More

    ಆರ್ಥಿಕ ಸಬಲತೆಗೆ ಶಿಕ್ಷಣವೇ ಅಸ್ತ್ರ

    ಕಾರಟಗಿ: ಕಾಂಗ್ರೆಸ್ ನೀಡಿರುವ ಭರವಸೆಗಳನ್ನು ಈಡೇರಿಸುತ್ತ ಬಡವರ ಪರ ಕಾರ್ಯ ನಿರ್ವಹಿಸುತ್ತಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

    ಇದನ್ನೂ ಓದಿ: ಶಿಕ್ಷಣ ಹೆಣ್ಣು ಮಕ್ಕಳಿಗೆ ಸ್ವಾಭಿಮಾನ ಕಲಿಸುತ್ತದೆ

    ತಾಲೂಕಿನ ಮರ್ಲಾನಹಳ್ಳಿ ಹಾಗೂ ಹೊಸಜೂರಟಗಿ ಗ್ರಾಮಗಳಲ್ಲಿ ಕಂದಾಯ ಇಲಾಖೆ ಏರ್ಪಡಿಸಿದ್ದ ಅಕ್ರಮ-ಸಕ್ರಮ 94ಸಿ ಅಡಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

    ಕಾಂಗ್ರೆಸ್ ಸರ್ಕಾರ ಸದಾ ಬಡವರ ಪರವಾದ ಯೋಜನೆಗಳನ್ನು ರೂಪಿಸುತ್ತಿದೆ. ಅಭಯ ಹಸ್ತ ಕಾರ್ಯಕ್ರಮದಲ್ಲಿ ನೀಡಿದ ಭರವಸೆಯನ್ನು ಈಗ ಈಡೇರಿಸುತ್ತಿದ್ದೇನೆ. ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸಮಾಡುತ್ತಿದ್ದ ಬಡಕುಟುಂಬಗಳಿಗೆ ಹಕ್ಕುಪತ್ರ ನೀಡುವ ಸಲುವಾಗಿ ಕಂದಾಯ ಇಲಾಖೆಯಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ 94ಸಿ ಅಡಿಯಲ್ಲಿ ಅರ್ಜಿ ಕರೆಯಲಾಗಿತ್ತು.

    ಮರ್ಲಾನಹಳ್ಳಿ ಹಾಗೂ ಹೊಸಜೂರಟಗಿ ಗ್ರಾಮಗಳಿಂದ 321ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 221ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಬಾಕಿ 100ಕುಟುಂಬಗಳ ಖಾಲಿ ನಿವೇಶನವಿದ್ದು, ಕಾನೂನು ತೊಡಕು ಎದುರಾಗಿದ್ದರಿಂದ ಹಕ್ಕುಪತ್ರ ನೀಡಲಾಗುತ್ತಿಲ್ಲ.

    ಆ ಜಾಗದಲ್ಲಿ ಮನೆ, ಶೆಡ್ ಅಥವಾ ಗುಡಿಸಲು ನಿರ್ಮಿಸಿಕೊಂಡರೆ ಮಾತ್ರ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತದೆ. ಕಳೆದ 40ವರ್ಷಗಳ ಬೇಡಿಕೆಯನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ವರ್ಷದೊಳಗೆ ಈಡೇರಿಸಿದೆ ಎಂದರು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ. ಅವರು ಉತ್ತಮ ಉದ್ಯೋಗ ಕಂಡುಕೊಂಡರೆ ಪ್ರತಿ ಕುಟುಂಬ ಆರ್ಥಿಕವಾಗಿ ಸಬಲಗೊಳ್ಳಲಿದೆ ಎಂದು ತಿಳಿಸಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ಪ್ರಮುಖರಾದ ಕೆ.ಸಿದ್ದನಗೌಡ, ಚನ್ನಬಸಪ್ಪ ಸುಂಕದ್, ಸೋಮನಾಥ ದೊಡ್ಮನಿ, ನಾಗರಾಜ ಅರಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts