More

    ಎಸ್​.ಕೆ.ಮಿಶ್ರಾ ಇನ್ನೂ ಒಂದು ವರ್ಷ ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ಮುಂದುವರಿಕೆ

    ನವದೆಹಲಿ: ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿರುವ ಎಸ್​.ಕೆ. ಮಿಶ್ರಾ ಇನ್ನೂ ಒಂದು ವರ್ಷದ ಅವಧಿಗೆ ಮುಂದುವರಿದಿದ್ದಾರೆ. ವಿತ್ತ ಸಚಿವಾಲಯ ಈ ಬಗ್ಗೆ ಆದೇಶ ಹೊರಡಿಸಿದೆ. 1984ರ ಬ್ಯಾಚ್​ನ ಐಆರ್​ಎಸ್​ ಅಧಿಕಾರಿ ಆಗಿರುವ ಎಸ್​.ಕೆ. ಮಿಶ್ರಾ, 2018ರ ನ. 19ರಂದು ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ನೇಮಕಗೊಂಡಿದ್ದರು.

    ಇದೀಗ ನ. 13ರಂದು ಮತ್ತೊಂದು ಆದೇಶ ಹೊರಡಿಸಲಾಗಿದ್ದು ಅದರಲ್ಲಿ, ರಾಷ್ಟ್ರಪತಿಯವರು ಸಂಜಯ್​ ಕುಮಾರ್ ಮಿಶ್ರಾ ಅವರನ್ನು ಜಾರಿ ನಿರ್ದೇಶನಾಲಯದ ಪ್ರಿನ್ಸಿಪಾಲ್​ ಸ್ಪೆಷಲ್ ಡೈರೆಕ್ಟರ್ ಹುದ್ದೆಯಲ್ಲಿ ಅವರು ಅಧಿಕಾರ ಸ್ವೀಕರಿಸಿದಂದಿನಿಂದ ಮೂರು ವರ್ಷಗಳ ಅವಧಿಗೆ ನೇಮಿಸಲು ಕೋರಿದ್ದಾರೆ ಎಂದು ತಿಳಿಸಲಾಗಿದೆ.

    ಮಿಶ್ರಾ ಅವರು ನ. 18ರಂದು ನಿವೃತ್ತರಾಗಬೇಕಿತ್ತು. ಆದರೆ ಈ ಆದೇಶದ ಪ್ರಕಾರ ಅವರು, ನಿವೃತ್ತಿ ಅವಧಿ ಬಳಿಕವೂ ಒಂದು ವರ್ಷದ ವಿಸ್ತರಣೆ ಸಿಕ್ಕ ಪ್ರಥಮ ಇ.ಡಿ. ನಿರ್ದೇಶಕ ಎನಿಸಿಕೊಂಡಿದ್ದಾರೆ. ಇವರಿಗೂ ಮೊದಲು ಕರ್ನಲ್ ಸಿಂಗ್ ನಿರ್ದೇಶಕರಾಗಿದ್ದು, ಅವರು 2018ರ ಅಕ್ಟೋಬರ್ 27ರಂದು ನಿವೃತ್ತರಾಗಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts