More

    ಬಿಸಿಯೂಟ ವಿತರಣೆಗೆ ಸಮಯ ಬದಲಾವಣೆ ಮಾಡಿ ಶಿಕ್ಷಣ ಇಲಾಖೆ ಆದೇಶ

    ಬೆಂಗಳೂರು: ಶಾಲೆಗಳಲ್ಲಿ ಮಕ್ಕಳಿಗೆ ಕೊಡುತ್ತಿದ್ದ ಬಿಸಿಯೂಟದ ಸಮಯ ಬದಲಾವಣೆ ಆಗಲಿದೆ. ಮಕ್ಕಳ ಸಂಖ್ಯೆ ಅಧಿಕವಿರುವ ಶಾಲೆಗಳಲ್ಲಿ ಮತ್ತು ಒಂದೇ ಅಡುಗೆ ಮನೆ ಇರುವ ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್‌) ಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸಮಯವನ್ನು ಬದಲಿಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

    ಹಿರಿಯರ ವಿಭಾಗದ ವಿದ್ಯಾರ್ಥಿಗಳು ಹಾಗೂ ಕಿರಿಯ ವಿದ್ಯಾರ್ಥಿಗಳು ಒಂದೇ ಬಾರಿ ಊಟಕ್ಕೆ ಬರುವುದರಿಂದ ನೂಕುನುಗ್ಗಲಾಗುತ್ತಿದೆ. ಮಕ್ಕಳು ತಮ್ಮ ತಟ್ಟೆಗಳನ್ನು ತೊಳೆಯುವ ಸಂದರ್ಭದಲ್ಲೂ ನೂಕು ನುಗ್ಗಲಾಗುತ್ತಿದೆ. ಈ ಹಿನ್ನಲೆಯಲ್ಲಿ 1 ರಿಂದ 5ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ 1ರಿಂದ 1.45 ರವರೆಗೆ, 6ರಿಂದ 10ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ 2 ರಿಂದ 2.40 ರವರೆಗೆ ಪ್ರತ್ಯೇಕ ಸಮಯದಲ್ಲಿ ಬಿಸಿಯೂಟ ವಿತರಿಸಲು ಸೂಚಿಸಲಾಗಿದೆ.

    ಬಿಸಿಯೂಟದ ಗುಣಮಟ್ಟ ಪ್ರಮಾಣ, ಪೌಷ್ಠಿಕತೆ, ಸ್ವಚ್ಛತೆ, ಸುರಕ್ಷತೆ ಹಾಗೂ ಕುಂದುಕೊರತೆಗಳ ಕುರಿತು ಸಭೆ ನಡೆಸಬೇಕು. ಶಾಲಾಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ಆಯುಕ್ತರು ತಿಳಿಸಿದ್ದಾರೆ.

    ರೋಪ್​ ವೇ ಮೂಲಕ ಮದ್ವೆ ಮಂಟಪಕ್ಕೆ ಎಂಟ್ರಿಕೊಟ್ಟ ವಧು! ಶೋಕವಾಗದಿರಲಿ ಆಡಂಬರ… ಎಂದ ನೆಟ್ಟಿಗರು, ಸಖತ್​ ವೈರಲ್​ ಆಗ್ತಿದೆ ವಿಡಿಯೋ

    ಎ.ನಾಗತಿಹಳ್ಳಿ ಬಳಿ ಭೀಕರ ಅಪಘಾತ: 5ಕ್ಕೆ ಏರಿದ ಮೃತರ ಸಂಖ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts