More

    ರೋಗಿಗಳ ಆರೈಕೆಯಲ್ಲಿ ವೈದ್ಯರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲಿ

    ಗಂಗಾವತಿ: ರೋಗಿಗಳ ಚಿಕಿತ್ಸೆ ಮತ್ತು ಆರೈಕೆಯಲ್ಲಿ ವೈದ್ಯರು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕಿದ್ದು, ದೈವತ್ವ ನಿರೂಪಿಸಿಕೊಳ್ಳುವಂತೆ ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ಸಲಹೆ ನೀಡಿದರು.

    ನಗರದ ಐಎಂಎ ಹಾಲ್‌ನಲ್ಲಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಘಟಕದಿಂದ ಶನಿವಾರ ಆಯೋಜಿಸಿದ್ದ ವೈದ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ರೋಗಿಗಳಿಗೆ ವೈದ್ಯರು ದೈವ ಸಮಾನವಾಗಿದ್ದು, ತಾರತಮ್ಯನೀತಿಗೆ ಅವಕಾಶ ನೀಡಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸಂಖ್ಯೆ ಕಡಿಮೆಯಿದ್ದು, ಸಾರ್ವಜನಿಕರಿಂದ ತೊಂದರೆ ಎದುರಾದರೆ ಪೊಲೀಸ್ ಇಲಾಖೆ ರಕ್ಷಣೆ ನೀಡಲು ಸದಾ ಸಿದ್ಧ ಎಂದರು.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ವೈದ್ಯಾಧಿಕಾರಿ ಡಾ.ಎಚ್.ಟಿ.ಲಿಂಗರಾಜ್ ಮಾತನಾಡಿ, ವೈದ್ಯರು ಒಗ್ಗಟ್ಟಾಗಿ ಕರ್ತವ್ಯ ನಿರ್ವಹಿಸಬೇಕಿದ್ದು, ಸಾರ್ವಜನಿಕರೊಂದಿಗೆ ಸೌಜನ್ಯ ರೀತಿಯಲ್ಲಿ ವರ್ತಿಸಬೇಕು. ದ್ವೇಷ ಮನೋಭಾವನೆ ಕೈಬಿಟ್ಟು ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.

    ಜಿಲ್ಲಾ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಈಶ್ವರ ಸವಡಿ ಮಾತನಾಡಿದರು. ಗೌರವಾಧ್ಯಕ್ಷ ಡಾ.ಆನಂದ ಗೋಟೂರು, ಕಾರ್ಯದರ್ಶಿ ಡಾ.ನೇತ್ರಾ ಹಿರೇಮಠ, ಖಜಾಂಚಿ ಡಾ.ಶಿವಪ್ರಸಾದ, ಉಪಾಧ್ಯಕ್ಷೆ ಡಾ.ಕಾವೇರಿ, ಸದಸ್ಯ ಡಾ.ನಂದಕುಮಾರ, ತಾಲೂಕು ವೈದ್ಯಾಧಿಕಾರಿ ಡಾ.ಶರಣಪ್ಪ ಚಕೋಟಿ, ವೈದ್ಯರಾದ ಡಾ. ಪ್ರಕಾಶ, ಡಾ.ರಚನಾ, ಡಾ.ರಾಮಕೃಷ್ಣ, ಡಾ.ವೆಂಕಟೇಶ ಡಾ.ರವೀಂದ್ರ, ಡಾ.ಎಸ್.ಶರಣಬಸವ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts