More

    ಕ್ರಿಮಿನಲ್​ಗಳ ವಿರುದ್ಧ ನಿಯಮ ಬಿಗಿ- ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದ ಚುನಾವಣಾ ಆಯೋಗ

    ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಗೂ ಮೊದಲೇ ಭಾರತದ ಚುನಾವಣಾ ಆಯೋಗ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದ್ದು, ಕ್ರಿಮಿನಲ್​ಗಳು ಚುನಾವಣೆಯಲ್ಲಿ ಪಾಲ್ಗೊಳ್ಳುವುದನ್ನು ತಡೆಯಲು ನಿಯಮ ಬಿಗಿಗೊಳಿಸಿದೆ. ಇದರಂತೆ, ಅಪರಾಧ ಹಿನ್ನೆಲೆ ಇದ್ದರೆ ಪ್ರತಿಯೊಬ್ಬ ಅಭ್ಯರ್ಥಿಯೂ ಅದನ್ನು ಸಾರ್ವಜನಿಕರಿಗೆ ಗೊತ್ತುಮಾಡಿಸಬೇಕು. ಅದೇ ರೀತಿ ಪಕ್ಷಗಳು ಅಂಥವರಿಗೆ ಟಿಕೆಟ್ ಕೊಟ್ಟರೂ ಅವುಗಳು ಕೂಡ ಅದನ್ನು ಪ್ರಕಟಿಸಬೇಕು.

    ಆಯೋಗವು ಶುಕ್ರವಾರ ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಕ್ರಮವು ನೈತಿಕತೆಯನ್ನು ಜಾಗೃತಗೊಳಿಸುವ ಕ್ರಮವಾಗಿದೆ. ಮತದಾರರಿಗೆ ಈ ಕುರಿತು ಮಾಹಿತಿ ಇದ್ದಾಗ, ಅಭ್ಯರ್ಥಿಗಳ ಆಯ್ಕೆ ವಿಚಾರ ಸುಲಭವಾಗುತ್ತದೆ ಮತ್ತು ಎಲೆಕ್ಟೋರಲ್ ಡೆಮಾಕ್ರಸಿ ಅತ್ಯುತ್ತಮವಾಗಿ ಕೆಲಸ ಮಾಡಲಿದೆ.

    ಇದನ್ನೂ ಓದಿ: ಶ್ರೀಲಂಕಾದಲ್ಲಿ ನನ್ನ ಕ್ಯಾಸಿನೊ ಇರೋದು ನಿಜ, ಆದರೆ ಅದು ಅಕ್ರಮವಲ್ಲ, ಸಕ್ರಮ’ ಎಂದ ಜಮೀರ್

    ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಪತ್ರಿಕೆ ಅಥವಾ ಟೆಲಿವಿಷನ್ ಮೂಲಕ ಅಪರಾಧ ಹಿನ್ನೆಲೆಯನ್ನು ಬಹಿರಂಗಪಡಿಸಲೇ ಬೇಕು. ನಾಮಪತ್ರ ಹಿಂಪಡೆಯುವ ದಿನಾಂಕಕ್ಕೆ ನಾಲ್ಕು ದಿನ ಇರುವಾಗ ಮೊದಲ ಪ್ರಕಟಣೆಯನ್ನು ನೀಡಬೇಕು. ಇದಾಗಿ, ನಾಮಪತ್ರ ಹಿಂಪಡೆಯುವ ದಿನಾಂಕದ ನಂತರ ಐದರಿಂದ ಎಂಟನೇ ದಿನದ ನಡುವೆ ಪ್ರಕಟಿಸಬೇಕು. ಇದಾಗಿ ಕೊನೆಯದಾಗಿ 9ನೇ ದಿನದಿಂದ ಪ್ರಚಾರದ ಕೊನೆಯ ದಿನದ ಒಳಗಾಗಿ ಪ್ರಕಟಿಸಬೇಕು. (ಏಜೆನ್ಸೀಸ್)

    ಹತ್ತು ವರ್ಷದೊಳಗೆ ಕೇರಳವನ್ನು ಇಸ್ಲಾಮಿಕ್ ಸ್ಟೇಟ್ ಮಾಡಬಹುದು – ಧರ್ಮಬೋಧಕ ಮುಜಾಹಿದ್ ಬಲುಸ್ಸೇರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts