಿ. ವೈಚಾರಿಕತೆಯನ್ನು ವೈಯಕ್ತಿಕ ದ್ವೇಷಕ್ಕಾಗಿ ಸಾಧಿಸಬಾರದು. ಕೆ.ಎಚ್. ಪಾಟೀಲರ ಜತೆ ಮಾಜಿ ಸಿಎಂ ನಿಜಲಿಂಗಪ್ಪ, ದೆವರಾಜ ಅರಸು ಜತೆ ವೈಚಾರಿಕತೆ ಭಿನ್ನಾಭಿಪ್ರಾಯ ಇದ್ದವು. ಆದರೆ ವೈಯಕ್ತಿಕ ಗೌರವ ಅಧಿಕವಿತ್ತು. ಇದರಿಂದ ವೈಯಕ್ತಿಕ ಬೆಳವಣಿಗೆ ಸಾಧ್ಯ. ಇಂತಹ ಗುಣಗಳನ್ನು ಇಂದಿನ ರಾಜಕಾರಣಿಗಳು ಬೆಳೆಸಿಕೊಳ್ಳಬೇಕು.  ತಂದೆ ತಾಯಿಗಳನ್ನು ದೇವರಂತೆ ಕಾಣಬೇಕು. ನೆರೆ ಹೊರೆ ಯವರನ್ನು ತಮ್ಮವರಂತೆ ಕಾಣಬೇಕು ಎಂದು ಡಿ.ಆರ್. ಪಾಟೀಲ ಹೇಳಿದರು.

    ಪತ್ರಗಾರ ಇಲಾಖೆ ನಿರ್ದೇಶಕ ಗವಿಸಿದ್ದಯ್ಯ ಮಾತನಾಡಿ, ಸಮಾಜದ ಗಣ್ಯ ವ್ಯಕ್ತಿ, ಮಠ ಮಾನ್ಯಗಳಲ್ಲಿ ಹಾಗೂ ರಾಜ್ಯದ ಇತರೆ ಭಾಗದಲ್ಲಿ ಸಿಗುವ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿ, ಸಂರಕ್ಷಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಮೈಸೂರು ಪ್ರಾಂತ, ಮುಂಬೈ ಪ್ರಾಂತ, ಹೈದ್ರಾಬಾದ್ ಪ್ರಾಂತ್ಯಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ. 1.40 ಲಕ್ಷಕ್ಕೂ ಅಧಿಕ ದಾಖಲೆಗಳನ್ನು ರಾಜ್ಯ ಪತ್ರಗಾರ ಇಲಾಖೆ ಸಂರಕ್ಷಿಸುತ್ತಿದೆ. ಸ್ವಾತಂತ್ರ್ಯ ನಂತರ, ಅದಕ್ಕೂ ಪೂರ್ವದ ಮಹತ್ವದ ದಾಖಲೆಗಳನ್ನು ಜನರು ಅವಲೋಕಿಸಿ ಜ್ಞಾನ ವೃದ್ದಿಸಿಕೊಳ್ಳಬೇಕು ಎಂದರು.

    ಪ್ರಾಚಾರ್ಯ ಶಿವಪ್ಪ ಕುರಿ ಮಾತನಾಡಿದರು. ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಡಿ.ಆರ್. ಪಾಟೀಲ ಅವರನ್ನು ಸನ್ಮಾನಿಸಲಾಯಿತು.

    ತಹಸೀಲ್ದಾರ ಶ್ರೀನಿವಾಸ ಕುಲಕರ್ಣಿ, ಜೆ.ಕೆ. ಜಮಾದಾರ, ಮಂಜುಳಾ ಎಲಿಗಾರ ಇತರರು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts