More

    ದುಬೈ ರಸ್ತೆಯಲ್ಲಿ ಬಿಡಿಸಿದ ಹೂವಿನ ‘ಹಾರ್ಟ್‌’, ಭಾರತೀಯರ ಹೃದಯ ತಟ್ಟಿತು!

    ದುಬೈ: ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಶುರು ಮಾಡಿಲ್ಲ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನು ಕರೆತರಲು ಕೆಲವೊಂದು ವಿಶೇಷ ವಿಮಾನಗಳ ವ್ಯವಸ್ಥೆ ಮಾಡಿದರೂ ಅದೆಷ್ಟೋ ಜನರಿಗೆ ಅಲ್ಲಿರುವ ಕೆಲಸವನ್ನು ಬಿಟ್ಟು ತವರಿಗೆ ವಾಪಸ್‌ ಬರುವುದು ಅಸಾಧ್ಯದ ಮಾತೇ. ಏಕೆಂದರೆ ಇಲ್ಲಿ ಒಮ್ಮೆ ಬಂದುಬಿಟ್ಟರೆ ಮತ್ತೆ ವಾಪಸ್‌ ಕೆಲಸಕ್ಕೆ ಮರಳುವುದು ಕಷ್ಟ.

    ಇಂಥದ್ದೇ ಒಂದು ಸಂಕಷ್ಟದಲ್ಲಿ ಸಿಲುಕಿರುವ ಭಾರತ ಮೂಲದ ರಮೇಶ್ ರಂಗರಾಜನ್ ಗಾಂಧಿ. ದುಬೈನಲ್ಲಿ ಕಾರ್ಮಿಕನಾಗಿ ದುಡಿಯುತ್ತಿರುವ ರಮೇಶ್‌ ದಿನವೂ ಅಲ್ಲಿಯ ರಸ್ತೆಯನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರೆ. ಕರೊನಾ ಹಾವಳಿಯಿಂದ ಅವರಿಗೆ ಭಾರತಕ್ಕೆ ಮರಳುವುದು ಕಷ್ಟವಾಗಿದೆ. ಆದರೆ ಮನೆಯ ನೆನಪು ಸದಾ ಕಾಡುತ್ತಲೇ ಇದೆ.

    ಇದನ್ನೂ ಓದಿ: ಬೆಣ್ಣೆ ಕದಿಯೋದೇ ಇವ್ರ ಕೆಲ್ಸ- ಕಾರಣ ಕೇಳದ್ರೆ ಅಚ್ಚರಿ ಪಡ್ತೀರಾ

    ಭಾರತದಲ್ಲಿ ಇರುವ ಅವರ ಪತ್ನಿಯನ್ನು ಸದಾ ನೆನಪಿಸಿಕೊಳ್ಳುವ ರಮೇಶ್‌ ಅವರಿಗೆ, ರಸ್ತೆಯ ಮೇಲೆ ಬಿದ್ದಿರುವ ಹೂವುಗಳ ರಾಶಿಯನ್ನು ಕಂಡು ಪತ್ನಿಯ ನೆನಪಾಗಿದೆ. ತಡ ಮಾಡದ ಅವರು ಆ ಹೂವುಗಳ ದಶಗಳನ್ನು ಆಯ್ದುಕೊಂಡು ಅದರಿಂದ ಹಾರ್ಟ್‌ಶೇಪ್‌‌ ಮಾಡಿದ್ದಾರೆ.

    ಅಲ್ಲಿಯೇ ಹೋಗುತ್ತಿದ್ದ ನೆಸ್ಮಾ ಫರಾಹತ್ ಎಂಬ ಮಹಿಳೆಗೆ ಇದು ತುಂಬಾ ಕುತೂಹಲವಾಗಿ ಕಂಡಿದೆ. ತಮ್ಮ ಕೆಲಸದ ನಡುವೆಯೂ ಸಿಕ್ಕ ಹೂವಿನಲ್ಲಿಯೇ ಹೃದಯಾಕಾರವನ್ನು ರಚಿಸಿರುವ ಹೌಸ್‌ಕೀಪರ್‌ ರಮೇಶ್‌ ಅವರ ಈ ರಚನೆ ನೆಸ್ಮಾ ಅವರ ಹೃದಯವನ್ನು ಗೆದ್ದುಬಿಟ್ಟಿದೆ.

    ತಡ ಮಾಡದ ಅವರು ಅದರ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ನಂತರ ಹೀಗೆ ಹೃದಯ ರಚನೆ ಮಾಡಿರುವುದು ಏಕೆ ಎಂದು ರಮೇಶ್‌ ಅವರನ್ನು ಕೇಳಿದ್ದಾರೆ. ಅದಕ್ಕೆ ರಮೇಶ್‌. ನನ್ನ ಪತ್ನಿ ಭಾರತದಲ್ಲಿ ನೆಲೆಸಿದ್ದಾಳೆ. ಹೂವು ನೋಡಿದಾಗಲೆಲ್ಲ ಆಕೆಯ ನೆನಪಾಗುತ್ತದೆ. ಆಕೆಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಅದಕ್ಕಾಗಿ ಈ ಹೃದಯ ಬಿಡಿಸಿ ಅದರಲ್ಲಿ ಅವಳನ್ನು ನೋಡುತ್ತಿದ್ದೇನೆ’ ಎಂದಿದ್ದಾರೆ.

    ಈ ಮಾತು ನೆಸ್ಮಾ ಅವರಿಗೆ ತುಂಬಾ ಹಿಡಿಸಿಬಿಟ್ಟಿದೆ. ಫೋಟೋ ಕ್ಲಿಕ್ಕಿಸುವ ಜತೆಗೆ ರಮೇಶ್‌ ಅವರ ಮಾತನ್ನೂ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ. ‘ನೋವಿನಲ್ಲಿಯೂ ಖುಷಿಯ ಕ್ಷಣ’ ಕ್ಯಾಪ್ಷನ್‌ ನೀಡಿದ್ದಾರೆ.

    ಈ ಫೋಟೋ ದುಬೈಗಿಂತಲೂ ಹೆಚ್ಚಾಗಿ ಭಾರತದಲ್ಲಿ ಸಾಕಷ್ಟು ವೈರಲ್‌ ಆಗಿದೆ. ಈ ಹಾರ್ಟ್‌ ಅನ್ನು ರಮೇಶ್‌ ಅವರ ಪತ್ನಿ ನೋಡಿದರೋ ಇಲ್ಲವೋ ಗೊತ್ತಿಲ್ಲ. ಆದರೆ ರಮೇಶ್‌ ರಚಿಸಿರುವ ಹೃದಯ ಭಾರತೀಯರ ಹೃದಯವನ್ನಂತೂ ತಟ್ಟಿಬಿಟ್ಟಿದೆ. ಇದಂತೂ ಈಗ ಸಿಕ್ಕಾಪಟ್ಟೆ ಶೇರ್‌ ಆಗುತ್ತಿದ್ದು, ರಮೇಶ್‌ ಅವರಿಗೆ ಅವರ ಪತ್ನಿ ಬೇಗ ಸಿಗಲಿ ಎಂದು ಸಹಸ್ರಾರು ಕಮೆಂಟಿಗರು ತಿಳಿಸಿದ್ದಾರೆ. (ಏಜೆನ್ಸೀಸ್‌)

    ‘ಬರ್ತಡೇ ಬಾಯ್‌’ ಸಂಜಯ್‌ ದತ್‌ಗೆ ಶಾಕ್‌: ಹೈಕೋರ್ಟ್‌ಗೆ ಹೋದ ರಾಜೀವ್‌ಗಾಂಧಿ ಹಂತಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts