More

    ಕಾಂಗ್ರೆಸ್​ ನಾಯಕ ಅಹ್ಮದ್​ ಪಟೇಲ್​ ನಿವಾಸದ ಮೇಲೆ ಇ.ಡಿ.ರೇಡ್​​; ಅಧಿಕಾರಿಗಳಿಂದ ವಿಚಾರಣೆ

    ನವದೆಹಲಿ: ಸ್ಟರ್ಲಿಂಗ್​ ಬಯೋಟೆಕ್​ ಲಿಮಿಟೆಡ್​ ಗ್ರೂಪ್​ನ ಬ್ಯಾಂಕ್​​​ ಸಾಲದ ಹಗರಣಕ್ಕೆ ಸಂಬಂಧಪಟ್ಟಂತೆ ಇಂದು ಜಾರಿ ನಿರ್ದೇಶನಾಲಯ ಕಾಂಗ್ರೆಸ್ ನಾಯಕ ಅಹ್ಮದ್​ ಪಟೇಲ್​ ಅವರ ನಿವಾಸದ ಮೇಲೆ ರೇಡ್​​​ ಮಾಡಿದೆ.

    ಅಹ್ಮದ್​ ಪಟೇಲ್​ ಅವರು ಸೋನಿಯಾ ಗಾಂಧಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಇ.ಡಿ.ಅಧಿಕಾರಿಗಳು ಅಹ್ಮದ್​ ಪಟೇಲ್​ ಮನೆಗೆ ತೆರಳಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಗುಜರಾತ್​ ಮೂಲದ ಸ್ಟರ್ಲಿಂಗ್​ ಬಯೋಟೆಕ್​ ಕಂಪನಿ ಬ್ಯಾಂಕ್​ಗಳಿಂದ ಪಡೆದ ಸಾಲವನ್ನು ವಾಪಸ್​ ಕೊಡದೆ ವಂಚನೆ ಮಾಡಿದ ಪ್ರಕರಣ ಇದಾಗಿದೆ. ಈ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಹ್ಮದ್​ ಪಟೇಲ್​ ಅವರ ಹೆಸರೂ ಥಳುಕು ಹಾಕಿಕೊಂಡಿದ್ದು, ಇದೀಗ ಇ.ಡಿ.ಅಧಿಕಾರಿಗಳು ವಿಚಾರಣೆಗೆ ಮುಂದಾಗಿದ್ದಾರೆ. ಈ ಹಿಂದೆ ಅನಾರೋಗ್ಯದ ಕಾರಣ ಹೇಳಿ ಪಟೇಲ್​ ತನಿಖೆಯಿಂದ ತಪ್ಪಿಸಿಕೊಂಡಿದ್ದರು. ಇದನ್ನೂ ಓದಿ: ಕರೊನಿಲ್​ ತಡೆಗೆ ಆಯುಷ್​ ಇಲಾಖೆ ತಜ್ಞರ ಸಮಿತಿಯಲ್ಲಿರುವ ಮುಸ್ಲಿಮರು ಕಾರಣ? ಇಲ್ಲಿದೆ ನೋಡಿ ವಾಸ್ತವ !

    ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಹ್ಮದ್​ ಪಟೇಲ್​ ಅವರ ಪುತ್ರ ಮತ್ತು ಅಳಿಯನನ್ನು ವಿಚಾರಣೆ ಮಾಡಿದ್ದಾರೆ. ಅವರು ತಮಗೆ ಸ್ಟರ್ಲಿಂಗ್ ಬಯೋಟೆಕ್​ನ ವಂಚನೆಗೆ ಸಂಬಂಧಪಟ್ಟ ಪ್ರಮುಖ ಆರೋಪಿ ನಿತಿನ್​ ಸಂದೇಸಾರಾ ಪರಿಚಯ ಇದ್ದಾರೆ ಎಂಬುದನ್ನು ಹೇಳಿದ್ದರು.

    ಸಂದೇಸಾರಾ ಗ್ರೂಪ್​​ನ ಬಯೋಟೆಕ್​ ಕಂಪನಿಯ ಹಗರಣ, ನೀರವ್​ ಮೋದಿಯ ಪಿಎನ್​ಬಿ ಹಗರಣಕ್ಕಿಂತ ತುಂಬ ದೊಡ್ಡದು ಎಂದು ಇ.ಡಿ. ಕಳೆದ ವರ್ಷ ಹೇಳಿತ್ತು. ಸ್ಟರ್ಲಿಂಗ್​ ಬಯೋಟೆಕ್​ ಲಿಮಿಟೆಡ್​ನಿಂದ ಭಾರತೀಯ ಬ್ಯಾಂಕ್​ಗಳಿಗೆ ಸುಮಾರು 14,500 ಕೋಟಿ ರೂ.ಗೂ ಹೆಚ್ಚು ವಂಚನೆಯಾಗಿದೆ ಎಂದು ಹಗರಣದ ತನಿಖೆ ವೇಳೆ ಕಂಪನಿಯ ಪ್ರಮೋಟರ್​ಗಳಾದ ನಿತಿನ್​ ಸಂದೇಸಾರಾ, ಚೇತನ್​ ಸಂದೇಸಾರಾ ಮತ್ತು ದೀಪ್ತಿ ಸಂದೇಸಾರಾ ಅವರೇ ಬಹಿರಂಗ ಪಡಿಸಿದ್ದಾರೆ. ಇದು ನೀರವ್ ಮೋದಿ ವಂಚನೆಯ ಮೊತ್ತವಾದ 11,400 ಕೋಟಿ ರೂ.ಗಿಂತಲೂ ಹೆಚ್ಚು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊವಿಡ್​-19 ವಿರುದ್ಧ ಹೋರಾಟದಲ್ಲಿ ಸೋತು, ಶರಣಾಗಿದ್ದಾರೆ ಪ್ರಧಾನಿ ಮೋದಿ: ರಾಹುಲ್​ ಗಾಂಧಿ

    2017ರಲ್ಲಿ ಸಂದೇಸಾರಾ ಗ್ರೂಪ್​ನ ಓರ್ವ ನೌಕರನನ್ನು ಇ.ಡಿ. ಬಂಧಿಸಿತ್ತು. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆತನ ಹೇಳಿಕೆಗಳನ್ನು ಪಡೆದುಕೊಂಡಿತ್ತು. ತಾನು ಭಾರಿ ಮೊತ್ತದ ನಗದು ತೆಗೆದುಕೊಂಡು ಕಾಂಗ್ರೆಸ್​ ಮುಖಂಡ ಅಹ್ಮದ್​ ಪಟೇಲ್​ ಅವರ ಪುತ್ತ ಮತ್ತು ಅಳಿಯನ ನಿವಾಸಕ್ಕೆ ಹೋಗಿದ್ದೆ ಎಂಬುದನ್ನು ಆ ನೌಕರ ತಿಳಿಸಿದ್ದ. ಇದನ್ನೂ ಓದಿ:

    ಸದ್ಯ ಅಹ್ಮದ್​ ಪಟೇಲ್​ ಅವರು ತಮ್ಮ ವಿರುದ್ಧ ಕೇಳಿಬಂದ ಆರೋಪವನ್ನು ತಳ್ಳಿ ಹಾಕಿದ್ದಾರೆ. ರಾಜಕೀಯ ದ್ವೇಷದಿಂದ ನನ್ನ ವಿರುದ್ಧ ಪಿತೂರಿ ಮಾಡಲಾಗುತ್ತಿದೆ. ನನಗೂ, ಈ ಪ್ರಕರಣಕ್ಕೂ ಸಂಬಂದ ಇಲ್ಲ ಎಂದಿದ್ದಾರೆ. (ಏಜೆನ್ಸೀಸ್​)

    16ರ ಬಾಲಕಿಗೆ ಲವ್​ ಲೆಟರ್​ ಕೊಟ್ಟ 66ರ ವೃದ್ಧ: ಎಚ್ಚರಿಸಿದ್ರೂ ಸುಮ್ಮನಾಗದ ಆತ ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts