More

    ವಿಕಾಸ್​ ದುಬೆ ಸಾವಿಗೆ ಆಘಾತ ಮತ್ತು ಅಧಿಕ ರಕ್ತಸ್ರಾವ ಕಾರಣ

    ನವದೆಹಲಿ: ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಗುಂಡೇಟು ತಿಂದ ಕುಖ್ಯಾತ ಪಾತಕಿ ವಿಕಾಸ್​ ದುಬೆ, ಅಧಿಕ ರಕ್ತಸ್ರಾವ ಮತ್ತು ಆಘಾತದಿಂದ ಮೃತಪಟ್ಟಿದ್ದಾಗಿ ಆತನ ಮರಣೋತ್ತರ ವರದಿ ತಿಳಿಸಿದೆ.

    ಮಧ್ಯಪ್ರದೇಶದ ಉಜ್ಜೈನ್​ನಲ್ಲಿ ಬಂಧಿಸಲ್ಪಟ್ಟಿದ್ದ ವಿಕಾಸ್​ ದುಬೆ ಅನ್ನು ಕಾನ್ಪುರಕ್ಕೆ ಕರೆತರುವ ಮಾರ್ಗದಲ್ಲಿ ಆತನಿದ್ದ ವಾಹನ ಆಕಸ್ಮಿಕವಾಗಿ ಪಲ್ಟಿ ಹೊಡೆದಾಗ ಅದರಿಂದ ಹೊರಜಿಗಿದು ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೆ, ಪಲ್ಟಿ ಹೊಡೆದ ವಾಹನದ ಹಿಂದಿದ್ದ ವಾಹನದಲ್ಲಿ ಬರುತ್ತಿದ್ದ ವಿಶೇಷ ಕಾರ್ಯಪಡೆ ಪೊಲೀಸರು ಈತನನ್ನು ಬೆನ್ನಟ್ಟಿದ್ದರು. ತಪ್ಪಿಸಿಕೊಳ್ಳುವ ಯತ್ನದಲ್ಲಿ ಪೊಲಿಸರಿಂದಲೇ ಕಸಿದುಕೊಂಡಿದ್ದ ಬಂದೂಕಿನಿಂದ ದುಬೆ ಗುಂಡಿನ ದಾಳಿ ನಡೆಸಿದ್ದ. ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಮೂರು ಗುಂಡುಗಳು ದುಬೆಯ ದೇಹವನ್ನು ಹೊಕ್ಕಿದ್ದವು.

    ಇದನ್ನೂ ಓದಿ: ಜಾಮೀನು ಪಡೆದು ಅತ್ಯಾಚಾರ ಸಂತ್ರಸ್ತೆ, ತಾಯಿಯನ್ನು ಟ್ರ್ಯಾಕ್ಟರ್‌ ಹರಿಸಿ ಕೊಲೆ ಮಾಡಿದ!

    ಒಂದು ಗುಂಡು ಆತನ ಬಲ ಹೆಗಲಿಗೆ ಹೊಕ್ಕಿದ್ದರೆ, ಇನ್ನೆರಡು ಗುಂಡುಗಳು ಆತನ ಎದೆಯನ್ನು ಹೊಕ್ಕಿದ್ದವು. ಆ ಗಾಯಗಳಲ್ಲದೆ, ಆತನ ತಲೆ, ಮೊಣಕೈ, ಪಕ್ಕೆಲುಬು ಮತ್ತು ಹೊಟ್ಟೆಯಲ್ಲಿ ಕೂಡ ಗಾಯಗಳಾಗಿದ್ದವು. ಇದರಿಂದ ತೀವ್ರ ರಕ್ತಸ್ರಾವವಾಗಿ ಆತ ಮೃತಪಟ್ಟಿದ್ದಾಗಿ ವೈದ್ಯರು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಿದ್ದಾರೆ.

    ವಿಕಾಸ್​ ದುಬೆಯ ಎನ್​ಕೌಂಟರ್​ ನೈಜವೋ ಅಥವಾ ನಕಲಿಯೋ ಎಂಬುದನ್ನ ಖಚಿತಪಡಿಸಿಕೊಳ್ಳುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ಏಕ ಸದಸ್ಯ ನ್ಯಾಯಾಂಗ ಸಮಿತಿಯನ್ನು ರಚಿಸಿದೆ. ಪ್ರತಿಪಕ್ಷಗಳು ಮಾತ್ರ ದುಬೆಯ ರಾಜಕೀಯ ಸಂಪರ್ಕಗಳನ್ನು ರಕ್ಷಿಸುವ ಸಲುವಾಗಿ ರಾಜ್ಯ ಸರ್ಕಾರ ನಕಲಿ ಎನ್​ಕೌಂಟರ್​ ಮಾಡಿಸಿದೆ ಎಂದು ಬೊಬ್ಬೆ ಹೊಡೆಯುತ್ತಿವೆ.

    ಈ ಮಹಿಳೆ ಬರೋಬ್ಬರಿ 130 ದಿನ ಕರೊನಾ ವಿರುದ್ಧ ಹೋರಾಡಿದರು…; ಕೋಮಾಕ್ಕೆ ಜಾರಿ ಬದುಕಿ ಬಂದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts